spot_img
Wednesday, March 4, 2026
spot_img

ಸಿದ್ದಾಪುರ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಕ್ಕೆ ಗುತ್ತಿಗೆದಾರರಿಗೆ ನಿಗಮ ಸೂಚನೆ

ಕುಂದಾಪುರ: ಸಿದ್ದಾಪುರ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ತಾತ್ಕಾಲಿಕವಾಗಿ  ಸ್ಥಗಿತಗೊಳಿಸುವಂತೆ ಕರ್ನಾಟಕ ನೀರಾವರಿ ನಿಗಮವು ಗುತ್ತಿಗೆದಾರರಿಗೆ ಸೂಚನೆ ನೀಡಿದೆ.

ಈ ಹಿಂದೆ ವಾರಾಹಿ ಡೈವರ್ಷನ್ ವಿಯರ್ ಮೇಲ್ಬಾಗದಲ್ಲಿ ಜಾಕ್‌ವೆಲ್ ನಿರ್ಮಿಸಲು ಯೋಜಿಸಲಾಗಿತ್ತು. ಆದರೆ ಮುಖ್ಯಮಂತ್ರಿಗಳ ಕಚೇರಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ಪತ್ರದ ಅನ್ವಯ, ಈ ಜಾಕ್ ವೆಲ್ ಅನ್ನು ನದಿ ಪಾತ್ರದ 600 ಮೀಟರ್ ಕೆಳಭಾಗದಲ್ಲಿ ನಿರ್ಮಿಸುವಂತೆ ಸೂಚಿಸಲಾಗಿದ್ದು ಸ್ಥಳ ಬದಲಾವಣೆಯ ಕುರಿತು ಅಧ್ಯಯನ ನಡೆಸಲು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಾಂತ್ರಿಕ ಪರಿಣಿತರ ಸಮಿತಿಯನ್ನು ರಚಿಸಿದ್ದಾರೆ. ಈ ಸಮಿತಿಯು ಮುಂದಿನ 15 ದಿನಗಳ ಒಳಗಾಗಿ ಸ್ಥಳ ಪರಿವೀಕ್ಷಣೆ ನಡೆಸಿ ಸಮಗ್ರ ವರದಿ ಸಲ್ಲಿಸಲು ಸೂಚಿಸಲಾಗಿದೆ.

ಈ ಸಮಿತಿಯು ಕಾಮಗಾರಿ ಸ್ಥಳ ಪರಿವೀಕ್ಷಣೆ ನಡೆಸಿ ವರದಿ ಸಲ್ಲಿಸಬೇಕಾಗಿರುವ ಪೂರ್ವದ ಹಿನ್ನೆಲೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಕನೀನಿನಿ ಇವರು ತಾತ್ಕಾಲಿಕವಾಗಿ ಕಾಮಗಾರಿಯನ್ನು ಸ್ಥಗಿತಗೊಳಿಸಲು ಮುಖ್ಯ ಇಂಜಿನಿಯರ್, ಕನೀನಿನಿ, ತುಂಗಾ ಮೇಲ್ದಂಡೆ ಯೋಜನಾ ವಲಯ, ಶಿವಮೊಗ್ಗ ಇವರಿಗೆ ಮೌಖಿಕವಾಗಿ ನಿರ್ದೇಶಿಸಿರುವ ಹಿನ್ನೆಲೆಯಲ್ಲಿ, ಮುಖ್ಯ ಇಂಜಿನಿಯರ್, ತು.ಮೇ.ಯೋ.ವ ಶಿವಮೊಗ್ಗ ಇವರು ಸಕ್ಷಮ ಪ್ರಾಧಿಕಾರದ ನಿರ್ದೇಶನದಂತೆ ಅಧೀಕ್ಷಕ ಇಂಜಿನಿಯರ್, ಕನೀನಿನಿ ವಾರಾಹಿ ಯೋಜನಾ ವೃತ್ತ ಸಿದ್ಧಾಪುರ ಇವರೊಂದಿಗೆ ಸಮಾಯೋಚಿಸಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆದೇಶಿದ್ದು, ಮುಖ್ಯ ಇಂಜಿನಿಯರ್, ಕನೀನಿನಿ ತು.ಮೇ.ಯೋ.ವ ಶಿವಮೊಗ್ಗ ಹಾಗೂ ಅಧೀಕ್ಷಕ ಇಂಜಿನಿಯರ್, ಕನೀನಿನಿ ವಾರಾಹಿ ಯೋಜನಾ ವೃತ್ತ ಸಿದ್ದಾಪುರ ಇವರೊಂದಿಗೆ ನೀಡಿರುವ ಮೌಖಿಕ ಆದೇಶದಂತೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿಗಮದ ಕಾರ್ಯಪಾಲಕ ಅಭಿಯಂತರರು ಆದೇಶ ಮಾಡಿದ್ದಾರೆ.

ಸಿದ್ಧಾಪುರ ಏತ ನೀರಾವರಿ ಯೋಜನೆಯ ಬಗ್ಗೆ ಸಾಕಷ್ಟು ಸಂಘರ್ಷ ನಡೆಯುತ್ತಿದ್ದು, ಸಿದ್ಧಾಪುರ ಭಾಗದ ರೈತರು ಹಾಗೂ ವರಾಹಿ ನದಿ ಕೆಳಭಾಗದ ರೈತರು ತಮ್ಮ ವಾದಗಳನ್ನು ಮುಂದಿಟ್ಟಿದ್ದರು. ಹೊರಿಯಬ್ಬೆ ಮೂಲ ಡ್ಯಾಂನಲ್ಲಿ ವಾರಾಹಿ ನೀರಾವರಿ ನಿಗಮ ಬೇರೆಬೇರೆ ಯೋಜನೆಗಳಿಗೆ ನೀರು ಬಳಕೆ ಮಾಡುತ್ತಿರುವುದರಿಂದ ಮತ್ತೆ ಏತನೀರಾವರಿಗೂ ಇಲ್ಲಿಂದ ನೀರು ತಗೆದರೆ ಮುಂದೆ ನೀರಿನ ಅಲಭ್ಯತೆ ಆಗಲಿದೆ. ಹಾಗಾಗಿ ನದಿ ಪಾತ್ರದ 600 ಮೀಟರ್ ಕೆಳಭಾಗದ ನದಿಯಲ್ಲಿ ಜಾಕ್ ವೆಲ್ ನಿರ್ಮಿಸುವಂತೆ ರೈತರು ಆಗ್ರಹಿಸಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!