spot_img
Thursday, February 5, 2026
spot_img

ಗುಜ್ಜಾಡಿ: ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ

ಕುಂದಾಪುರ : ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ದಾನಿಗಳು ಸರಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿ ಶಾಲೆಯ ಸರ್ವತೋಮುಖ ಅಭಿವೃದ್ಧಿ ಮಾಡುವ ಪ್ರಯತ್ನ ನಡೆಯುತ್ತಿದೆ. ಸರಕಾರದಿಂದ ಅನುದಾನ ಬಿಡುಗಡೆಯಾದ ಬಳಿಕ ರಸ್ತೆ ಅಭಿವೃದ್ಧಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದರು.

ಬೈಂದೂರು ವಿಧಾನಸಭಾ ಕ್ಷೇತ್ರದ ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 2 ಲಕ್ಷ ವೆಚ್ಚದಲ್ಲಿ ಕೊಡಂಚ ರಸ್ತೆ ಮತ್ತು ಸುಮಾರು 3 ಲಕ್ಷ ರೂ. ವೆಚದಲ್ಲಿ ಪರಮತೋಟ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಪುರೋಹಿತರಾದ ಜಿ.ವಿಠಲದಾಸ ಭಟ್ ಗಂಗೊಳ್ಳಿ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ., ಗುಜ್ಜಾಡಿಯ ಉದ್ಯಮಿ ಉಮೇಶ ಎಲ್.ಮೇಸ್ತ, ಗುಜ್ಜಾಡಿ ಗ್ರಾಪಂ. ಸದಸ್ಯರಾದ ಹರೀಶ ಮೇಸ್ತ, ತುಂಗಾ ಪೂಜಾರ್‍ತಿ, ಶ್ರೀಧರ, ಗುಜ್ಜಾಡಿ ಶಕ್ತಿ ಕೇಂದ್ರದ ಅಧ್ಯಕ್ಷ ರಾಜು ಪೂಜಾರಿ, ಮೋಹನ ನಾಯ್ಕ್, ಜಿ. ರೋಹಿದಾಸ ನಾಯಕ್, ಅಶೋಕ ನಾಯ್ಕ್, ರಾಮನಾಥ ಚಿತ್ತಾಲ್, ಅಕ್ಷಯ ಮಂಕಿ, ಸುಕ್ರ ಪೂಜಾರಿ, ಸುಧಾಕರ ಪೂಜಾರಿ, ಶ್ರೀಧರ ಪೂಜಾರಿ, ನರಸಿಂಹ ನಾಯ್ಕ್, ಬೈಂದೂರು ಮಂಡಲ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಜಯಂತ್, ಪಕ್ಷದ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಅಂಗನವಾಡಿ ಶಿಕ್ಷಕರಿಗೆ ಹಾಗೂ ಸಹಾಯಕರಿಗೆ ಗ್ರಾಚುವಿಟಿ ಸೌಲಭ್ಯ ಒದಗಿಸಲು ಶಾಸಕ ಗಂಟಿಹೊಳೆ ಸದನದಲ್ಲಿ ಒತ್ತಾಯ

ಬೆಂಗಳೂರು: ರಾಜ್ಯದಲ್ಲಿ ಅಂಗನವಾಡಿ ಶಿಕ್ಷಕರಾಗಿ ಹಾಗೂ ಸಹಾಯಕರಾಗಿ ಹಲವು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಈಗಾಗಲೇ ನಿವೃತ್ತರಾದವರು ತಮ್ಮ ಸೇವಾವಧಿಯಲ್ಲಿ ಅತೀ ಕಡಿಮೆ ಗೌರವ ಧನದಲ್ಲಿ ಸೇವೆ ಸಲ್ಲಿಸಿ, ಯಾವುದೇ ಇತರೆ ಸೌಲಭ್ಯಗಳಿಲ್ಲದೇ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!