spot_img
Wednesday, April 15, 2026
spot_img

ವಂಡ್ಸೆ: ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಕಾರು ಢಿಕ್ಕಿ :ಮಹಿಳೆ ಮೃತ್ಯು

ಕುಂದಾಪುರ: ರಸ್ತೆ ದಾಟುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವಂಡ್ಸೆಯಲ್ಲಿ ಮಂಗಳವಾರ ಸಂಜೆ ನಡೆದಿದೆ. ವಂಡ್ಸೆ ರಕ್ಷಾ ಹಿಟ್ಟಿನ ಗಿರಣಿಯ ಶಶಿಕಲಾ (52ವ) ಮೃತ ದುರ್ದೈವಿ.

ಶಶಿಕಲಾ ಅವರು ವಂಡ್ಸೆ ಪಂಚಾಯತ್ ಕಚೇರಿ ಬಳಿ ಇರುವ ರಕ್ಷಾ ಡಿಜಿಟಲ್ ಎಂಬ ಸೈಬರ್ ಅಂಗಡಿಗೆ ಆಗಾಗ ಬರುತ್ತಿದ್ದು ಎ.14ರ ಸಂಜೆ ರಾಜ್ಯ ಹೆದ್ದಾರಿ -27 ರ ಮುಖ್ಯರಸ್ತೆಯ ಪೂರ್ವ ಬದಿಯ ಕಾಲುದಾರಿಯಲ್ಲಿ ಕುಂದಾಪುರದ ಕಡೆಯಿಂದ ಕೊಲ್ಲೂರು ಕಡೆಗೆ ನಡೆದುಕೊಂಡು ಬರುತ್ತಿದ್ದು, ಈ ಸಮಯ ಅವರ ಎದುರು ಕೊಲ್ಲೂರು ಕಡೆಯಿಂದ ಕುಂದಾಪುರದ ಕಡೆಗೆ KA-20-MA-4559ನೇ ಕಾರನ್ನು ಅದರ ಚಾಲಕ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಶಶಿಕಲಾ ಮುಂದೆ ಇದ್ದ ಚರಂಡಿಗೆ ಬಿದ್ದಿದ್ದು, ಕಾರು ಸ್ವಲ್ಪ ಮುಂದೆ ಹೋಗಿ ಚರಂಡಿಗೆ ಬಿದ್ದಿದೆ. ಕೂಡಲೇ ಸುಶಾಂತ್ ಅವರು ಸ್ಥಳಕ್ಕೆ ಹೋಗಿ ಚಿಕ್ಕಮ್ಮನನ್ನು ಉಪಚರಿಸಿದ್ದು, ಅವರ ತಲೆಗೆ ತೀವ್ರತರದ ಗಾಯ ಹಾಗೂ ಎಡ ಕೈಗೆ ಮೂಳೆ ಮುರಿತದ ಗಾಯವಾಗಿದ್ದು, ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಕೂಡಲೇ ಸ್ಥಳೀಯರು ಅಂಬುಲೆನ್ಸ್ ಮೂಲಕ ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ಪರೀಕ್ಷಿಸಿದ ವೈದ್ಯರು ಆಗಲೇ ಶಶಿಕಲಾ ಅವರು ಮೃತ ಪಟ್ಟಿರುವುದಾಗಿ ದೃಡಪಡಿಸಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರು ಪತಿ, ಪುತ್ರಿಯನ್ನು ಅಗಲಿದ್ದಾರೆ. ಶಶಿಕಲಾ ಅವರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ದಿ.ಸುಬ್ಬ ವಿ ನಾಯ್ಕ್ ಹೊಲಾಡು ಇವರ ಪುತ್ರಿಯಾಗಿದ್ದು, ಕಳೆದ ಹಲವಾರು ವರ್ಷಗಳಿಂದ ವಂಡ್ಸೆಯಲ್ಲಿ ರಕ್ಷಾ ಹಿಟ್ಟಿನ ಗಿರಣಿ ನಡೆಸುತ್ತಿದ್ದರು. ವಂಡ್ಸೆಯಲ್ಲಿ ಪ್ರಥಮವಾಗಿ ಹಿಟ್ಟಿನ ಗಿರಣಿ ಹಾಗೂ ಎಣ್ಣೆ ತಯಾರಿಕ ಘಟಕ ಪ್ರಾರಂಭಿಸಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!