spot_img
Saturday, March 7, 2026
spot_img

ಕುಂದಾಪುರದಲ್ಲಿ ಭೀಕರ ಅಗ್ನಿ ದುರಂತ: ಬೆಂಕಿ ಕೆನ್ನಾಲಿಗೆಯಲ್ಲಿ ದಹಿಸಿಹೋದ ಅಂಗಡಿಗಳು: ಕೋಟ್ಯಾಂತರ ರೂಪಾಯಿ ನಷ್ಟ

ಕುಂದಾಪುರ: ಕುಂದಾಪುರ ಬೆಳಗಿನ ಜಾವ ಕುಂದಾಪುರ ವೆಂಕಟರಮಣ ದೇವಸ್ಥಾನ ರಥಬೀದಿಯಲ್ಲಿರುವ ಅಂಗಡಿಗಳ ಸಮೂಹಕ್ಕೆ ಬೆಂಕಿ ತಗುಲಿ ಸಂಪೂರ್ಣ ದ್ವಂಸವಾಗಿದೆ.

ಬೆಳಿಗ್ಗೆ ೩.೩೦ರ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಹೊಂಡಿದ್ದು, ರಾತ್ರಿ ಕಾವಲುಗಾರ ಇದನ್ನು ಸ್ಥಳೀಯರಿಗೆ ಮಾಹಿತಿ ನೀಡಿದ್ದು ಸ್ಥಳೀಯ ಯುವಕರು ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಬರುವುದರೊಳಗೆ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದ್ದು, ಬೆಂಕಿ ನಂದಿಸುವುದು ಕಷ್ಟದಾಯಕವಾಗಿತ್ತು. ಸತತ ಪರಿಶ್ರಮದಿಂದ ಬೆಂಕಿಯ ತೀವ್ರತೆ ತಗ್ಗಿಸುವಲ್ಲಿ ಯಸಸ್ವಿಯಾದರೂ ಕೂಡಾ ಸಂಪೂರ್ಣ ಬೆಂಕಿ ನಂದಿಸಿ ನಿಯಂತ್ರಣಕ್ಕೆ ತರಲು ಮಧ್ಯಾಹ್ನ ತನಕವೂ ಆಗಲಿಲ್ಲ. ದೊಡ್ಡ ಮಟ್ಟದ ಅಗ್ನಿ ದುರಂತವಾಗಿದ್ದು ಉಳಿದ ಕಟ್ಟಡಗಳಿಗೆ ಬೆಂಕಿ ಹರಡುವ ಸಾಧ್ಯತೆಗಳಿತ್ತು.

ಈ ಅಗ್ನಿ ದುರಂತದಲ್ಲಿ ಲಲಿತ್ ನಾಥ್ ಮಾಲಿಕತ್ವದ ದಾಮೋದರ ಸ್ಟೋರ್, ಶಿವಾನಂದ ಭಟ್ ಸಹೋದರರ ಜನಾರ್ದನ್ ಭಟ್ ಎಂಡ್ ಸನ್ಸ್ ಪಟಾಕಿ ಅಂಗಡಿ, ಪುಸ್ತಕದ ಅಂಗಡಿ,ದಿವಾಕರ ಭಟ್ ಮಾಲೀಕತ್ವದ ಮಥುರಾ ಎಲೆಕ್ಟ್ರಾನಿಕ್ಸ್, ಗಣಪತಿ ನಾಯಕ್ ಮಾಲೀಕತ್ವದ ಬಾಲಾಜಿ ಪ್ರಾವಿಜನ್ ಸ್ಟೋರ್ ಬೆಂಕಿಗೆ ಆಹಿತಿಯಾಗಿ ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!