spot_img
Monday, June 22, 2026
spot_img

ವಿಜಯಮಕ್ಕಳ ಕೂಟ ಆಂಗ್ಲ ಮಾದ್ಯಮ ಶಾಲೆ ಆತ್ರಾಡಿಯಲ್ಲಿ ಕ್ರೀಡಾಭಾರತಿ ಸಹಯೋಗದಲ್ಲಿ ಯೋಗ ದಿನಾಚರಣೆ

ವಂಡ್ಸೆ: ವಿಶ್ವ ಯೋಗ ದಿನದ ಅಂಗವಾಗಿ ವಿಜಯಮಕ್ಕಳ ಕೂಟ ಆಂಗ್ಲ ಮಾದ್ಯಮ ಶಾಲೆ ಆತ್ರಾಡಿಯಲ್ಲಿಯಲ್ಲಿ ಕ್ರೀಡಾಭಾರತಿ ಸಹಯೋಗದಲ್ಲಿ ಯೋಗ ದಿನಾಚರಣೆ ಆಚರಿಸಲಾಯಿತು.

ಕ್ರೀಡಾಭಾರತಿ ಉಡುಪಿ ಇದರ ಅಧ್ಯಕ್ಷರಾದ ಮಂಜುನಾಥ ಶೆಟ್ಟಿ ಬೈಲೂರು ಕಾರ್ಯಕ್ರಮ ಉದ್ಘಾಟಿಸಿದರು. ವಿಜಯ ಮಕ್ಕಳ ಕೂಟ ಸಂಸ್ಥೆಯ ಸಂಚಾಲಕರಾದ ಸುಭಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ಭಾರತಿ ದಕ್ಷಿಣ ಪ್ರಾಂತ ಸಂಯೋಜಕರಾದ ಪ್ರಸನ್ನಕುಮಾರ್ ಕಾರ್ಕಳ ಮುಖ್ಯ ಅತಿಥಿಯಾಗಿ ಭಾಗವಹಿಸಿ ಯೋಗಭ್ಯಾಸದ ಮಹತ್ವದೊಂದಿಗೆ ವಿವಿಧ ಯೋಗಾಸನಗಳ ತಿಳಿಸಿದರು.

ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಉಡುಪಿ ಜಿಲ್ಲಾ ಸಹ ಕಾರ್ಯವಾಹ ಪ್ರಶಾಂತ ಅರೆಶಿರೂರು, ಮಂಗಳೂರು ವಿಭಾಗದ ಕ್ರೀಡಾ ಭಾರತಿ ಸಹ ಸಂಯೋಜಕರಾದ ಲಿಂಗಯ್ಯ ಉಪ್ಪುಂದ, ಕುಂದಾಪುರ, ಬೈಂದೂರು ತಾಲೂಕು ರಾಷ್ಟ್ರೀಯ ಸೇವಾ ಸಂಘದ ಪ್ರಚಾರಕರಾದ ಚಂದನ್ ಉಪಸ್ಥಿತರಿದ್ದರು.

ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ದೀಪಿಕಾಸುಭಾಶ್ ಸ್ವಾಗತಿಸಿ, 10ನೇ ತರಗತಿ ವಿದ್ಯಾರ್ಥಿಗಳಾದ ಮನಸ್ವಿ, ಸಂತೃಪ್ತಿ ಕಾರ್ಯಕ್ರಮ ನಿರ್ವಹಿಸಿದರು. 10ನೇ ತರಗತಿ ವಿದ್ಯಾರ್ಥಿನಿ ಪ್ರತೀಕ್ಷಾ ವಂದಿಸಿದರು. ಅನುಜ್ಞಾ, ಸಂಭ್ರಮ, ತ್ರಿಷಾ, ಪ್ರಾರ್ಥಿಸಿದರು. ಸುಮಾರು 800 ವಿದ್ಯಾರ್ಥಿಗಳು ಯೋಗದಿನಾಚರಣೆಯಲ್ಲಿ ಭಾಗವಹಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!