spot_img
Saturday, March 21, 2026
spot_img

ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘದ ಅಮೃತ ಮಹೋತ್ಸವ ‘ಅಮೃತಯಾನ’ ಸಂಪನ್ನ | ರೈತ ಸಹಕಾರಿಗಳ ಪ್ರಗತಿಯಲ್ಲಿ ಮಾನಂಜೆ ಸಹಕಾರ ಸಂಘದ ಪಾತ್ರ ಮಹತ್ತರ-ಎಸ್.ಸಚ್ಚಿದಾನಂದ ಚಾತ್ರ

ಜನಪ್ರತಿನಿಧಿ ವಾರ್ತೆ] ಕುಂದಾಪುರ, ಜ.31:  1950ರಲ್ಲಿ ನಾರಾಯಣ ರಾಯರು ಸಮಾನಮನಸ್ಕರನ್ನು ಸೇರಿಸಿಕೊಂಡು ಮಾನಂಜೆ ಮನೆಯಲ್ಲಿ ಸೊಸೈಟಿ ಆರಂಭಿಸಿದರು. ನಾರಾಯಣ ರಾಯರು ಮತ್ತು ಅಂದಿನ ಕಾರ್ಯದರ್ಶಿ ಸತ್ಯನಾರಾಯಣ ರಾವ್ ಲಾಟೀನು ಹಿಡಿದುಕೊಂಡು ಮನೆಮನೆಗೆ ತೆರಳಿ ಸಹಕಾರ ತತ್ವವನ್ನು ತಿಳಿಸಿ ಈ ಸಂಸ್ಥೆಯನ್ನು ಕಟ್ಟಿದರು. ಇವತ್ತು ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘ ಪ್ರಬಲವಾಗಿ ಬೆಳೆದು ಅಮೃತಮನಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿ, ದಾನಧರ್ಮ ಪ್ರಕ್ರಿಯೆಗಳಿಗೆ ಒತ್ತು ನೀಡಲಿ, ಠೇವಣಿದಾರರು, ಸಾಲಗಾರರನ್ನು ಒಂದೇ ರೀತಿಯಲ್ಲಿ ಪರಿಗಣಿಸಿ ರೈತ ಸಹಕಾರಿಗಳ ಬೆಳವಣಿಗೆಯಲ್ಲಿ ಶ್ರಮಿಸಲಿ. ಎಲ್ಲ ಸದಸ್ಯರು ಕೂಡಾ ಯಾವುದೇ ದುರಭ್ಯಾಸಗಳಿಗೆ ಒಳಗಾಗದೆ ಶ್ರಮಪಟ್ಟು ದುಡಿದು ಸಾರ್ಥಕ ಜೀವನ ನೆಡೆಸಲಿ ಎಂದು ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಎಸ್.ಸಚ್ಚಿದಾನಂದ ಚಾತ್ರ ಹೇಳಿದರು.

ಕುಂದಾಪುರ ತಾಲೂಕು ಕಮಲಶಿಲೆ ಗ್ರಾಮದ ಮಾನಂಜೆಯಲ್ಲಿ ಪ್ರಧಾನ ಕಛೇರಿ ಹೊಂದಿರುವ ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘ ನಿ., ಕಮಲಶಿಲೆ ಇದರ ಅಮೃತ ಮಹೋತ್ಸವ ಅಮೃತಯಾನ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂಘದ ಕೇಂದ್ರ ಕಛೇರಿಯ ಎದುರುಗಡೆ ನಿರ್ಮಾಣ ಮಾಡಲಾದ ಬಸ್ಸು ಪ್ರಯಾಣಿಕರ ತಂಗುದಾಣವನ್ನು ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ ಗಂಟಿಹೊಳೆ ಅವರು ಉದ್ಘಾಟಿಸಿ, ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘ ಅಮೃತ ಮಹೋತ್ಸವ ಇದು ಅವಿಭಜಿತ ಸಹಕಾರ ಕ್ಷೇತ್ರದ ಪಯಣ. ಸಹಕಾರಿಗಳ ಬೆಳವಣಿಗೆಯಲ್ಲಿ ಮುನ್ನಡೆಸಿದೆ. ಆರ್ಥಿಕ ಅಭಿವೃದ್ಧಿಗೆ ಈ ಸಹಕಾರ ಸಂಘ ಕಾರಣ. ಇದು 75 ವರ್ಷಕ್ಕಷ್ಟೇ ಸೀಮಿತವಾಗಬಾರದು. ಮುಂದಿನ 25 ವರ್ಷಗಳ ಗುರಿ ಇರಬೇಕು. ಶತಮಾನೋತ್ಸವದ ಗುರಿ ಮುಂದಿರಬೇಕು ಎಂದರು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ ಕುಮಾರ್ ಕೊಡ್ಗಿ, ಪ್ರಧಾನ ಕಛೇರಿಯ ಲಿಫ್ಟ್ ಉದ್ಘಾಟಿಸಿ, ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮವನ್ನು ಚಂಡೆ ಭಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಇವತ್ತು ವಾಣಿಜ್ಯ ಬ್ಯಾಂಕುಗಳನ್ನು ಮೀರಿ ಕೃಷಿಪತ್ತಿನ ಸಹಕಾರ ಸಂಘಗಳು ಬೆಳೆಯುತ್ತಿವೆ. ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಬೆಳವಣಿಗೆ, ಇವರು ಸದಸ್ಯರಿಗೆ ನೀಡುತ್ತಿರುವ ಸೌಲಭ್ಯಗಳು ಕೂಡಾ ಅದ್ಬುತ. ರೈತರು, ಉದ್ಯಮಿಗಳಿಗೆ ಅವರ ಅವಶ್ಯಕತೆಗೆ ತಕ್ಕಂತೆ ಆರ್ಥಿಕ ಸಹಕಾರವನ್ನು ನೀಡುತ್ತಾ, ಅವರ ಆರ್ಥಿಕ ಬೆಳವಣಿಗೆಗೆ ಕಾರಣವಾಗುವುದರೊಂದಿಗೆ ಸಂಘವು ಪ್ರಗತಿ ಸಾಧಿಸಿದೆ. ಈ ಸಂಘ ಶತಮಾನೋತ್ಸವ ಆಚರಿಸಿಕೊಳ್ಳಲಿ ಎಂದರು.

ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಬಿ.ಪ್ರದೀಪ ಯಡಿಯಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾನಂಜೆಯಂತಹ ಹಿಂದುಳಿದ ಈ ಗ್ರಾಮೀಣ ಪರಿಸರದಲ್ಲಿ ಈ ಸಂಘವು ಕೀರ್ತಿಶೇಷ ಮಾನಂಜೆ ನಾರಾಯಣ ರಾಯರ ಅಧ್ಯಕ್ಷತೆಯಲ್ಲಿ 15-05-1950ರಲ್ಲಿ ನೋಂದಾಯಿಸಿ, 07-06-1950 ರಂದು ಕೇವಲ 39 ಜನ ಸದಸ್ಯರಿಂದ ‘ಕಮಲಶಿಲೆ ವಿವಿಧೋದ್ದೇಶ ಸಹಕಾರ ಸಂಘ’ ಎಂಬ ನಾಮಾಂಕಿತದೊಂದಿಗೆ ಪ್ರಾರಂಭಗೊಂಡಿತು. ನಂತರ ಅಂದಿನಿಂದ ಇಂದಿನವರೆಗೆ ಕೆಲವು ಹೆಸರುಗಳನ್ನು ಪರಿವರ್ತಿಸಿಕೊಂಡು ಪ್ರಸ್ತುತ ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ, ಕಮಲಶಿಲೆ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಹಕಾರ ರಂಗದಲ್ಲಿ ‘ಮಾನಂಜೆ ಸೊಸೈಟಿ’ ಅಂತಲೇ ಪ್ರಖ್ಯಾತಿಯನ್ನು ಹೊಂದಿದೆ. ಆಜ್ರಿ, ಕಮಲಶಿಲೆ, ಹಳ್ಳಿಹೊಳೆ ಮತ್ತು ಯಡಮೊಗೆ ಗ್ರಾಮಗಳ ಕೃಷಿಕರ, ಕೃಷಿ ಕಾರ್ಮಿಕರ ಕಲ್ಯಾಣಕ್ಕೆ ನೆರವು ನೀಡುತ್ತಾ ಬಂದಿದ್ದು. ಸದಸ್ಯರ ಸಹಕಾರದಿಂದ ಸಂಘವು ಪ್ರಗತಿಯ ಅನೇಕ ಮಜಲುಗಳನ್ನು ದಾಟ, ಜಿಲ್ಲೆಯ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಕಾಯ್ದುಕೊಂಡಿದೆ ಎಂದರು.

ಅಮೃತಮಹೋತ್ಸವ ಆಚರಣೆಯ ಈ ಸುಸಂದರ್ಭದ ಅಂಗವಾಗಿ ಸಂಘದ ಹಳ್ಳಿಹೊಳೆ ಶಾಖೆಯಲ್ಲಿ ಸದಸ್ಯರ ಕೃಷಿ ಉತ್ಪನ್ನಗಳನ್ನು ದಾಸ್ತಾನು ಮಾಡಲು ಸುಸಜ್ಜಿತ ಗೋದಾಮು ನಿರ್ಮಾಣ, ಪ್ರಧಾನ ಕಛೇರಿಯಲ್ಲಿ ಒಂದನೆ ಮತ್ತು ಎರಡನೇ ಮಹಡಿಯನ್ನು ಸಂಪರ್ಕಿಸುವಂತೆ ಲಿಫ್ಟ್ ನಿರ್ಮಾಣ ಹಾಗೂ ಸಂಘದ ಕೇಂದ್ರ ಕಛೇರಿಯ ಎದುರುಗಡೆ ಸುಂದರವಾದ ಬಸ್ಸು ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡಲಾಗಿದೆ ಎಂದರು.

ಅಮೃತಮಹೋತ್ಸವದ ಅಂಗವಾಗಿ ಸಂಘದ ಪ್ರಸ್ತುತ ಇರುವ ಪ್ರಥಮ 75 ಜನ ಸದಸ್ಯರಿಗೆ, ಹಾಗೂ ಸಂಘದಲ್ಲಿ ಈವರೆಗೆ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ 109 ಜನರಿಗೆ ಅವರ ಮನೆ ಮನೆಗೆ ತೆರಳಿ ಅವರ ಕುಟುಂಬದವರೊಂದಿಗೆ ಸನ್ಮಾನಿಸಿ ಗೌರವಿಸಿ ಸನ್ಮಾನ ಪತ್ರವನ್ನು ನೀಡುವ ಮೂಲಕ ಅಮೃತಮಹೋತ್ಸವದ ಕ್ಷಣವನ್ನು ಶಾಶ್ವತಗೊಳಿಸಲಾಗಿದೆ ಎಂದರು.

ಹಳ್ಳಿಹೊಳೆ ಶಾಖೆಯಲ್ಲಿ ಗೋದಾಮನ್ನು ದ.ಕ ಜಿಲ್ಲಾ ಕೇಂದ್ರ ಬ್ಯಾಂಕ್ ನಿರ್ದೇಶಕ ಎಂ.ಮಹೇಶ್ ಹೆಗ್ಡೆ ಉದ್ಘಾಟಿಸಿದರು. ಹಳ್ಳಿಹೊಳೆ ಶಾಖೆಯಲ್ಲಿ ಮಾಸ್ ಅಡಿಕೆ ಖರೀದಿ ಗೋದಾಮನ್ನು ಮಾಸ್ ಕೇಂದ್ರದ ಸ್ಥಾಪಕ ನಿರ್ದೇಶಕ, ಸಂಘದ ಮಾಜಿ ಅಧ್ಯಕ್ಷ ರಾಘವೇಂದ್ರ ರಾವ್ ಉದ್ಘಾಟಿಸಿದರು. ಮಳಿಗೆಗಳನ್ನು ಕ್ಯಾಂಪ್ಕೋ ಉಪಾಧ್ಯಕ್ಷ ಪದ್ಮರಾಜ್ ಪಟ್ಟಾಜೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅಮೃತಮಹೋತ್ಸವದ ಸ್ಮರಣಸಂಚಿಕೆ ಬಿಡುಗಡೆ ಮಾಡಲಾಯಿತು. ಮಾಜಿ ಅಧ್ಯಕ್ಷರಾದ ರಾಘವೇಂದ್ರ ರಾವ್ ಹಿನ್ನೋಟ ನೀಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಮಾಸ್ ಕೇಂದ್ರದ ನಿರ್ದೇಶಕ ನಿತ್ಯಾನಂದ ಮುಡ್ಡೊಡಿ, ಸಹಕಾರ ಸಂಘಗಳ ಉಪ ನಿಬಂಧಕರಾದ ಲಾವಣ್ಯ ಕೆ.ಆರ್., ಕುಂದಾಪುರ ತಾಲೂಕು ಸಹಕಾರ ಸಂಘಗಳ ಸಹಾಯಕ ನಿಬಂಧÀಕರಾದ ಸುಧೀರ್ ಕುಮಾರ್ ಜೆ., ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ರವಿರಾಜ ಹೆಗ್ಡೆ, ಆಜ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮುಕಾಂಬು ಶೆಡ್ತಿ, ಹಳ್ಳಿಹೊಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಂಜುನಾಥ ಶೆಟ್ಟಿ, ಯಡಮೊಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಗಾಣಿಗ, ಸಂಘದ ಮಾಜಿ ಅಧ್ಯಕ್ಷರಾದ ಎಂ.ರಾಘವೇಂದ್ರ ರಾವ್ ಮಾನಂಜೆ, ಶಂಕರನಾರಾಯಣ ಯಡಿಯಾಳ, ರಾಮಕೃಷ್ಣ ರಾವ್ ಬರೆಗುಂಡಿ, ಜಗದೀಶ ಯಡಿಯಾಳ, ಜಯರಾಮ ಯಡಿಯಾಳ, ಎಸ್.ವಾಸುದೇವ ಯಡಿಯಾಳ, ಎ. ಬಾಲಚಂದ್ರ ಭಟ್ ಅಗ್ರಹಾರ ಆಗಮಿಸಿದ್ದರು.

ಸಂಘದ ನಿರ್ದೇಶಕರಾದ ವಿ.ಮಾಧವ ಶೆಣೈ, ಎಸ್.ಶಂಕರನಾರಾಯಣ ಯಡಿಯಾಳ, ಎಂ.ದೇವದಾಸ ಶೆಟ್ಟಿ, ಬಿ.ಮಂಜುನಾಥ ರಾವ್ , ಎಂ.ಎಸ್.ವಿಷ್ಣುಮೂರ್ತಿ, ಅನಿತಾ, ರೋಹಿಣಿ, ನರಸಿಂಹ ಪೂಜಾರಿ, ಜಯಂತ ಶೆಟ್ಟಿ, ರವೀಂದ್ರ, ಗುರುರಾಜ ನಾಯ್ಕ, ವಿನೋದ (ಸಹಮತ ನಿರ್ದೇಶಕಿ), ಜಿಲ್ಲಾ ಬ್ಯಾಂಕ್ ವಲಯ ಮೇಲ್ವಿಚಾರಕ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು. ಸಂಘದ ಉಪಾಧ್ಯಕ್ಷ ಸುದೀಪ ಶೆಟ್ಟಿ ಸ್ವಾಗತಿಸಿದರು. ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಕಾಂತ ಕನ್ನಂತ ಸ್ಮರಣ ಸಂಚಿಕೆಯ ಹಿನ್ನೋಟ ನೀಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಮಂಜುನಾಥ ನಾಯ್ಕ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!