Thursday, November 21, 2024

ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪಲ್ಸ್ ಅಕ್ಸಿಮೀಟರ್ ಕೊಡುಗೆ


ಕುಂದಾಪುರ: ಕೋವಿಡ್ ಮಹಾಮಾರಿಯನ್ನು ನಿಯಂತ್ರಿಸುವಲ್ಲಿ ಜನರಿಗೆ ಸಹಕಾರಿಯಾಗಬಲ್ಲ ಪಲ್ಸ್ ಅಕ್ಸಿಮೀಟರ್ ಸಲಕರಣೆಯನ್ನು ಕುಂದಾಪುರ ತಾಲೂಕಿನ ರೋಟರಿ ವಲಯ 1ರ ಅಡಿಯಲ್ಲಿ ಬರುವ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಿತರಿಸಲಾಯಿತು.


ಇದಕ್ಕೆ ಪೂರ್ವಭಾವಿಯಾಗಿ ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರೋಟರಿ ಮಾಜಿ ಜಿಲ್ಲಾ ಗವರ್ನರ್ ಅಭಿನಂದನ್ ಶೆಟ್ಟಿಯವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬೇಕಾಗುವ ಪಲ್ಸ್ ಅಕ್ಸಿಮೀಟರ್‌ಗಳನ್ನು ತಾಲೂಕು ಆರೋಗ್ಯ ಅಧಿಕಾರಿ ಡಾ|ನಾಗಭೂಷಣ ಉಡುಪರಿಗೆ ಹಸ್ತಾಂತರಿಸಲಾಯಿತು.


ಇದಕ್ಕೆ ಸಂಬಂಧಿಸಿದಂತೆ ಕುಂದಾಪುರ ರೋಟರಿ ದಕ್ಷಿಣದ ಮಾಜಿ ಅಧ್ಯಕ್ಷರಾದ ಗಿಳಿಯಾರು ಶ್ರೀಧರ ಶೆಟ್ಟಿಯವರು 7 ಪಲ್ಸ್ ಅಕ್ಸಿಮೀಟರ್‌ನ್ನು ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸನ್ಮಾನ್ ಶೆಟ್ಟಿಯವರಿಗೆ ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರ ಸಮ್ಮುಖದಲ್ಲಿ ಹಸ್ತಾಂತರಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!