spot_img
Wednesday, July 29, 2026
spot_img

ಅರೆಹೊಳೆ ದಿಬ್ಬಣ: ರಂಗ ಶಿಬಿರ ‘ರಂಗಿನಾಟ’ಕ್ಕೆ ಚಾಲನೆ

ಬೈಂದೂರು: ಅರೆಹೊಳೆ ರೆಪರ್ಟರಿ ಮತ್ತು ಥಿಯೇಟರ್ ಸ್ಕೂಲ್ ಅರೆಹೊಳೆಯಲ್ಲಿ ಅರೆಹೊಳೆ ದಿಬ್ಬಣ ಕಾರ್ಯಕ್ರಮ ಎಪ್ರಿಲ್ 16ರಿಂದ ಎ.20ರ ತನಕ ನಡೆಯಲಿದ್ದು, ಹೆಮ್ಮೆಯ ಕಲೆ ಯಕ್ಷಗಾನ ಪ್ರಾತ್ಯಕ್ಷಿಕೆಯೊಂದಿಗೆ ವಿದ್ಯುಕ್ತ ಚಾಲನೆ ಪಡೆದುಕೊಂಡಿತು. ಎ.ಎಸ್.ಕೆ ಫೌಂಡೇಶನ್ ಪ್ರಾಯೋಜಿತ ಐದು ದಿನಗಳ ರಂಗ ಶಿಬಿರ ರಂಗಿನಾಟವನ್ನು ಯಕ್ಷಗಾನ ಗುರುಗಳಾದ ಸುಜಯೀಂದ್ರ ಹಂದೆ ಸಾಲಿಗ್ರಾಮ ಚಾಲನೆ ನೀಡಿದರು.

ಸುಜಯೀಂದ್ರ ಹಂದೆ ಹಾಗೂ ನವೀನ್ ಮಣೂರು ಯಕ್ಷಗಾನದ ಪ್ರಾತ್ಯಕ್ಷಿಕೆ ನೀಡಿದರು. ಭಾಗವತಿಕೆಯಲ್ಲಿ ಲಂಬೋಧರ ಹೆಗಡೆ, ಮದ್ದಳೆಯಲ್ಲಿ ರಾಹುಲ್ ಕೊಮೆ, ಚಂಡೆಯಲ್ಲಿ ಸುದೀಪ ಉರಾಳ ಸಹಕರಿಸಿದರು. ಬಣ್ಣದ ವೇಷದ ಪ್ರಾತ್ಯಕ್ಷಿಕೆಯನ್ನು ಶ್ರೀನಾಥ ಉರಾಳ, ಕೇದಗೆ ಮುಂದಲೆ ವೇಷದ ಪ್ರಾತ್ಯಕ್ಷಿಕೆಯನ್ನು ತಮ್ಮಣ್ಣ ಗಾಂವಕರ್ ನೀಡಿದರು. ಈ ಸಂದರ್ಭದಲ್ಲಿ ಶಿಬಿರಾರ್ಥಿಗಳ ಕುತೂಹಲದ ಪ್ರಶ್ನೆಗಳಿಗೆ ಸುಜಯೀಂದ್ರ ಹಂದೆ ಸಮರ್ಪಕ ಉತ್ತರ ನೀಡಿದರು.

ಅರೆಹೊಳೆ ಪ್ರತಿಷ್ಠಾನದ ರೂವಾರಿ ಅರೆಹೊಳೆ ಸದಾಶಿವ ರಾವ್ ಕಲಾವಿದರನ್ನು ಗೌರವಿಸಿದರು. ಈ ಸಂದರ್ಭದಲ್ಲಿ ರಂಗ ನಿರ್ದೇಶಕಿ ಶ್ವೇತ ಆರೆಹೊಳೆ, ಅರೆಹೊಳೆ ಪ್ರತಿಷ್ಠಾನ ಹಾಗೂ ನಂದಗೋಕುಲದ ಸದಸ್ಯರು, ಸ್ಥಳೀಯರು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!