spot_img
Tuesday, June 23, 2026
spot_img

‘ನಾದಾವಧಾನ’ ವಾರ್ಷಿಕೋತ್ಸವ-2026| ನಾದಾವದಾನದ ಯಕ್ಷಸೇವೆ ಶ್ಲಾಘನೀಯ-ಎಡನೀರು ಶ್ರೀ

ತೆಕ್ಕಟ್ಟೆ : ಗುರು ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಸಮಾಜದಲ್ಲಿ ಗುರುತಿಸಿಕೊಳ್ಳುವುದು ಪ್ರಸ್ತುತ ಕಾಲಘಟ್ಟದಲ್ಲಿ ಸುಲಭವಲ್ಲ. ಈ ನಿಟ್ಟಿನಲ್ಲಿ ಸಮರ್ಥ ಗುರುಗಳೀರ್ವರು ಆರೇಳು ವರ್ಷಗಳ ಪರ್ಯಂತ ಆನ್‌ಲೈನ್ ಮೂಲಕ ಯಕ್ಷಗಾನ ಕಲಿಸಿ ಶಿಷ್ಯರಿಂದ ಸೈ ಎನಿಸಿಕೊಂಡು ನಿರಂತರ ಚಟುವಟಿಕೆಯಲ್ಲಿ ಶಿಷ್ಯರನ್ನನೇಕರನ್ನು ತೊಡಗಿಸಿಕೊಂಡು ಮುನ್ನಡೆಯುತ್ತಿರುವ ಕಾರ್ಯ ಶ್ಲಾಘನೀಯವಾದದ್ದು. ಕಲಾಸಕ್ತರ ಆನ್ ಲೈನ್ ಮೂಲಕ ಗಮನ ಸೆಳೆದ ಸಂಸ್ಥೆ ನಾದಾವದಾನ. ಉತ್ತರೋತ್ತರ ಶ್ರೇಯಸ್ಸಾಗಲಿ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು.

ತೆಕ್ಕಟ್ಟೆ ಹಯಗ್ರೀವದಲ್ಲಿ ನಾದಾವಧಾನ ಪ್ರತಿಷ್ಠಾನ, ಕುಂದಾಪುರ ಆಯೋಜಿಸಿದ ನಾದಾವಧಾನ-ವಾರ್ಷಿಕೋತ್ಸವ-೨೦೨೬ ಕಾರ್ಯಕ್ರಮವನ್ನು ಜೂನ್ ೨೧ರಂದು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಸಭಾ ಕಾರ್ಯಕ್ರಮದಲ್ಲಿ ಗುರುಗಳಾದ ಎ.ಪಿ. ಪಾಠಕ್ ಮಾತನ್ನಾಡಿ, ಅನಾರೋಗ್ಯ ನಿಮಿತ್ತ ಮನೆಯಲ್ಲುಳಿದ ಪ್ರಾಚಾರ್ಯ ಕೆ.ಪಿ. ಹೆಗಡೆವರಿಗೆ ಗುರುವಂದನೆಯನ್ನು ಗುರು ನಿವಾಸದಲ್ಲಿ ಸಲ್ಲಿಸುವುದಾಗಿ ವಿನಂತಿಸಿದರು.

ಪುತ್ತಿಗೆ ರಘುರಾಮ ಹೊಳ್ಳ, ರಾಘವೇಂದ್ರ ಮಯ್ಯ, ಪ್ರಸನ್ನ ಭಟ್ ಬಾಳ್ಕಲ್, ವಿದ್ಯುತ್‌ಗುತ್ತಿಗೆ ದಾರರಾದ ಕೆ. ಆರ್. ನಾಯಕ್, ಎನ್. ಜಿ. ಹೆಗಡೆ, ಯಶಸ್ವಿ ಕಲಾವೃಂದದ ಕಾರ್ಯದರ್ಶಿ ವೆಂಕಟೇಶ ವೈದ್ಯ, ಮೇಳದ ಯಜಮಾನರಾದ ರಂಜಿತ್ ಶೆಟ್ಟಿ ವಕ್ವಾಡಿ, ಬಣ್ಣದ ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಸಮಿತಿಯ ಮಂಜುನಾಥಯ್ಯ ಉಪಸ್ಥಿತರಿದ್ದರು.

ಅಶೋಕ್ ಆಚಾರ್ ಸಾಬರಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಯಶಸ್ವಿ ಕಲಾವೃಂದ ಕೊಮೆ ಸಹಕಾರದೊಂದಿಗೆ ನಾದಾವಧಾನ ಸಂಸ್ಥೆಯ ವಿದ್ಯಾರ್ಥಿಗಳಿಂದ ಗಾನವೈಭವ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ‘ಮಾಗದ ವಧೆ’ ರಂಗ ಪ್ರಸ್ತುತಿಗೊಂಡಿತು.

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!