spot_img
Sunday, February 8, 2026
spot_img

ಶಿಕ್ಷಣದೊಂದಿಗೆ ವ್ಯಾವಹಾರಿಕ ಜ್ಞಾನ ಪರಿಚಯಿಸಿದಾಗ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ-ಕಿರಣ್ ಕುಮಾರ್ ಕೊಡ್ಗಿ | ಅಮಾಸೆಬೈಲು ಡ್ಯುಯಲ್ ಸ್ಟಾರ್ ಶಾಲೆಯಲ್ಲಿ ತಾರೋತ್ಸವ 2026 ಉದ್ಘಾಟನೆ

ಅಮಾಸೆಬೈಲು : ಶಾಲೆಯಲ್ಲಿ ಶಿಕ್ಷಣ ಜೊತೆಗೆ ಅವರಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಮತ್ತು ವ್ಯವಹಾರಿಕ ಜ್ಞಾನದ ಪರಿಚಯವನ್ನು ಮಾಡಿಸಬೇಕು ಆಗ ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಲು ಸಾಧ್ಯವೆಂದು ಕುಂದಾಪುರ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿ ಅಭಿಪ್ರಾಯಪಟ್ಟರು.

ಅವರು ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲು ಇಲ್ಲಿ ತಾರೋತ್ಸವ ೨೦೨೬ ನ್ನು ಉದ್ಘಾಟಿಸಿ, ಈಗ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಎಲ್ಲರೂ ಪ್ರಥಮ ಶ್ರೇಣಿಯಲ್ಲಿ ಪಾಸ್ ಆಗುತ್ತಿದ್ದಾರೆ ಆದರೆ ವ್ಯವಹಾರಿಕವಾಗಿ ಸ್ಪಂದಿಸಲು ಹಿಂದೇಟು ಹಾಕುತ್ತಿದ್ದಾರೆ ಅವರಿಗೆ ಸರಿಯಾದ ಮಾರ್ಗದರ್ಶನದ ಕೊರತೆ ಇದೆ ಅದನ್ನು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಾಗ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಮಕ್ಕಳಿಂದ ರಚಿಸಿರುವ ವಿಬ್ಗಯಾರ್ ಚಿತ್ರಕಲೆಯ ಪ್ರದರ್ಶನವನ್ನ ಕುಂದಾಪುರ ತಾಲೂಕು ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಉದ್ಘಾಟಿಸಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಪ್ರತಿಭೆ ಇದೆ ಆದರೆ ಅವರಿಗೆ ಸರಿಯಾದ ವೇದಿಕೆ ಸಿಗುತ್ತಿಲ್ಲ ಆದರೆ ಇಂತಹ ವೇದಿಕೆಗಳು ಎಲೆಮರೆಯ ಕಾಯಿಯಂತಿರುವ ವಿದ್ಯಾರ್ಥಿಗಳಿಗೆ ಉಪಯೋಗಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕ್ರಾಫ್ಟ್ ಕಾರ್ನಿವಾಲ್ ಪ್ರಗತಿಪರ ಕೃಷಿಕರಾದ ದಿನೇಶ್ ಎಡಿಯಾಳ್ ಚಕ್ರ ಮೈದಾನ ಉದ್ಘಾಟಿಸಿದರು. ಸಾಂಸ್ಕೃತಿಕ ಮೇಳವನ್ನು ಅಶ್ವಿನಿ ಮ್ಯೂಸಿಕಲ್ ನ ಮಂಜುನಾಥ್ ಕುಲಾಲ್ ರಟ್ಟಾಡಿ ರವರು ಉದ್ಘಾಟಿಸಿದರು.

ಸಭೆಯ ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ಸದಸ್ಯರಾದ ರಘುಪತಿ ಭಟ್ ಗೆಣಸಿನಕುಣಿ ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಪ್ರಾಂಶುಪಾಲ ವಡ್ದರ್ಸೆ ಪ್ರಕಾಶ್ ಆಚಾರ್ಯ, ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ಪಾಂಡುರಂಗ ಪೈ, ಆಡಳಿತ ಮಂಡಳಿ ಸದಸ್ಯರಾದ ಗುರುರಾಜ್ ಅಡಿಗ ವಡ್ಡರ್ಸೆ, ಶಾಲಾ ಸಂಚಾಲಕ ಶಶಿಧರ ದೇವಾಡಿಗ, ಶಾಲಾ ಪೋಷಕರಾದ ರಾಜಾರಾಮ ಗುರೂಜಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶಂಕರ್ ನಾಯ್ಕ ಪಡುಹೆಮಣ್ಣು ಕಾರ್ಯದರ್ಶಿಗಳಾದ ಶ್ರೀಮಾ ಹೆಮ್ಮಣ್ಣ, ಶಾಲಾ ಮುಖ್ಯೋಪಾಧ್ಯಾಯಿನಿ ರಾಧಿಕಾ ಎಸ್, ಶಾಲಾ ವಿದ್ಯಾರ್ಥಿ ನಾಯಕಿ ವೈಷ್ಣವಿ ಶೆಟ್ಟಿ, ಕಾರ್ಯಕ್ರಮ ಸಂಯೋಜಕರಾದ ಸುಭಿಕ್ಷ ಕೆ, ಕುಮಾರ ಸಾಲಿಗ್ರಾಮ, ಅಮಿತಾ ಬೆಪ್ಡೆ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಅದಿತಿ ಎಸ್ ಹೆಮ್ಮಣ್ಣ, ಸಚ್ಚಿದಾನಂದ ಭಟ್ಟ ಪ್ರಾರ್ಥಿಸಿದರು, ಪ್ರಕಾಶ್ ಆಚಾರ್ಯ ವಡ್ಡರ್ಸೆ ಸ್ವಾಗತಿಸಿದರು, ತಾರೋತ್ಸವ ಸಮಿತಿಯ ಸಂಚಾಲಕಿ ಸುಭಿಕ್ಷ ಕೆ ವಂದಿಸಿದರು, ಶಾಲಾ ಶಿಕ್ಷಕಿ ಅಮೃತಾ ಎಸ್ ಕುಲಾಲ್ ರವರು ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿಗಳ ಮಳಿಗೆಯಲ್ಲಿ ಚಾಟ್ ಮಸಾಲ, ಪುನರ್ಪುಳಿ ಜ್ಯೂಸ್, ನಿಂಬು ಶರಬತ್ತು, ಮಾವಿನಕಾಯಿ, ಸೊಪ್ಪು, ತರಕಾರಿ, ಹಣ್ಣು, ಮಕ್ಕಳ ಆಟಿಕೆಗಳು, ಮೇಕಪ್ ಕಿಟ್, ಪೆನ್ಸಿಲ್, ಪೆನ್ನು, ಪುಸ್ತಕ ಇನ್ನಿತರ ವಸ್ತುಗಳು ಮಾರಾಟಕ್ಕೆ ಇದ್ದವು. ವಿಬ್ಗಯಾರ್ ಚಿತ್ರ ಮೇಳದಲ್ಲಿ ಭಾವಚಿತ್ರ, ಪ್ರಕೃತಿ, ಹನುಮ, ಕಾಡು, ಮನೆ, ಹೂವು, ಚಿಟ್ಟೆ ಇನ್ನಿತರ ಚಿತ್ರಗಳಿದ್ದವು.

ಕ್ರಾಫ್ಟ್ ಕಾರ್ನಿವಲ್ ನಲ್ಲಿ ಮನೆಯ ಮಾಡೆಲ್, ಸೌರಮಂಡಲ ವ್ಯವಸ್ಥೆ, ವಿಜ್ಞಾನ ಪ್ರಯೋಗಾಲಯ, ಗಣಿತದ ಮೆಜರ್ಮೆಂಟ್ ಪಾರ್ಕ್, ವಾಲ್ ಹ್ಯಾಂಗಿಂಗ್ಸ್ ಗಳು, ಪಿಸ್ತಾ ಚಿಪ್ಪಿನಲ್ಲಿ ಮಾಡಿದ ಕರಕುಶಲ ವಸ್ತುಗಳು, ತೆಂಗಿನ ಗರಟೆಯಿಂದ ಮಾಡಿದ ಇಲಿ, ಕಡಲೆ ಸಿಪ್ಪೆಯಿಂದ ಮಾಡಿದ ಬುಟ್ಟಿ, ಕಸದಿಂದ ರಸ ಇನ್ನಿತರ ವಸ್ತುಗಳು ಪ್ರದರ್ಶನಕ್ಕೆ ಇಡಲಾಯಿತು.

ಸಾಂಸ್ಕೃತಿಕ ಮೇಳದಲ್ಲಿ ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಮೂರು ಗಂಟೆಗಳ ಕಾಲ ಗಾನ ವೈಭವದ ರಸದೌತಣವನ್ನು ಕೇಳುಗರಿಗೆ ನ ಉಣ ಬಡಿಸಲಾಯಿತು. ಇದರಲ್ಲಿ ಶಿಶು ಗೀತೆ, ಭಾವ ಗೀತೆ, ಸಮೂಹ ಗೀತೆ, ಚಿತ್ರಗೀತೆ, ಯುಗಳ ಗೀತೆ ಮುಂತಾದ ಹಾಡುಗಳನ್ನು ಹಾಡಿ, ರಂಜಿಸಿದರು.

ಅತಿಥಿ ಗಣ್ಯರನ್ನು ಚಂಡೆ ವಾದನದ ಮೂಲಕ ಸ್ವಾಗತಿಸಲಾಯಿತು. ವಿದ್ಯಾರ್ಥಿಗಳು ವಿವಿಧ ರೀತಿಯ ತಿಂಡಿ, ತಿನಿಸು, ಆಟಿಕೆಗಳು ಆಭರಣಗಳು ಮುಂತಾದಗಳನ್ನು ಶಾಲಾ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾರಾಟ ಮಾಡುವುದರ ಮೂಲಕವಾಗಿ ಒಂದು ವಸ್ತುವನ್ನು ಕೊಂಡು ಅದನ್ನು ಯಾವ ರೀತಿ ಮಾರಾಟ ಮಾಡಬೇಕು ಎನ್ನುವ ವ್ಯವಹಾರಿಕ ಜಾನವನ್ನು ಬೆಳೆಸಿಕೊಂಡರು. ಡ್ರಾಯಿಂಗ್ ಮೇಳದಲ್ಲಿ ವಿದ್ಯಾರ್ಥಿಗಳು ರಚಿಸಿರುವ ೨೦೦ಕ್ಕಿಂತ ಹೆಚ್ಚು ಚಿತ್ರಕಲೆಗಳನ್ನು ಪ್ರದರ್ಶಿಸಲಾಯಿತು. ಕ್ರಾಫ್ಟ್ ಮೇಳದಲ್ಲಿ ನೂರಕ್ಕಿಂತ ಹೆಚ್ಚು ವಿವಿಧ ರೀತಿಯ ಮಾದರಿಗಳನ್ನು ಪ್ರದರ್ಶನ ಮಾಡಲಾಯಿತು. ಸಾಂಸ್ಕೃತಿಕ ಮೇಳದಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ಪೋಷಕರು ವಿವಿಧ ರೀತಿಯ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು ಒಟ್ಟಿನಲ್ಲಿ ತಾರೋತ್ಸವವು ಮಕ್ಕಳಿಗೆ ಉತ್ಸವದಂತೆ ಕಂಡುಬಂದಿದ್ದು ವಿದ್ಯಾರ್ಥಿಗಳು ಶಿಕ್ಷಕರು, ಪೋಷಕರು ವಿದ್ಯಾಭಿಮಾನಿಗಳು ತುಂಬಾ ಆಸಕ್ತಿ ಮತ್ತು ಸಂಭ್ರಮದಿಂದ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಉತ್ತೇಜನವನ್ನು ನೀಡಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!