spot_img
Wednesday, January 22, 2025
spot_img

‘ಚಿತ್ರಕೂಟ ಪೋಷಕ್’, ‘ರಿಲಾಕ್ಸ್ ಟೀ’ ಮಾರುಕಟ್ಟೆಗೆ ಬಿಡುಗಡೆ


ಕುಂದಾಪುರ, ಎ.16: ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ ಕಳಿ-ಆಲೂರು ಇವರು ಸಿದ್ಧಪಡಿಸಿರುವ ನೂತನ ಉತ್ಪನ್ನಗಳಾದ ಚಿತ್ರಕೂಟ ಪೋಷಕ್ ಮತ್ತು ರಿಲಾಕ್ಸ್ ಟೀ ಮಾರುಕಟ್ಟೆಗೆ ಬಿಡುಗಡೆ ಕಾರ್ಯಕ್ರಮ ಎ.16ರಂದು ಚಿತ್ರಕೂಟದಲ್ಲಿ ನಡೆಯಿತು.

ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರು ಚಿತ್ರಕೂಟ ಪೋಷಕ್ ಬಿಡುಗಡೆಗೊಳಿಸಿ, ಆರೋಗ್ಯಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒಳಗೊಂಡಿರುವ ಈ ಉತ್ಪನ್ನ ಬಹುಬೇಗ ಮಾರುಕಟ್ಟೆ ವೃದ್ದಿಸಿಕೊಳ್ಳಲಿ. ಉತ್ಪನ್ನವೊಂದು ಬಹುಬೇಗ ಗ್ರಾಹಕರನ್ನು ತಲುಪಲು ಒಳ್ಳೆಯ ಪ್ರಚಾರವೂ ಅಗತ್ಯವಿದೆ. ರಾಜ್ಯಮಟ್ಟದಲ್ಲಿ ಚಿತ್ರಕೂಟದ ಉತ್ಪನ್ನಗಳಿಗೆ ಒಳ್ಳೆಯ ಪ್ರಚಾರ ಸಿಗಲಿ, ಚಿತ್ರಕೂಟ ಸಂಸ್ಥೆ ಆಯುರ್ವೇದ ಪರಂಪರೆಯಲ್ಲಿ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಅಭಿಪ್ರಾಯ ಪಟ್ಟರು.


ರಿಲಾಕ್ಸ್ ಟೀ ಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಎಮ್.ಎಸ್. ಮಂಜ ಚಾರಿಟೇಬಲ್ ಟ್ರಸ್ಟ್ ಪ್ರವರ್ತಕರಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಮಾತನಾಡಿ, ಇವತ್ತು ಪ್ರತಿಯೊಂದು ರಂಗವೂ ಕೂಡಾ ವ್ಯವಹರೀಕರಣಗೊಂಡಿದೆ. ಅದಕ್ಕೆ ವೈದ್ಯಕೀಯ ಕ್ಷೇತ್ರವೂ ಹೊರತಾಗಿಲ್ಲ. ಆದರೆ ಆಯುರ್ವೇದ ಕ್ಷೇತ್ರದಲ್ಲಿ ಪರಂಪರಾನುಗತ ಶೈಲಿ ಹಾಗೂ ಸೇವಾಧರ್ಮ ಈಗಲೂ ಉಳಿದುಕೊಂಡಿದೆ ಎಂದು ಹೇಳಿದ ಅವರು, ಪ್ರತಿಯೊಂದು ಅಗತ್ಯ ವಸ್ತುಗಳು ಕೂಡಾ ಇವತ್ತು ಕಲುಷಿತಗೊಳ್ಳುತ್ತಿದೆ. ನಾವು ಇವತ್ತು ದಿನಬಳಕೆಗೆ ಬಳಸುವ ಆಹಾರ ಪದಾರ್ಥಗಳು ಕೂಡಾ ಸತ್ವಹೀನವಾಗುತ್ತಿವೆ. ತಾಜಾ ಆಹಾರ ಪದಾರ್ಥಗಳು ಇವತ್ತು ಮರೆಯಾಗಿ ಹೋಗುತ್ತಿವೆ. ಇಂತಹ ಸಂದರ್ಭದಲ್ಲಿ ಚಿತ್ರಕೂಟ ನೈಸರ್ಗಿಕವಾದ ವಸ್ತುಗಳನ್ನು ಬಳಸಿಕೊಂಡು ಇಂತಹ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯಕ್ಕೆ ಅಗತ್ಯವಿರುವ ಉತ್ಪನ್ನಗಳನ್ನು ತಯಾರಿಸಿ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದು ಶ್ಲಾಘನೀಯ ಎಂದರು.


ಈ ಸಂದರ್ಭದಲ್ಲಿ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಡಾ|ಅತುಲ್ ಕುಮಾರ್ ಶೆಟ್ಟಿ, ತಾ.ಪಂ.ಸದಸ್ಯ ಉದಯ ಜಿ.ಪೂಜಾರಿ, ಆಲೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ರವಿ ಶೆಟ್ಟಿ, ಪ್ರಗತಿಪರ ಸಾವಯವ ಕೃಷಿಕ ಮಹಾಬಲ ಬಾಯರಿ ಉಪಸ್ಥಿತರಿದ್ದರು.


ಚಿತ್ರಕೂಟದ ರೂವಾರಿ ಡಾ|ರಾಜೇಶ್ ಬಾಯರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ, ಇವತ್ತಿನ ಆಹಾರಗಳಲ್ಲಿ ವ್ಯಕ್ತಿಯ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಪೋಷಕಾಂಶಗಳು ಸಿಗುವುದಿಲ್ಲ. ಆ ಹಿನ್ನೆಲೆಯಲ್ಲಿ ಚಿತ್ರಕೂಟ ಪೋಷಕ್ ಎನ್ನುವಂತಹ ಉತ್ಪನ್ನವನ್ನು ಸಿದ್ಧಪಡಿಸಲಾಗಿದ್ದು ಇದನ್ನು ಮೂರು ವರ್ಷ ಮೇಲ್ಪಟ್ಟವರು ಬಳಕೆ ಮಾಡಬಹುದಾಗಿದೆ. ಇದು ಸಿರಿಧಾನ್ಯಗಳು, ಬಹುಧಾನ್ಯಗಳು ಹಾಗೂ ೩೫ ಗಿಡಮೂಲಿಕೆಗಳು, ಅಶ್ವಗಂಧ, ಶತಾವರಿಯಂತಹವುಗಳನ್ನು ಬಳಸಿಕೊಂಡು ತಯಾರಿಸಲಾಗಿದೆ. ಇದು ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿಗೆ ಸಹಕಾರಿಯಾಗಿದೆ. ಇನ್ನೊಂದು ರಿಲಾಕ್ಸ್ ಟೀ. ಇದನ್ನು ಬಿಸಿ ನೀರಿನಲ್ಲಿ ಅದ್ದಿ ಕುಡಿದರೆ ಉತ್ತಮ ನಿದ್ದೆಗೆ ಸಹಕಾರಿ ಎಂದರು. ಕಳೆದ ವರ್ಷ ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಆತ್ಮನಿರ್ಭರ ಭಾರತ್ ಕಲ್ಪನೆಯಡಿಯಲ್ಲಿ ಚಿತ್ರಕೂಟ ಆಯುರ್ವೇದ ಫುಡ್ಸ್ ವಿಭಾಗ ಆರಂಭಿಸಲಾಯಿತು. ಪಂಚರಕ್ಷಕ ಕಿಟ್ ಕೊರೋನಾ ಸಮಯದಲ್ಲಿ ಸಾಕಷ್ಟು ಜನಪ್ರಿಯತೆಪಡೆದುಕೊಂಡಿತು. ಕಳೆದ ಸೆಪ್ಟೆಂಬರ್‌ನಲ್ಲಿ ಶಿಶು ಪೋಷಕ್ ಎಂಬ ನೈಸರ್ಗಿಕ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು ಅದು 8 ಜಿಲ್ಲೆಗಳಲ್ಲಿ ಉತ್ತಮ ಮಾರುಕಟ್ಟೆಯನ್ನು ಕಂಡುಕೊಂಡಿದೆ. ಎಂದರು.


ಮಯೂರ ಕಾರ್ತಿಕ್ ಉಡುಪ ಪ್ರಾರ್ಥಿಸಿ, ಡಾ| ಅನುಲೇಖಾ ಬಾಯರಿ ವಂದಿಸಿದರು. ಪತ್ರಕರ್ತ ಪ್ರಭಾಕರ ಆಚಾರ್ಯ ಚಿತ್ತೂರು ಕಾರ್ಯಕ್ರಮ ನಿರ್ವಹಿಸಿದರು.


Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!