spot_img
Saturday, June 6, 2026
spot_img

ಚಿತ್ತೂರು ಪ್ರೌಢಶಾಲೆ ರಸ್ತೆಯನ್ನು ಆವರಿಸಿಕೊಂಡ ಅಪಾಯಕಾರಿ ಮರಗಳು: ಕೂಡಲೇ ಅಪಾಯಕಾರಿ ಮರಗಳ ತೆರವಿಗೆ ಆಗ್ರಹ

ಕುಂದಾಪುರ: ಕುಂದಾಪುರ ತಾಲೂಕು ಪಿ‌ಎಂಶ್ರಿ ಚಿತ್ತೂರು ಪ್ರೌಢಶಾಲೆಗೆ ಸಾಗುವ ರಸ್ತೆಯ ಎರಡು ಕಡೆಯಿಂದ ರಸ್ತೆಯನ್ನು ಆಕ್ರಮಿಸಿಕೊಂಡು ಸಂಭಾವ್ಯ ಅನಾಹುತಕ್ಕೆ ಈ ಮರಗಳು ಸಿದ್ಧವಾಗಿರುವಂತಿವೆ.

ಶಾಲಾ ಮಕ್ಕಳು ಓಡಾಡುವ ಮಾರ್ಗವಿದು. ರಸ್ತೆಗೇ ಬಾಗಿಕೊಂಡಿರುವುದು ಭಾರೀ ಬೆಲೆ ಬಾಳುವ ಮರಗಳಲ್ಲ. ಆಕೇಸಿಯಾ ಮರಗಳು. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಅಪಾಯಕಾರಿ ಮರಗಳ ತೆರವು ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಚಿತ್ತೂರು ಪೆಟ್ರೋಲ್ ಪಂಪ್ ಎದುರುಗಡೆ ಪ್ರೌಢಶಾಲೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ದಿನ ಬೆಳಗ್ಗೆ ಮತ್ತು ಸಂಜೆ 300ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಅದೇ ದಾರಿಯಾಗಿ ಶಾಲೆಗೆ ತೆರಳುತ್ತಿರುತ್ತಾರೆ. ಈಗಾಗಲೇ ಮಳೆಗಾಲ ಪ್ರಾರಂಭಗೊಂಡಿದ್ದು ಪ್ರಾರಂಭದಲ್ಲಿ ಇರುವ ಗಾಳಿ ಮಳೆಗೆ ದಾರಿಯಲ್ಲಿರುವ ಅಪಾಯಕಾರಿ ಮರಗಳು ಬಿದ್ದು ಅನಾಹುತಗಳು ಸಂಭವಿಸುವ ಮುನ್ನ ಸಂಬಂಧ ಪಟ್ಟ ಅರಣ್ಯ ಇಲಾಖೆ ಹಾಗೂ ಸಂಬಂಧ ಪಟ್ಟ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

 

ವಿಡಿಯೋ ವೀಕ್ಷಿಸಿ https://www.facebook.com/share/r/1B7UBmPjMu/

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!