spot_img
Wednesday, June 3, 2026
spot_img

ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮಶಾಲೆ ಮತ್ತು ಪ್ರೌಢಶಾಲೆ ಗಣಿತ ನಗರದ ಶಾಲಾ ಪ್ರಾರಂಭೋತ್ಸವ

ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯ ಪ್ರಾರಂಭೊತ್ಸವವನ್ನು ದಿನಾಂಕ 01 ಜೂನ್ 2026ರಂದು ಅತ್ಯಂತ ವಿಜೃಂಭಣೆಯಿಂದ ಮಾಡಲಾಯಿತು.
ಕಾರ್ಕಳ ಜ್ಞಾನಸುಧಾಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಾಧನೆ ಹೆಜ್ಜೆ ಗುರುತುಗಳನ್ನು ದೃಶ್ಯಾಧಾರಿತವಾಗಿ ವಿಜ್ಞಾನ ಶಿಕ್ಷಕಿಯಾಗಿರುವ ಕುಮಾರಿ ಅನಿಶಾರವರು ಪ್ರಸ್ತುತ ಪಡಿಸಿದರು.
ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ವೈದ್ಯಾಧಿಕಾರಿಯಾದ ಶ್ರೀವಿದ್ಯಾ ಅವರು ಮಾತನಾಡಿ ದೈಹಿಕ, ಮಾನಸಿಕ ಮತ್ತು ಸಾಮಾಜಿಕವಾಗಿ ಉತ್ತಮವಾಗಿರುವುದು ಆರೋಗ್ಯದ ಲಕ್ಷಣ.ಧ್ಯಾನ ವ್ಯಾಯಾಮಗಳ ಮೂಲಕ ಉತ್ತಮ ಆರೋಗ್ಯವನ್ನು ನಾವು ಪಡೆಯಬಹುದು. ಜೀವನದಲ್ಲಿ ಒತ್ತಡಗಳು ಜಾಸ್ತಿಯಾದಾಗ ಆರೋಗ್ಯ ಹಾಳಾಗುತ್ತದೆ ಎಂದು ಹೇಳಿದರು.
ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯ ಉಪಪ್ರಾಂಶುಪಾಲೆಯಾಗಿರುವ ಶ್ರೀಮತಿ ವಾಣಿ.ಕೆ ಇವರು ಶಾಲಾ ಶಿಸ್ತು ಹಾಗೂ ನಿಯಮಗಳು, ಇಡೀ ವರ್ಷದ ಶಾಲೆಯ ಆಗುಹೋಗುಗಳ ಬಗ್ಗೆ ವಿವರಿಸಿ, ಪ್ರಾಸ್ತಾವಿಕ ನುಡಿಗಳೊಂದಿಗೆ ನೆರೆದಿರುವ ಎಲ್ಲರನ್ನೂ ಸ್ವಾಗತಿಸಿದರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿಇಒ ಹಾಗೂ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ದಿನೇಶ್ ಎಂ.ಕೊಡವೂರುರವರು 2026-27ರ ಶೈಕ್ಷಣಿಕ ವರ್ಷದ ಬಗ್ಗೆ ಶಾಲಾಮಾಹಿತಿಯನ್ನು ನೀಡಿದರು.ಜೆಇಎ ಸಂಯೋಜಕರಾದ  ಸಂದೀಪ್‌ರವರು ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಬಗ್ಗೆ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ಸ್ಟೂಡೆಂಟ್ ಡೀನ್ ಅಕಾಡಮಿಕ್ಸ್ ಡಾ.ಮಿಥುನ್.ಯು ಉಪಸ್ಥಿತರಿದ್ದರು. ವಿದ್ಯಾರ್ಥಿಗಳನ್ನು ಚಂಡೆ ನಾದದೊಂದಿಗೆ ವಿಶೇಷವಾಗಿ ಸ್ವಾಗತಿಸಲಾಯಿತು.
ವಿದ್ಯಾರ್ಥಿನಿ ಸಮೃದ್ಧಿ ಪೈ ಪ್ರಾರ್ಥಿಸಿ, ಸಹ ಶಿಕ್ಷಕಿ ಸುಪ್ರಿಯಾ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!