spot_img
Tuesday, June 23, 2026
spot_img

ಬೈಂದೂರು : ಹಿರಿಯ ನಾಗರಿಕರ ವೇದಿಕೆಯಿಂದ ಯೋಗ ದಿನಾಚರಣೆ

ಬೈಂದೂರಿನ ಹಿರಿಯ ನಾಗರೀಕರ ವೇದಿಕೆಯಿಂದ ರಾಜ್ಯ ಯೋಗ ಸಂಪನ್ಮೂಲ ವ್ಯಕ್ತಿ, ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ದೇವಾಡಿಗರ ನೇತೃತ್ವದಲ್ಲಿ ವಿಶ್ವ ಯೋಗ ದಿನಾಚರಣೆ ಜರುಗಿತು. ಶ್ರೀಯುತರು ಮಾತನಾಡಿ, ” ನಮ್ಮ ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಶಿಸ್ತು,ಸಂಯಮ ಮತ್ತು ಕ್ರಮಬದ್ಧತೆಯೇ ಯೋಗ”ಎಂಬುದಾಗಿ ವ್ಯಾಖ್ಯಾಯಿನಿಸಿ, ಹಿರಿಯ ನಾಗರಿಕರು ಮಾಡಬಹುದಾದ ಸರಳ ವ್ಯಾಯಾಮ ಮತ್ತು ಯೋಗಾಸನಗಳನ್ನು ಹೇಳಿಕೊಟ್ಟರು.
ವೇದಿಕೆಯ ಅಧ್ಯಕ್ಷ ಗಿರೀಶ್ ಶ್ಯಾನುಭಾಗ್ ಅವರು ಸರ್ವರನ್ನೂ ಸ್ವಾಗತಿಸುತ್ತಾ, ಪ್ರಾಸ್ತಾವಿಕ ನುಡಿಗಳನ್ನಾಡಿ ಯೋಗದ ಮಹತ್ವದ ಕುರಿತು ಮಾತನಾಡಿದರು. ಕಾರ್ಯದರ್ಶಿ ಗೋವಿಂದ ಬಿಲ್ಲವರು ಗತಸಭೆಯ ವರದಿಯನ್ನು ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು. ನಿಕಟಪೂರ್ವ ಅಧ್ಯಕ್ಷ ಪುಂಡಲೀಕ ನಾಯಕರು ಇತ್ತೀಚೆಗೆ ಅಗಲಿದ ನಿವೃತ್ತ ಉಪನ್ಯಾಸಕ, ಪಂಚಾಯತ್ ರಾಜ್ ರಾಜ್ಯ ಸಂಪನ್ಮೂಲ ವ್ಯಕ್ತಿ, ನಮ್ಮೆಲ್ಲರ ಮಾರ್ಗದರ್ಶಕ, ಸರಳ ಸಜ್ಜನಿಕೆಯ ಎಸ್ ಜನಾರ್ದನ ಮರವಂತೆಯವರ ಗುಣಗಾನದೊಂದಿಗೆ ನುಡಿನಮನ ಸಲ್ಲಿಸಿದರು. ಸಭೆಯಲ್ಲಿ ಮೌನಪ್ರಾರ್ಥನೆಯೊಂದಿಗೆ ಅಗಲಿದ ಆತ್ಮಕ್ಕೆ ಶಾಂತಿ ಕೋರಲಾಯಿತು. ಜಿ.ತಿಮ್ಮಪ್ಪಯ್ಯನವರು ಪ್ರಾರ್ಥಿಸಿದರು. ವೇದಿಕೆಗೆ ಹೊಸದಾಗಿ ಸೇರ್ಪಡೆಗೊಂಡ ಸದಸ್ಯರಾದ ಖಂಬದಕೋಣೆ ರಾಮದಾಸ ನಾಯಕರನ್ನು ಸಭೆಗೆ ಪರಿಚಯಿಸಲಾಯಿತು. ಉಪಾಧ್ಯಕ್ಷ ಈಶ್ವರ ಸೇರೆಗಾರ್ ಶುಭಕೋರಿದರು. ಗೋವಿಂದ ಬಿಲ್ಲವರು ವಂದಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!