spot_img
Friday, February 6, 2026
spot_img

ಯಕ್ಷ ಕವಿ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರಿಗೆ ಸನ್ಮಾನ

ಕುಂದಾಪುರ: ಯಕ್ಷಗಾನ ಕಲೆ ಕರಾವಳಿಗರ ನೆಚ್ಚಿನ ಕಲೆ. ದೇಗುಲಗಳಲ್ಲಿ ಪುರಾಣ ಕಥನಗಳ ಸ್ತುತಿ ಹೆಚ್ಚು ಸೂಕ್ತ. ಗಾನಾರ್ಚನೆಯ ಮೂಲಕ ಯಕ್ಷ ಕಲೆ ದೇಗುಲಗಳಲ್ಲಿ ಪ್ರಸ್ತುತ ಕಾಲಘಟ್ಟದಲ್ಲಿ ಅಲ್ಲಲ್ಲಿ ನಿರಂತರವಾಗಿ ಆರಾಧಿಸಲ್ಪಡುತ್ತದೆ. ಚಿಕ್ಕು ಹಾಯ್ಗುಳಿ ಸಪರಿವಾರ ದೈವಸ್ಥಾನ ಮೊಗೆಬೆಟ್ಟು ಅಸಂಖ್ಯ ಭಕ್ತಾದಿಗಳಿಂದ ಕೂಡಿದ ದೇಗುಲ. ಅನೇಕ ಕಲಾಸಕ್ತ ಬಂಧುಗಳು ಏಕಾಗ್ರಚಿತ್ತದಿಂದ ಗಾನಾರ್ಚನೆಯನ್ನು ಆಲಿಸಿ ಧಾರ್ಮಿಕ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದ್ದಾರೆ ಎಂದು ಮೊಗೆಬೆಟ್ಟು ಸೀತಾರಾಮ ಶೆಟ್ಟಿ ಹೇಳಿದರು.

ಫೆಬ್ರವರಿ 5ರಂದು ಚಿಕ್ಕು ಹಾಯ್ಗುಳಿ ಸಪರಿವಾರ ದೈವಸ್ಥಾನದಲ್ಲಿ ಜಾತ್ರೆಯ ಪ್ರಯುಕ್ತ ಯಶಸ್ವೀ ಕಲಾವೃಂದ ಕೊಮೆ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಡೆದ ಯಕ್ಷ ಗಾನ ವೈಭವ ಕಾರ್ಯಕ್ರಮದಲ್ಲಿ ಯಕ್ಷ ಕವಿ, ಭಾಗವತ, ಗುರುಗಳಾದ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರನ್ನು ಗೌರವಿಸಿ ಮಾತನ್ನಾಡಿದರು.

ನಾಗೇಶ ಶಾನುಭಾಗ್ ಮಾತನ್ನಾಡಿ, ಕಲೆಯ ಸಮೃದ್ಧಿ ತಾಣವಾದ ಕರಾವಳಿಯ ಗಂಡು ಕಲೆ ಯಕ್ಷಗಾನ ದೇಗುಲಗಳಲ್ಲಿ ಆಗಾಗ ಏರ್ಪಡಿಸಿಕೊಂಡು ಕಲಾ ರಸಿಕರಿಗೆ ಬೆಳಕಾಗಬೇಕು ಎಂದರು.

ಆನಂದ ಶೆಟ್ಟಿ ಮೊಗೆಬೆಟ್ಟು, ವಿಠ್ಠಲ ಶೆಟ್ಟಿ, ಭಾಗವತ ಲಂಬೋದರ ಹೆಗಡೆ ನಿಟ್ಟೂರು, ಪಂಚಮಿ ವೈದ್ಯ, ಪೂಜಾ ಆಚಾರ್, ರಾಘವೇಂದ್ರ ಹೆಗಡೆ ಯಲ್ಲಾಪುರ, ಕುಮಾರ ಅಮೀನ್, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು.

 

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಅಂಗನವಾಡಿ ಶಿಕ್ಷಕರಿಗೆ ಹಾಗೂ ಸಹಾಯಕರಿಗೆ ಗ್ರಾಚುವಿಟಿ ಸೌಲಭ್ಯ ಒದಗಿಸಲು ಶಾಸಕ ಗಂಟಿಹೊಳೆ ಸದನದಲ್ಲಿ ಒತ್ತಾಯ

ಬೆಂಗಳೂರು: ರಾಜ್ಯದಲ್ಲಿ ಅಂಗನವಾಡಿ ಶಿಕ್ಷಕರಾಗಿ ಹಾಗೂ ಸಹಾಯಕರಾಗಿ ಹಲವು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಈಗಾಗಲೇ ನಿವೃತ್ತರಾದವರು ತಮ್ಮ ಸೇವಾವಧಿಯಲ್ಲಿ ಅತೀ ಕಡಿಮೆ ಗೌರವ ಧನದಲ್ಲಿ ಸೇವೆ ಸಲ್ಲಿಸಿ, ಯಾವುದೇ ಇತರೆ ಸೌಲಭ್ಯಗಳಿಲ್ಲದೇ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!