spot_img
Saturday, February 7, 2026
spot_img

ಬಗ್ವಾಡಿಯಲ್ಲಿಯೂ ಗುರುಪೀಠ ಸ್ಥಾಪನೆ-ಡಾ.ಜಿ.ಶಂಕರ್ | ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ನೂತನ ಪದಾಧಿಕಾರಿಗಳ ಪದಪ್ರದಾನ

ಹೆಮ್ಮಾಡಿ : ಸಂಘಟನೆಯ ಮೂಲಕ ಸಮಾಜದ ಏಳ್ಗೆ ಸಾಧ್ಯವಿದೆ. ಸ್ವಾಭಿಮಾನವನ್ನು ಯಾರಿಗೂ ಒತ್ತೆ ಇಡುವುದು ಬೇಡ. ಹೋಬಳಿಗಳೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಂಡು ಸಮಾಜದ ಸಾಮಾಜಿಕ, ಶೈಕ್ಷಣಿಕ ಪ್ರಗತಿಯಲ್ಲಿ ಸಹಭಾಗಿಗಳೋಣ. ಯುವ ಸಂಘಟನಾ ಶಕ್ತಿಯ ಮೂಲಕ ಮತ್ತೊಮ್ಮೆ ಹೆಮ್ಮಾಡಿ ಘಟಕ ಬಲಿಷ್ಠ ಘಟಕವಾಗಿ ಮೂಡಿಬರಲಿ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ. ಜಿ.ಶಂಕರ್ ಹೇಳಿದರು.

ಅವರು ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಮೀನುಗಾರರ ಸಹಕಾರ ಸಂಘದ ಮತ್ಸ್ಯಜ್ಯೋತಿ ಸಭಾಂಗಣದಲ್ಲಿ ನಡೆದ ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕದ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಾರ್ಚ್ ೧ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ನಿರ್ಮಾಣದ ಸಲುವಾಗಿ ಸಾಮೂಹಿಕ ಗುರು ಪಾದ ಕಾಣಿಕೆ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ. ಅದರಲ್ಲಿ ತಾವೆಲ್ಲರೂ ಪಾಲ್ಗೊಳ್ಳುವ ಮೂಲಕ ಸಮಾಜದ ಒಗ್ಗಟ್ಟನ್ನು ಬಿಂಬಿಸಬೇಕು. ಅದೇ ರೀತಿ ಬಗ್ವಾಡಿಯಲ್ಲೂ ಕೂಡಾ ಗುರುಪೀಠ ಸ್ಥಾಪನೆ ಮಾಡಲಾಗುವುದು ಎಂದರು.

ಮೊಗವೀರ ಯುವ ಸಂಘಟನೆಯ ನಿಕಟಪೂರ್ವ ಅಧ್ಯಕ್ಷ ದಿನೇಶ ಬಿ.ಕಾಂಚನ್ ಬಾಳಿಕೆರೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರವೀಣ ಮೊಗವೀರ ಗಂಗೊಳ್ಳಿ, ನೂತನ ಕಾರ್ಯದರ್ಶಿ ಜಯಂತ್ ಕುಂದರ್ ಬಾಳಿಕೆರೆ, ನೂತನ ಕೋಶಾಧಿಕಾರಿ ಸಂತೋಷ್ ಆರ್ ಮೊಗವೀರ ಸುಳ್ಸೆ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು.

ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾ ಅಧ್ಯಕ್ಷ ಜಯಂತ್ ಅಮೀನ್ ಕೋಡಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಮೊಗವೀರ ಮಹಾಜನ ಸೇವಾ ಸಂಘ(ರಿ.), ಬಗ್ವಾಡಿ ಹೋಬಳಿ ಮುಂಬಯಿ-ಕುಂದಾಪುರ ಶಾಖೆ ಅಧ್ಯಕ್ಷ ಉದಯಕುಮಾರ್ ಹಟ್ಟಿಯಂಗಡಿ, ಜಿಲ್ಲಾ ಸಂಘಟನೆ ಕಾರ್ಯದರ್ಶಿ ರವೀಂದ್ರ ಪುತ್ರನ್, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡ್ಕ, ಮಾಜಿ ಅಧ್ಯಕ್ಷ ಸದಾನಂದ ಬಳ್ಕೂರು,ಜಿಲ್ಲಾ ಸಂಘಟನೆಯ ನಿಯೋಜಿತ ಅಧ್ಯಕ್ಷ ರವೀಶ ಕೊರವಡಿ, ನಿಯೋಜಿತ ಪ್ರಧಾನ ಕಾರ್ಯದರ್ಶಿ ಶೇಖರ ತೋಳಾರ್, ಕಟ್ ಬೇಲ್ತೂರು ಗ್ರಾ.ಪಂ ಮಾಜಿ ಅಧ್ಯಕ್ಷ ನಾಗರಾಜ ಪುತ್ರನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಜಯಂತ್ ಅಮೀನ್ ಕೋಡಿ, ಕಾರ್ಯದರ್ಶಿ ರವೀಂದ್ರ ಪುತ್ರನ್ ಹಾಗೂ ಹೆಮ್ಮಾಡಿ ಘಟಕದ ನಿಕಟಪೂರ್ವ ಅಧ್ಯಕ್ಷ ದಿನೇಶ ಕಾಂಚನ್, ಕಾರ್ಯದರ್ಶಿ ಜಗದೀಶ ಎಮ್.ನೆಂಪು, ಕೋಶಾಧಿಕಾರಿ ವಿಜಯ ಪಿ ಕಾಂಚನ್ ನಾಡ ಅವರನ್ನು ಸನ್ಮಾನಿಸಲಾಯಿತು.

ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಪ್ರವೀಣ ಮೊಗವೀರ ಗಂಗೊಳ್ಳಿ ಅವರು ಮಾತನಾಡಿ, ನಾಡೋಜ ಜಿ.ಶಂಕರ್ ಮಾರ್ಗದರ್ಶನದಲ್ಲಿ ಸಂಘಟನೆಯನ್ನು ಬಲಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ. ಮುಂದೆಯೂ ಕೂಡಾ ಸಮಾಜಬಾಂಧವರು ಸಹಕಾರ ನೀಡಿ ಸಂಘಟನೆ ಬಲಿಷ್ಠಗೊಳಿಸುವಲ್ಲಿ ಪ್ರೋತ್ಸಾಹಿಸಬೇಕು ಎಂದರು.

ಭಾಸ್ಕರ ಬಟ್ಟೆಕುದ್ರು ಪ್ರಾರ್ಥನೆಗೈದರು. ಮೊಗವೀರ ಮಹಾಜನ ಸೇವಾ ಸಂಘ(ರಿ.), ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಕಾರ್ಯದರ್ಶಿ ಪ್ರಭಾಕರ ಸೇನಾಪುರ ಸ್ವಾಗತಿಸಿದರು. ಹೆಮ್ಮಾಡಿ ಘಟಕದ ಸ್ಥಾಪಕಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಜಗದೀಶ ಎಮ್.ನೆಂಪು ವರದಿ ಮಂಡಿಸಿದರು. ಕೋಶಾಧಿಕಾರಿ ವಿಜಯ ಪಿ.ಕಾಂಚನ್ ನಾಡ ಲೆಕ್ಕಪತ್ರ ಮಂಡಿಸಿದರು. ಹೆಮ್ಮಾಡಿ ಘಟಕದ ಗೌರವಾಧ್ಯಕ್ಷ ಲೋಹಿತಾಶ್ವ ಆರ್.ಕುಂದರ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಕಾರ್ಯಕ್ರಮ ಪೂರ್ವದಲ್ಲಿ ಸುಶಾಂತ್ ಉಪ್ಪಿನಕುದ್ರು ಹಾಗೂ ಶ್ರೇಯ ಕಂಚುಗೋಡು ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!