spot_img
Thursday, May 7, 2026
spot_img

ಕೋವಿಡ್ ನಿರ್ವಹಣೆ-ತುರ್ತು ಅವಶ್ಯಕತೆ ಪೂರೈಸಲು ತಕ್ಷಣ ಕ್ರಮ-ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ


ಕುಂದಾಪುರ, ಮೇ.24: ಕೋವಿಡ್ ನಿರ್ವಹಣೆಯಲ್ಲಿ ಎಲ್ಲರೂ ಸಾಂಘಿಕವಾಗಿ ಕೆಲಸ ಮಾಡುತ್ತಿದ್ದಾರೆ. ಜನರೂ ಉತ್ತಮ ಸಹಕಾರ ನೀಡುತ್ತಿದ್ದಾರೆ. ಕ್ಷೇತ್ರಕ್ಕೆ ತುರ್ತಾಗಿ ಆಶಾಕಾರ್ಯಕರ್ತೆರಿಗೆ ನೀಡಲು ಪಲ್ಸ್ ಆಕ್ಸಿಮೀಟರ್, ಥರ್ಮಲ್ ಸ್ಕ್ಯಾನಿಂಗ್ ಖರೀದಿಗೆ ಶಾಸಕರ ನಿಧಿಯ ಅನುದಾನದಿಂದ ಖರೀದಿಸಲಾಗುವುದು. ಹಾಗೆಯೇ 100 ಬೆಡ್‍ಗಳ ಕೊವಿಡ್ ಕೇರ್ ಸೆಂಟರ್ ಸನ್ನದ್ದಗೊಳಿಸಲಾಗುವುದು ಎಂದು ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.


ಅವರು ಸೋಮವಾರ ಕುಂದಾಪುರ ತಾ.ಪಂ.ಸಭಾಂಗಣದಲ್ಲಿ ಕುಂದಾಪುರ ವಿಧಾನಸಭಾ ವ್ಯಾಪ್ತಿಯಲ್ಲಿ ಕೋವಿಡ್ ನಿರ್ವಹಣೆಯ ಕುರಿತು ಸಭೆ ನಡೆಸಿ ಮಾತನಾಡಿದರು.

ಜನತೆ ಯಾವುದೇ ಕಾರಣಕ್ಕೂ ಜವಾಬ್ದಾರಿಯಿಂದ ಮೈಮರೆಯ ಬಾರದು, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಎಚ್ಚರಿಕೆಯಿಂದ ಇರಬೇಕು ಎಂದು ಕ್ಷೇತ್ರದ ಜನತೆಗೆ ಕಿವಿಮಾತು ಹೇಳಿದರು.


ಕುಂದಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ 37 ಪಂಚಾಯಿತಿ, ಒಂದು ಪುರಸಭೆ, ಒಂದು ಪಟ್ಟಣ ಪಂಚಾಯಿತಿ ಇದ್ದು, ಟಾಸ್ರ್ಕ್‍ಪೋರ್ಸ್ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಕೋವಿಡ್‍ನ್ನು ಪರಿಣಾಮಕಾರಿಯಾಗಿ ನಿರ್ಭಂಧಿಸಲು ಕ್ರಮಗಳನ್ನು ಕೈಗೊಳ್ಳಿ, ಅಗತ್ಯ ಸಹಕಾರವನ್ನು ಸರಕಾರ ಹಾಗೂ ದಾನಿಗಳ ಮೂಲಕ ಕೊಡಿಸಲಾಗುವುದು ಎಂದು ಅವರು ಹೇಳಿದರು.


ದಿನಕ್ಕೆ 480ಕ್ಕೂ ಹೆಚ್ಚು ಗಂಟಲು ದ್ರವ ಪರೀಕ್ಷೆ ಮಾಡಲಾಗುತ್ತದೆ. ಪಾಸಿಟಿವಿಟಿ ಪ್ರಮಾಣ 24 ಆಗಿದೆ. ಕೋವಿಡ್ ಲಕ್ಷಣ ಇರುವವರು, ಹಾಗೂ ಈಗಾಗಲೇ ಪಾಸಿಟಿವ್ ಇದ್ದವರ ಪ್ರಾಥಮಿಕ ಸಂಪರ್ಕಿತರನ್ನು ಪರೀಕ್ಷೆ ಮಾಡಲಾಗುತ್ತಿದೆ. ಕುಂದಾಪುರ ಕ್ಷೇತ್ರದಲ್ಲಿ ಎಪ್ರಿಲ್ 1ರಿಂದ 51 ಸಾವು ಸಂಭವಿಸಿದೆ. ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ 14 ಸಾವು ಸಂಭವಿಸಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು.


ಕೋವಿಡ್ ನಿರ್ಭಂಧಿಸುವಲ್ಲಿ ಪಾಸಿಟಿವ್ ಇರುವ ಮನೆಗಳಿಗೆ ಪಟ್ಟಿ ಕಟ್ಟುವುದು, ಮನೆ ಆರೈಕೆಯಲ್ಲಿ ಇದ್ದವರು ಗಂಭೀರ ಸ್ಥಿತಿಯಲ್ಲಿದ್ದು ಆಸ್ಪತ್ರೆಗೆ ಬರಲು ಒಪ್ಪದಲ್ಲಿ ಪೊಲೀಸರ ಸಮ್ಮುಖದಲ್ಲಿ ಆಸ್ಪತ್ರೆಗೆ ದಾಖಲಿಸಿ ಎಂದು ಸೂಚಿಸಲಾಯಿತು. ಆಶಾ ಕಾರ್ಯಕರ್ತೆಯರಿಗೆ ಪಲ್ಸ್ ಆಕ್ಸಿ ಮೀಟರ್, ಥರ್ಮಲ್ ಸ್ಕ್ಯಾನರ್ ತುರ್ತಾಗಿ ಅವಶ್ಯಕತೆ ಇದೆ ಎಂದು ಶಾಸಕರ ಗಮನಕ್ಕೆ ತರಲಾಯಿತು.


ಕುಂದಾಪುರದ ಸರ್ಕಾರಿ ಕೋವಿಡ್ ಆಸ್ಪತ್ರೆಯ ಬಗ್ಗೆ ಮಾಹಿತಿ ನೀಡಿದ ಕೋವಿಡ್ ನೋಡೆಲ್ ಅಧಿಕಾರಿ ಡಾ|ನಾಗೇಶ್ ಕುಂದಾಪುರ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ 95 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 6 ಮಂದಿ ಐಸಿಯು, ಒಬ್ಬರು ವೆಂಟಿಲೆಟರ್‍ನಲ್ಲಿದ್ದಾರೆ. ಈ ತನಕ 708 ಜನ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದರು.


ಈ ಸಂದರ್ಭದಲ್ಲಿ ಉಪವಿಭಾಗಧಿಕಾರಿ ಕೆ.ರಾಜು, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್, ಡಿವೈಎಸ್‍ಪಿ ಶ್ರೀಕಾಂತ್, ಉಡುಪಿ ಸುಧಾಕರ ನಾಯಕ್, ತಾಲೂಕು ಆರೋಗ್ಯಾಧಿಕಾರಿ ಡಾ|ನಾಗಭೂಷಣ ಉಡುಪ, ತಹಶೀಲ್ದಾರರು ಉಪಸ್ಥಿತರಿದ್ದರು.


ಕುಂದಾಪುರ ಆಸ್ಪತ್ರೆಗೆ ಮಕ್ಕಳ ತಜ್ಞರ ಕೊರತೆ
ಕುಂದಾಪುರದ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರು ಇಲ್ಲ, ಎರಡು ಹುದ್ದೆ ಇದ್ದು ಒಬ್ಬರು ರಜೆಯಲ್ಲಿದ್ದಾರೆ. ಇನ್ನೊಬ್ಬರು ಕೋಟ ಆಸ್ಪತ್ರೆಗೆ ನಿಯುಕ್ತರಾಗಿದ್ದಾರೆ. ಹಾಗೂ ಕುಂದಾಪುರ ಆಸ್ಪತ್ರೆಗೆ ಅಂಬುಲೆನ್ಸ್‍ಗೆ ಸ್ಯಾನಿಟೈಸ್ ಮಾಡಲು ಪಾಗಿಂಗ್ ಯಂತ್ರದ ಅವಶ್ಯಕತೆ ಇದೆ ಎಂದು ಡಾ|ನಾಗೇಶ್ ಶಾಸಕರ ಗಮನಕ್ಕೆ ತಂದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!