spot_img
Friday, June 5, 2026
spot_img

ದೇಗುಲಗಳಲ್ಲಿ ‘ಅರ್ಥಾಂಕುರ’ ಶ್ಲಾಘನೀಯ ಕಾರ್ಯ-ಶ್ರೀರಮಣ ಉಪಾಧ್ಯಾಯ

ಕುಂಭಾಶಿ: ತಾಳಮದ್ದಳೆ ಕಲಾ ಪ್ರಕಾರಗಳು ವಿರಳವಾಗುತ್ತಿರುವ ಸಂದರ್ಭದಲ್ಲಿ ಮತ್ತೆ ವ್ಯಾಪಕವಾಗಿ ಕೆಲವು ದೇಗುಲಗಳಲ್ಲಿ ’ಅರ್ಥಾಂಕುರ’ ಹೊಸ ತಲೆಮಾರಿನ ಅರ್ಥದಾರಿಗಳ ಪರಿಶೋಧವಾಗಿ ಸ್ಥಾಪಿತವಾಗುವ ನಿಟ್ಟಿನಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವುದು ಶ್ಲಾಘನೀಯ. ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಬೆಳೆಸುತ್ತಿರುವ ಕಾರ್ಯ ಪ್ರಶಂಸನೀಯ ಎಂದು ಆನೆಗುಡ್ಡೆ ಶ್ರೀ ವಿನಾಯಕ ದೇಗುಲದ ಆಡಳಿತ ಧರ್ಮದರ್ಶಿಗಳಾದ ಶ್ರೀರಮಣ ಉಪಾಧ್ಯಾಯ ಅಭಿನಂದನಾ ನುಡಿಗಳನ್ನಾಡಿದ್ದಾರೆ.

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಸಹಯೋಗದೊಂದಿಗೆ ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಜಂಟಿ ಆಶ್ರಯದಲ್ಲಿ ಅರ್ಥಾಂಕುರ-20 ಸರಣಿ ತಾಳಮದ್ದಳೆಯಲ್ಲಿ ಕಲಾವಿದರನ್ನು ಗೌರವಿಸಿ ಜೂನ್ 4ರಂದು ಉಪಾಧ್ಯಾಯರು ಮಾತನ್ನಾಡಿದರು.

ಹಿರಿಯ ಅರ್ಥದಾರಿಗಳಾದ ಕುಮಾರ ಶಂಕರನಾರಾಯಣ, ಗೋಪಾಲಕೃಷ್ಣ ಶೆಟಿ ಮಾರ್ಕೋಡು, ಭರತ್ ಚಂದನ್ ಕೋಟೇಶ್ವರ, ವಾಗ್ವಿಲಾಸ ಭಟ್, ಪೂಜಾ ಆಚಾರ್ಯ, ಪವನ್ ಆಚಾರ್ಯ, ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ರಾಜಾರಾಮ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ತಾಳಮದ್ದಳೆ ವಾಲಿ ಮೋಕ್ಷ ರಂಗ ಪ್ರಸ್ತುತಿಗೊಂಡಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!