spot_img
Saturday, March 7, 2026
spot_img

ಜನವರಿ 3 ರಂದು ಬೆಳ್ಮಣ್ಣು ಮಂಡಲ ಪೂಜಾ ಮಹೋತ್ಸವ

ಬೆಳ್ಮಣ್ಣು: ಇತಿಹಾಸ ಪ್ರಸಿದ್ದ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮಂಡಲ ಪೂಜಾ ಮಹೋತ್ಸವವು ಜನವರಿ 3 ರಂದು ಶನಿವಾರ ಶ್ರೀ ಕ್ಷೇತ್ರದಲ್ಲಿ ಜರಗಲಿದೆ.

ಜನವರಿ 2ರಂದು ಶುಕ್ರವಾರ ಸಂಜೆ 4 ರಿಂದ ಬೆಳ್ಮಣ್ಣು ಅಯ್ಯಪ್ಪ ಭಕ್ತವೃಂದದ ಶಿಬಿರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಜರಗಲಿದೆ.

ಜನವರಿ 3 ರಂದು ಶನಿವಾರ ಬೆಳಿಗ್ಗೆ ಘಂಟೆ 5.30ಕ್ಕೆ ಪಂಚಾಮೃತಾಭಿಷೇಕ, ನವಕ ಕಲಶಾಭಿಷೇಕ ಬೆಳಿಗ್ಗೆ ಘಂಟೆ 6.30ಕ್ಕೆ ಅಲಂಕಾರ ಪೂಜೆ, ಬೆಳಿಗ್ಗೆ ಘಂಟೆ 7.00ರಿಂದ ತುಲಾಭಾರ ಸೇವೆ, ಬೆಳಿಗ್ಗೆ ಘಂಟೆ 11.30ಕ್ಕೆ ಮಹಾಪೂಜೆ, ಮಧ್ಯಾಹ್ನ ಘಂಟೆ 12.00ಕ್ಕೆ ಮಂಡಲ ಪೂಜೆ, ಉತ್ಸವ ಬಲಿ, ಪಲ್ಲ ಪೂಜೆ, ಮಧ್ಯಾಹ್ನ ಘಂಟೆ 1.00ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ಮಧ್ಯಾಹ್ನ 3-00ರಿಂದ ಶ್ರೀ ಕ್ಷೇತ್ರದ ಆವರಣದಲ್ಲಿ ನಂದಳಿಕೆ ವಿಶಾಲ ಯಕ್ಷಕಲಾ ಬಳಗದವರಿಂದ ತಾಳಮದ್ದಳೆ ಕಾರ್ಯಕ್ರಮ, ಸಂಜೆ 6.00ರಿಂದ ಶ್ರೀಕ್ಷೇತ್ರದ ಸಭಾಂಗಣದಲ್ಲಿ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸೂಡ ಶ್ರೀ ಮಯೂರವಾಹನ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ “ವೈಜಯಂತಿ ಪರಿಣಯ” ಯಕ್ಷಗಾನ ಜರಗಲಿದೆ.

ರಾತ್ರಿ ಘಂಟೆ 7.00ರಿಂದ ಪ್ರಸನ್ನ ಪೂಜೆ, ಉತ್ಸವ ಬಲಿ ಹಾಗೂ ರಂಗಪೂಜೆ ಜರಗಲಿದೆ ಎಂದು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ವೇದಮೂರ್ತಿ ಶ್ರೀ ಬಿ.ಕೆ.ವಿಘ್ನೇಶ್ ಭಟ್ ಅವರು ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!