spot_img
Wednesday, January 22, 2025
spot_img

ಆರೋಗ್ಯ ಸೇವೆ ಬಲಪಡಿಸಲಿ.

ಸುಬ್ರಹ್ಮಣ್ಯ ಪಡುಕೋಣೆ
ಸಂಪಾದಕ

ಕರೋನಾ ಮಹಾ ಮಾರಿಯನ್ನು ಮೈಮೇಲೆಳೆದುಕೊಂಡ ಭಾರತ ಅದರಿಂದ ಹೊರಬರುವ ಪ್ರಯತ್ನ ಮಾಡಲೇ ಇಲ್ಲ. ಭಾರತದ ಜನರನ್ನು ಅತ್ಯಂತ ಹೀನಾಯವಾಗಿ ನೆಡೆಸಿಕೊಂಡ ದೇಶದ ಆಡಳಿತ ವ್ಯವಸ್ಥೆ, ತಾನು ಮಾತ್ರ ತನಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿತು. ಜನರು ಕಟ್ಟಿದ ತೆರಿಗೆ ಹಣದಿಂದ ದುಂದುವೆಚ್ಚ ಮಾಡುತ್ತಿರುವ ಆಳುವ ವರ್ಗಗಳು ಜನರ ನೆರವಿಗೆ ಬರಲೇ ಇಲ್ಲ. ಕೊರೊನಾ ಕಾಲಘಟ್ಟದಲ್ಲೂ ತನಗೆ ಬೇಕಾದುದನ್ನು ತರಿಸಿಕೊಂಡು, ಮಾರಿಕೊಂಡು ಅಧಿಕಾರವನ್ನು ಮಾಡಿದರು. ಕೊರೊನಾ ಸಂದರ್ಭದಲ್ಲೂ ಬೆಲೆ ಏರಿಕೆ ಮಾಡಿ ಜನರನ್ನು ಸಂಕಷ್ಟಕೀಡು ಮಾಡಿದ ದೇಶ ನಮ್ಮದು. ಆಳುವ ವರ್ಗಗಳಿಗೆ ಸರಕಾರದ ಬೊಕ್ಕಸದಿಂದ ಖರ್ಚು ಮಾಡಲು ಅವಕಾಶವಿದೆ. ಆದರೆ ಜನರ ನೆರವಿಗೆ ಬರಬೇಕೆಂಬ ಕನಿಷ್ಟ ಪ್ರಯತ್ನ ಮಾಡಲಿಲ್ಲ. ಕೊರೊನಾ ಕಾಲಘಟ್ಟದಲ್ಲಿ ಲಕ್ಷಾಂತರ ಮಂದಿ ಮರಣಹೊಂದಿದರು. ಹಸಿವಿನಿಂದ ಬಳಲಿದರು. ತುತ್ತು ಅನ್ನಕ್ಕಾಗಿ ಪರದಾಡಿದರು. ಆದರೆ ಅವರ ನೆರವಿಗೆ ಬರಬೇಕೆಂಬ ಆಲೋಚನೆಯೂ ಆಳುವ ವರ್ಗದಲ್ಲಿ ಬರಲಿಲ್ಲ. ತಾವೇ ಬುದ್ದಿವಂತರೂ ಎಂದು ಮೆರೆದಾಡುವ ಅಧಿಕಾರಿ ವರ್ಗವಾಗಲಿ, ಆಳುವ ರಾಜಕಾರಣಿಗಳಾಗಲಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕೆಂಬ ನಿಟ್ಟಿನಲ್ಲಿ ಕೆಲಸ ಮಾಡಲಿಲ್ಲ. ಅದಕ್ಕಾಗಿ ಯೋಜನೆ ರೂಪಿಸಲಿಲ್ಲ. ತಾವು ಸರಕಾರದ ಬೊಕ್ಕಸದಿಂದ ತಮ್ಮ ತಮ್ಮ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಿಕೊಂಡರೇ ವಿನಹ ಜನರ ಆರೋಗ್ಯ ಸೇವೆಯ ಬಗ್ಗೆ ಗಮನ ಕೊಡಲೇ ಇಲ್ಲ. ಇದೀಗ ಕೊರೊನಾ ಎರಡನೆ ಅಲೆ ಬಂದಿದೆ. ಕೊರೊನಾ ಎರಡನೆ ಅಲೆ ಬರುತ್ತದೆಂಬ ಮಾಹಿತಿ ಈ ಹಿಂದೆಯೇ ಪರಿಣಿತರು ನೀಡಿದ್ದರು. ಆದರೆ ಆಳುವ ವರ್ಗಗಳು ಅದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಅದರ ಪರಿಣಾಮವನ್ನು ನಾವೀಗ ಎದುರಿಸುತ್ತಿದ್ದೇವೆ. ಈ ದೇಶದ ಲಕ್ಷಾಂತರ ಮಂದಿಗಷ್ಟೇ ಈ ಕೊರೊನಾ ಸಾಕಷ್ಟು ಅಪಾಯವನ್ನು ತಂದಿಟ್ಟಿದೆ. ಆ ಲಕ್ಷಾಂತರ ಮಂದಿಗೆ ಕನಿಷ್ಟ ಆಮ್ಲಜನಕ ಪೂರೈಕೆ ಮಾಡುವ ಶಕ್ತಿ ಈ ದೇಶದ ಆಳುವ ವರ್ಗಗಳಿಗೆ ಇಲ್ಲದಿರುವುದು ಈ ದೇಶದ ಆಡಳಿತ ವ್ಯವಸ್ಥೆಯನ್ನು ಸೂಚಿಸುತ್ತದೆ. ನೂರಾರು ಮಂದಿ ಆಮ್ಲಜನಕ ಪೂರೈಕೆಯಾಗದೆ ಮೃತ ಪಟ್ಟಿರುವುದನ್ನು ನಾವು ನೋಡುತ್ತಿದ್ದೇವೆ. ಕಳೆದ ವರ್ಷವೇ ಕೊರೊನಾ ಬಂದು ಅಪಾಯವನ್ನು ತಂದಿಟ್ಟು ಹೋಗಿದೆ. ಅಪಾಯದ ಮುನ್ಸೂಚನೆಯನ್ನು ನೀಡಿದೆ. ಆದರೆ ಅದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ತಮಗೆ ಬೇಕಾದುದನ್ನು ಮಾಡಿಕೊಳ್ಳುವುದರಲ್ಲೇ ಆಳುವ ವ್ಯವಸ್ಥೆ ನಿರಂತರ ಕ್ರೀಯಾಶೀಲವಾಯಿತು. ಇದೀಗ ಅದರ ಪರಿಣಾಮ ಎದುರಾಗಿದೆ. ಜನ ಆರೋಗ್ಯ ಸೇವೆಗಾಗಿ ಪರಿತಪಿಸುತ್ತಿದ್ದಾರೆ. ಕಣ್ಣೀರುಡುತ್ತಿದ್ದಾರೆ. ಬೀದಿಗಳಲ್ಲಿ ಸಾಯುತ್ತಿದ್ದಾರೆ. ಹೆಣಗಳ ರಾಶಿ ಬಿದ್ದಿವೆ. ವಿಶ್ವ ದರ್ಜೆಯ ನಗರವೆಂದು ಕರೆದುಕೊಳ್ಳುವ ಬೆಂಗಳೂರಿನಲ್ಲೇ ಆಮ್ಲಜನಕದ ಕೊರತೆ ಇದೆ. ಸಾವಿರಾರು ಮಂದಿಗೆ ಆಮ್ಲಜನಕ ಪೂರೈಸಲಾಗದಷ್ಟು ಅವ್ಯವಸ್ಥೆ ನಮ್ಮ ರಾಜ್ಯದಲ್ಲಿ. ರಾಜ್ಯ ಮಟ್ಟದಲಿ, ಜಿಲ್ಲಾ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ, ಗ್ರಾಮ ಮಟ್ಟದಲ್ಲಿರುವ ಸರಕಾರಿ ಆಸ್ಪತ್ರೆಯ ಸ್ಥಿತಿಗತಿಗಳನ್ನು ನೋಡಿದಾಗ ನಮಗೆ ಆಳುವ ವರ್ಗಕ್ಕೆ ಅರೋಗ್ಯ ಸೇವೆಯ ಬಗ್ಗೆ ಇರುವ ಕಾಳಜಿಯನ್ನು ನೋಡ ಬಹುದಾಗಿದೆ. ಅಧಿಕಾರಿಗಳಿಗೆ ಜನರನ್ನು ಬೆದರಿಸುವ, ಹೊಡೆಯುವ ಅವಾಚ್ಯ ಶಬ್ದಗಳಿಂದ ನಿಂದಿಸುವ ತಾಕತ್ತು ಇದೆ ವಿನಹ ಕನಿಷ್ಟ ಮುಂದಾಲೋಚನೆಯನ್ನು ಮಾಡುವ, ಜನರ ಸಮಸ್ಯೆ ಅರಿಯುವ ಮನಸ್ಸು ಇಲ್ಲದಿರುವುದು ವಿಷಾದದ ಸಂಗತಿ. ತಕ್ಷಣ ದೇಶದ ಆರೋಗ್ಯ ಸೇವೆಯನ್ನು ಬಲ ಪಡಿಸುವ ನಿಟ್ಟಿನಲ್ಲಿ ಆಳುವ ವರ್ಗಗಳು ನಿರ್ಧಾರ ಕೈಗೊಳ್ಳಲಿ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!