spot_img
Tuesday, April 14, 2026
spot_img

ಕಟ್ಟೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪುನಃ ಪ್ರತಿಷ್ಠೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ

ಶಂಕರನಾರಾಯಣ: ಕಟ್ಟೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವರ ನೂತನ ಶಿಲಾ ದೇಗುಲ ಲೋಕಾರ್ಪಣೆ, ಬ್ರಹ್ಮ ಕುಂಭಾಭಿಷೇಕ ಮತ್ತು ಪುನರ್ ಪ್ರತಿಷ್ಠೆ ಕಾರ್ಯಕ್ರಮವು ಮೇ 13 ಮತ್ತು ಮೇ 14 -2026ರಂದು ನಡೆಯಲಿದ್ದು, ಧಾರ್ಮಿಕ ಸಮಾರಂಭದ ಆಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಎಪ್ರಿಲ್14 ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು.

ಬಾರ್ಕೂರು ಕೋಟೆಕೇರಿ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಮತ್ತು ಹುಬ್ಬಳ್ಳಿಯ ಹೋಟೆಲ್ ಉದ್ಯಮಿಗಳು ಆದ ಸುಗ್ಗಿ ಸುಧಾಕರ ಶೆಟ್ಟಿಯವರು ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಶಂಕರನಾರಾಯಣದ ಶ್ರೀ ವಿಶ್ವಕರ್ಮ ಎಂಜಿನಿಯರಿಂಗ್ ವರ್ಕ್ಸ್ ನ ಪ್ರಭಾಕರ ಆಚಾರ್ಯರು ಸೇವಾರೂಪದಲ್ಲಿ ನೀಡಿದ ದೇವಸ್ಥಾನದ ಸೇವಾ ಕೌಂಟರ್ ನ ಉದ್ಘಾಟನೆಯನ್ನು ಕ್ರೋಢ ಶ್ರೀ ಶಂಕರನಾರಾಯಣ ದೇವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀ ಲಕ್ಷ್ಮೀನಾರಾಯಣ ಉಡುಪರು ನೆರವೇರಿಸಿದರು.

ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ದಿನಕರ ತೋಳಾರ್, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ರಾಜೀವ ಶೆಟ್ಟಿ ಶಾಡಿಗುಂಡಿ, ಮೆಟ್ಕಲ್ ಶ್ರೀ ಮಹಾಗಣಪತಿ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಎಂ.ಸುಧಾಕರ ಶೆಟ್ಟಿ, ಬಾರ್ಕೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ್, ಸಿದ್ದಾಪುರ ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷರಾದ ಭೋಜು ಶೆಟ್ಟಿ, ಸಿದ್ದಾಪುರ, ನಿವೃತ್ತ ಅಬಕಾರಿ ಅಧಿಕಾರಿ ಜನ್ಸಾಲೆ ಶಿವರಾಮ ಶೆಟ್ಟಿ, ಜಾಂಬ್ಳಿ ಭಾಸ್ಕರ ಶೆಟ್ಟಿ, ಚಂದ್ರಹಾಸ ಹೆಗ್ಡೆ, ಉದ್ಯಮಿ ಜಯಕರ ಶೆಟ್ಟಿ ಕುಂದಾಪುರ, ನಾರಾಯಣ ನಾಯ್ಕ ಕಟ್ಟೆಮಕ್ಕಿ, ಎಚ್.ಭಾಸ್ಕರ ಶೆಟ್ಟಿ ಕೊಂಡಳ್ಳಿ, ಎಸ್. ಶ್ರೀಧರ ಶೇಟ್ , ಆಡಳಿತ ಸಮಿತಿಯ ಕಾರ್ಯದರ್ಶಿ ಆನಂದ ನಾಯ್ಕ, ಪಾಂಡುರಂಗ ನಾಯ್ಕ ತಲಾರಿ, ರಾಹುಲ್ ರಾವ್ ಅಬ್ಯಾಡಿ , ರಾಮ ಮೊಗವೀರ ಕೊಂಡಳ್ಳಿ, ನಾಗರಾಜ ತಲ್ಲಂಜೆ , ಚಂದ್ರಶೇಖರ ಶೆಟ್ಟಿ ಮಣಿಗೇರಿ, ಸಂಜೀವ ಮಡಿವಾಳ ಕಟ್ಟೆಮಕ್ಕಿ , ಎಸ್.ಆರ್. ನಾಗರಾಜ ಶೆಟ್ಟಿ, ಅಪ್ಪು ಶೆಟ್ಟಿಗಾರ್ ಕಟ್ಟೆಮಕ್ಕಿ, ವಿಶ್ವನಾಥ ಶೆಟ್ಟಿಗಾರ್ ಕಟ್ಟೆಮಕ್ಕಿ, ಮಹಾಬಲ ನಾಯ್ಕ ಕಟ್ಟೆಮಕ್ಕಿ, ನಾಗರಾಜ್ ಡಿ.ಎಸ್., ಮತ್ತು ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಸೂರ್ಯಪ್ರಕಾಶ ದಾಮ್ಲೆ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!