spot_img
Monday, June 22, 2026
spot_img

ಜೂ.28ರಂದು ಕುಂಭಾಶಿಯಲ್ಲಿ ಕುಂದಾಪುರ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನ ‘ನುಡಿಬೆಳಕು’

ಕುಂದಾಪುರ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ ತಾಲ್ಲೂಕು ಘಟಕ ತನ್ನ ಇಪ್ಪತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನ ‘ನುಡಿಬೆಳಕು’ ಇದೇ ತಿಂಗಳ 28ನೇ ತಾರೀಕು ಭಾನುವಾರ ಕುಂಭಾಶಿಯ ವಿನಾಯಕ ಸಭಾಂಗಣದಲ್ಲಿ ನಡೆಯಲಿದ್ದು ಈ ಬಗ್ಗೆ ಪೂರ್ವಭಾವಿ ಸಭೆ ಸೋಮವಾರ ನಡೆಯಿತು.
ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು, ಸಮಿತಿಗಳ ಪದಾಧಿಕಾರಿಗಳು ಸಮರ್ಪಕವಾಗಿ ಜವಬ್ದಾರಿ ನಿರ್ವಹಿಸಿ ದುಡಿದಾಗ ಸಮ್ಮೇಳನ ಅತ್ಯಂತ ಯಶಸ್ವಿಯಾಗುತ್ತದೆ. ಹಿರಿಯ ಪತ್ರಕರ್ತ ಯು.ಎಸ್ ಶೆಣೈ ಅವರನ್ನು ಸಮ್ಮೇಳನದ ಸರ್ವಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಅಭಿನಂದನಾರ್ಹವಾದುದು ಎಂದರು.
ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ಉಮೇಶ ಪುತ್ರನ್ ಮಾತನಾಡಿ, ಕುಂದಾಪುರ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನ-2026ರ ಕುರಿತು ಪೂರ್ವ ಸಿದ್ಧತೆಗಳು ನಡೆಯುತ್ತಿದ್ದು, ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಹಿರಿಯ ಪತ್ರಕರ್ತರು ಲೇಖಕರು ಆದಂತಹ ಯು.ಎಸ್.ಶೆಣೈ ವಹಿಸಲಿದ್ದಾರೆ. ಸಮ್ಮೇಳನವನ್ನು ಬೆಳಗ್ಗೆ 8 ಗಂಟೆಗೆ ರಾಷ್ಟ್ರಧ್ವಜಾರೋಹಣದ ಮೂಲಕ ಆರಂಭಗೊಂಡು ಸಂಜೆ 6 ರವರೆಗೆ ನಡೆಯಲಿದೆ. ಬೆಳಗಿನ ರಾಷ್ಟ್ರಧ್ವಜಾರೋಹಣವನ್ನು ಕುಂಭಾಶಿ ಗ್ರಾಮ ಪಂಚಾಯಿತಿಯ ಆಡಳಿತ ಅಧಿಕಾರಿ ನಡೆಸಿಕೊಡಲಿದ್ದು, ಪರಿಷತ್ ಧ್ವಜಾರೋಹಣವನ್ನು ತಾಲೂಕು ಘಟಕದ ಅಧ್ಯಕ್ಷರು ನಡೆಸಿಕೊಡಲಿದ್ದಾರೆ. ತದನಂತರ 8.30ಕ್ಕೆ ಸರಿಯಾಗಿ ಸಮ್ಮೇಳನ ಅಧ್ಯಕ್ಷರನ್ನು ಭವ್ಯ ಮೆರವಣಿಗೆ ಮೂಲಕ ಸಮ್ಮೇಳನ ನಡೆಯುವ ಸಭಾಂಗಣಕ್ಕೆ ಗೌರವ ಪೂರ್ವಕವಾಗಿ ಕರೆತರಲಾಗುವುದು ಎಂದರು.
ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಸಮ್ಮೇಳನ ಉದ್ಘಾಟನೆಯನ್ನು ನಾಡಿನ ಖ್ಯಾತ ಲೇಖಕ ಡಾ. ನರೇಂದ್ರ ರೈ ದೇರ್ಲ ಮಾಡಲಿದ್ದು, ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಆಶಯ ಮಾತುಗಳನ್ನಾಡಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ನಿಕಟಪೂರ್ವ ಸಮ್ಮೇಳನ ಅಧ್ಯಕ್ಷರಾದಂತಹ ಪ್ರೊ. ಬಾಲಕೃಷ್ಣ ಶೆಟ್ಟಿ ಮೊಳಹಳ್ಳಿ, ಪುಸ್ತಕ ಮಳಿಗೆಯನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಲ್ಪಿ ಶ್ರೀ ಲಕ್ಷ್ಮಿನಾರಾಯಣ ಆಚಾರ್ಯ ನೆರವೇರಿಸಲಿದ್ದಾರೆ.  ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಪೆÇಲೀಸ್ ವರಿಷ್ಠಾಧಿಕಾರಿ ಹರಿರಾಮ ಶಂಕರ್, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ ಎಸ್.ಆರ್. ತಹಶೀಲ್ದಾರ್ ಪ್ರದೀಪ್ ಕುರುಡೇಕರ್, ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಪೆÇಲಿಸ್ ಉಪಾಧೀಕ್ಷಕ ಎಚ್.ಡಿ ಕುಲಕರ್ಣಿ, ಸ್ವಾಗತ ಸಮಿತಿಯ ಅಧ್ಯಕ್ಷರಾದ ರಮಣ ಉಪಾಧ್ಯಾಯ, ಡಾ.ಅಣ್ಣಯ್ಯ ಕುಲಾಲ್, ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ, ಕಾರ್ಯಾಧ್ಯಕ್ಷರಾದ ಕೆ. ರತ್ನಾಕರ್ ನಾಯಕ್, ಆರ್ಥಿಕ ಸಮಿತಿ ಸಂಚಾಲಕರಾದ ಗಣೇಶ್ ಪುತ್ರನ್, ಸಮ್ಮೇಳನ ಸ್ವಾಗತ ಸಮಿತಿ ಕಾರ್ಯದರ್ಶಿ ದಿನಕರ ಆರ್.ಶೆಟ್ಟಿ, ಕ.ಸಾ.ಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ, ಜಿಲ್ಲಾ ಕ.ಸಾಪ ಕೋಶಾಧ್ಯಕ್ಷ ಮನೋಹರ್ ಪಿ., ಕ.ಸಾ.ಪ ಕಾಪು ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ, ಹೆಬ್ರಿ ತಾಲೂಕು ಅಧ್ಯಕ್ಷ ಶ್ರೀನಿವಾಸ ಭಂಡಾರಿ, ಉಡುಪಿ ತಾಲೂಕು ಅಧ್ಯಕ್ಷೆ ಪೂರ್ಣಿಮಾ ಸುರೇಶ್, ಬೈಂದೂರು ತಾಲೂಕು ಅಧ್ಯಕ್ಷ ಅರುಣ ಶಿರೂರು, ಕಾರ್ಕಳ ತಾಲೂಕು ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಬ್ರಹ್ಮಾವರ ತಾಲೂಕು ಅಧ್ಯಕ್ಷ ರಾಮಚಂದ್ರ ಐತಾಳ ಭಾಗವಹಿಸಲಿದ್ದಾರೆ, ತೆಂಕನಿಡಿಯೂರು ಸ.ಪ.ಪೂ.ಕಾಲೇಜು ಪ್ರಾಂಶುಪಾಲರಾದ ವಿಶ್ವನಾಥ ಕರಬ ಸಮ್ಮೇಳನಾಧ್ಯಕ್ಷರ ಪರಿಚಯಿಸಲಿದ್ದಾರೆ ಎಂದರು.
ಬಳಿಕ ‘ಮುದ್ರಣ ಮಾಧ್ಯಮ ಮನ್ವಂತರ’ ಎಂಬ ವಿಷಯದಲ್ಲಿ ಗೋಷ್ಠಿ ನಡೆಯಲಿದ್ದು ಪತ್ರಕರ್ತರಾದಂತಹ ಜಾನ್ ಡಿಸೋಜಾ, ಡಾ.ಸುಧಾಕರ್ ನಂಬಿಯಾರ್, ಸುಬ್ರಹ್ಮಣ್ಯ ಪಡುಕೋಣೆ ಮತ್ತು ಪ್ರಕಾಶಕರ ನೆಲೆಯಲ್ಲಿ ಮುನಿಯಾಲು ಗಣೇಶ್ ಶೆಣೈ ಭಾಗವಹಿಸಲಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಸಮ್ಮೇಳನ ಅಧ್ಯಕ್ಷರಾಗಿದ್ದಂತಹ ಕುಂಭಾಸಿಯ ಪಂಡಿತ ವಿಶ್ವಂಭರ ಉಪಾಧ್ಯಾಯರವರ ಜನ್ಮ ಶತಮಾನದ ಪ್ರಯುಕ್ತ ಸಂಸ್ಮರಣಾ ಪುರಸ್ಕಾರವನ್ನು ಅವರ ಪುತ್ರ, ವಿಶ್ವಂಭರ ಉಪಾಧ್ಯಾಯ ಶತಮಾನೋತ್ಸವ ಪುರಸ್ಕಾರ ಸಮಿತಿಯ ಸಂಚಾಲಕ ರವಿರಾಜ್ ಉಪಾಧ್ಯಾಯರು ನೀಡಲಿದ್ದು, ಸದರಿ ಪುರಸ್ಕಾರವನ್ನು ಈ ಭಾಗದ ಖ್ಯಾತ ಗಮಕಿ ಲೇಖಕ ಡಾ. ರಾಘವೇಂದ್ರ ರಾವ್ ರವರಿಗೆ ಪುರಸ್ಕಾರ ಪ್ರದಾನವನ್ನು ಪೆÇ್ರ. ಉಪೇಂದ್ರ ಸೋಮಯಾಜಿಯವರು ನೆರವೇರಿಸಲಿದ್ದಾರೆ ಎಂದರು.
ನಂತರ ನಡೆಯುವ ಕವಿಗೋಷ್ಠಿಯಲ್ಲಿ ಯುವ ಕವಿಗಳಿಗೆ ಅವಕಾಶ ಮಾಡಿಕೊಡಲಾಗಿದೆ ಸಮನ್ವಯಕಾರರಾಗಿ ಕವಿ ಮತ್ತು ಲೇಖಕ ರಾಜೀವ ನಾಯಕ್ ನಿರ್ವಹಿಸಲಿದ್ದಾರೆ.
ಈ ತಾಲೂಕು ಸಮ್ಮೇಳನದಲ್ಲಿ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಗುವುದು. ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಬಿವಿ ಉಡುಪ ಯಕ್ಷಗಾನ ಕ್ಷೇತ್ರದಲ್ಲಿ ವೆಂಕಟೇಶ್ ವೈದ್ಯ ತೆಕ್ಕಟ್ಟೆ, ಪ್ರಗತಿಪರ ಕೃಷಿಕ ಶ್ಯಾಮ ಕಾವ್ರಾಡಿ, ಶೈಕ್ಷಣಿಕ ಸೇವೆಯಲ್ಲಿ ಶೇಷಗಿರಿ ಗೋಟ ಬೀಜಾಡಿ, ಯೋಗದಲ್ಲಿ ರಘುವೀರ್ ನಗರಕರ್, ಶಿಕ್ಷಣದಲ್ಲಿ ಐರಿನ್ ಸಾಲಿನ್ಸ್ ಗೋಪಾಡಿ, ಮಹಿಳಾ ಸಬಲೀಕರಣದಲ್ಲಿ ರಾಧಾದಾಸ್ ಕುಂಭಾಶಿ, ಕುಂಚಕಲೆಯಲ್ಲಿ ಕೆ.ಕೆ ರಾಮನ್ ಕುಂದಾಪುರ, ಧಾರ್ಮಿಕ-ಭಜನೆ ಪ್ರಕಾರದಲ್ಲಿ ಶ್ರೀರಾಮ ಭಜನಾ ಮಂಡಳಿ ಬೀಜಾಡಿ-ಗೋಪಾಡಿ, ಹಿರಿಯ ಸೂಲಗಿತ್ತಿ-ಲಕ್ಷ್ಮೀ ಪೂಜಾರಿ ಗುಂಡಿಗೋಳಿ ಬಸ್ರೂರು, ಸಮಾಜಸೇವೆಯಲ್ಲಿ ಕೊರ್ಗಿ ವಿಠಲ ಶೆಟ್ಟಿ ಕುಂಭಾಶಿ, ಸಂಘಟನೆಯಲ್ಲಿ ತೆಕ್ಕಟ್ಟೆ ಫ್ರೆಂಡ್ಸ್, ಸಾರ್ವಜನಿಕ ಸೇವೆಯಲ್ಲಿ ನಾರಾಯಣ ಭಂಡಾರಿ ಬೀಜಾಡಿ, ಸಂಘಟನೆಯಲ್ಲಿ ಮಕ್ಕಳಮನೆ (ಕೊರಗ ಶ್ರೇಯೋಭಿವೃದ್ಧಿ ಸಂಘ) ಕುಂಭಾಶಿ, ಕುಸುರಿ ಕಲೆ-ವೆಂಕಟೇಶ್ ಆಚಾರ್ಯ, ಜೀವಿ ಆಟ್ರ್ಸ್ ಗೋಪಾಡಿ, ಸೇವೆ (ಸರಕು ವಿತರಣೆ)-ಸಿರಾಜ್ ಕುಂದಾಪುರ ಇವರನ್ನು ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಲಾಗುವುದು ಎಂದರು.
ಸಾಧಕರ ಸನ್ಮಾನವನ್ನು ಸಮಾಜಸೇವಕ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಹೈದರಾಬಾದ್ ನಡೆಸಿಕೊಡಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಸಮಾಜ ಸೇವಕÀ ದಿನೇಶ್ ಹೆಗ್ಡೆ ಮೊಳಹಳ್ಳಿ, ಮಲ್ಯಾಡಿ ಶಿವರಾಮ ಶೆಟ್ಟಿ, ಶ್ರೀ ಕ್ಷೇತ್ರ ಕೊಲ್ಲೂರು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿರಲಿದ್ದಾರೆ. ಸಮ್ಮೇಳನದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಮರೋರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಪೂರ್ವಭಾವಿ ಸಭೆ, ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಿದ್ದರು. ಈ ಸಂದರ್ಭದಲ್ಲಿ ಸಮ್ಮೇಳನ ಸ್ವಾಗತಿ ಸಮಿತಿ ಅಧ್ಯಕ್ಷರಾದ ಶ್ರೀರಮಣ ಉಪಾಧ್ಯಾಯ, ವಿನಾಯಕ ಸಭಾಂಗಣದ ಮುಖ್ಯಸ್ಥರಾದ ರವಿರಾಜ ಉಪಾಧ್ಯಾಯ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ ಜಿ., ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು, ಕುಂದಾಪುರ ಪೊಲೀಸ್ ಠಾಣೆಯ ನಂಜಾ ನಾಯಕ್ ಉಪಸ್ಥಿತರಿದ್ದರು.
ಸುಪ್ರಿತಾ ಪುರಾಣಿಕ, ಸೂಕ್ಷ್ಮ ಉಪಾಧ್ಯಾಯ ಪ್ರಾರ್ಥಿಸಿದರು. ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕೆ.ರತ್ನಾಕರ ನಾಯಕ್ ಸ್ವಾಗತಿಸಿದರು. ಕ.ಸಾ.ಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಮ್ಮೇಳನ ಸ್ವಾಗತ ಸಮಿತಿ ಕಾರ್ಯದರ್ಶಿ ದಿನಕರ್ ಆರ್.ಶೆಟ್ಟಿ ಸಮಿತಿಗಳ ವಿವರ ನೀಡಿದರು. ಅಕ್ಷತಾ ಗಿರೀಶ್ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!