spot_img
Friday, June 5, 2026
spot_img

ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ 2026: ಕವನಗೋಷ್ಠಿ ಅಧ್ಯಕ್ಷರಾಗಿ ಕುಮಾರ್ ಸೃಜನ್. ಎನ್ ಗಾಣಿಗ.

ಮಂಡ್ಯ ಜಿಲ್ಲೆ ನಾಗಮಂಗಲದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಜನವರಿ 16ರಂದು ‘21 ನೇ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ’ವು ಅದ್ಧೂರಿಯಾಗಿ ಜರುಗಿತು. ಬೆಂಗಳೂರಿನ ಮಂಜುನಾಥ ನಗರದಲ್ಲಿರುವ ಇಂಡಿಯನ್ ಹೈಸ್ಕೂಲ್ ನ 10ನೇ ತರಗತಿ ವಿದ್ಯಾರ್ಥಿ ಕುಮಾರ್ ಸೃಜನ್ ಕವನ ಗೋಷ್ಠಿಯ ಅಧ್ಯಕ್ಷರಾಗಿ ಆಸೀನರಾಗಿದ್ದರು. ಈ ಅದ್ಭುತ ವೇದಿಕೆಯಲ್ಲಿ ಅಧ್ಯಕ್ಷ ಡಿ.ಮಂಜುನಾಥ್, ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದ ನಾಥಾ ಸ್ವಾಮೀಜಿ ಹಾಗೂ ಕಾರ್ಯದರ್ಶಿ ಶ್ರೀ ಪ್ರಸನ್ನ ನಾಥಾ ಸ್ವಾಮೀಜಿ ಅನೇಕ ಗಣ್ಯರು ಉಪಸ್ಥಿತರಿದ್ದರು. ಬಹುಮುಖ ಪ್ರತಿಭಾವಂತನಾಗಿರುವ ಸೃಜನ್. ಎನ್. ಈಗಾಗಲೇ ಹಲವಾರು ಕವನಗಳನ್ನು ರಚಿಸಿರುತ್ತಾನೆ. ಈ ಸಮ್ಮೇಳನದಲ್ಲಿ ನಿರ್ಮಲಾನಂದ ನಾಥ ಸ್ವಾಮೀಜಿ ಹಾಗೂ ಶ್ರೀ ಪ್ರಸನ್ನ ನಾಥಾ ಸ್ವಾಮೀಜಿ ಮಕ್ಕಳು ಓದಿನ ಜೊತೆ ಸಾಹಿತ್ಯದ ಮೇಲೆ ಅಪಾರ ಆಸಕ್ತಿ ಬೆಳೆಸಿಕೊಳ್ಳಬೇಕು ಎಂಬ ಹಿತವಚನವನ್ನು ಮನಮುಟ್ಟುವಂತೆ ನುಡಿದರು. ಈತನು ಸಂಗೀತ, ಚಿತ್ರಕಲೆ ಹಾಗೂ ಸಾಹಿತ್ಯದ ಮೇಲೆ ಅಪಾರವಾದ ಅಭಿರುಚಿ ಯನ್ನು ಹೊಂದಿರುತ್ತಾನೆ. ಸೃಜನ್ ಕುಂದಾಪುರ ತಾಲೂಕಿನ ಕುಂದಾಬಾರಂದಾಡಿಯ ನಿವಾಸಿ ನಾಗೇಶ್ ಗಾಣಿಗ ಮತ್ತು ಸವಿತಾ ದಂಪತಿಯ ಪುತ್ರರಾಗಿದ್ದಾರೆ. 2025 ರ ನವೆಂಬರ್ 28ರಂದು ಹಟ್ಟಿಅಂಗಡಿ ಯಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ದ ಕವಿಗೋಷ್ಠಿಯ ಅಧ್ಯಕ್ಷನಾಗಿಯೂ ತನ್ನ ಕೌಶಲ್ಯವನ್ನು ಮೆರೆದಿದ್ದಾನೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!