spot_img
Sunday, March 8, 2026
spot_img

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಟ್ರಸ್ಟ್: 2.50ಕೋಟಿ ವೆಚ್ಚದಲ್ಲಿ 14 ಮನೆಗಳ ನಿರ್ಮಾಣ| ಡಿ.25ರಂದು  ಲೋಕಾರ್ಪಣೆ

ಕುಂದಾಪುರ: ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಬೆಂಗಳೂರು ವತಿಯಿಂದ ಉಡುಪಿ ಜಿಲ್ಲೆಯ ಕುಂದಾಪುರದ  ಉಳ್ಳೂರು-74 ಕೊರಗರ ಕಾಲೊನಿಯಲ್ಲಿ 2.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ 14 ಮನೆಗಳ ಗೃಹಪೂಜೆ ಮತ್ತು ಲೋಕಾರ್ಪಣೆ ಸಮಾರಂಭ ಡಿ.25ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ.

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಗೃಹಪೂಜೆ ಮತ್ತು ಆಶೀರ್ವಚನ ನೀಡಲಿದ್ದಾರೆ. ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ  ಡಾ.ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಲೋಕಾರ್ಪಣೆ ಮತ್ತು ಆಶಯ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆ ಮತ್ತು ಗೃಹಗಳ ಹಸ್ತಾಂತರವನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಜಿ. ನೆರವೇರಿಸಲಿದ್ದಾರೆ.

ಸಂಸದ ಬಿ.ವೈ.ರಾಘವೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಗುರುರಾಜ ಗಂಟಿಹೊಳೆ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ವೈ.ಭರತ್ ಶೆಟ್ಟಿ ಭಾಗವಹಿಸಲಿದ್ದಾರೆ.

ಪಹರೆ ವೇದಿಕೆ ಕಾರವಾರದ ಅಧ್ಯಕ್ಷ ನ್ಯಾಯವಾದಿ ನಾಗರಾಜ ನಾಯಕ್ ಪ್ರಾಸ್ತಾವಿಕ ಮಾತನಾಡಲಿದ್ದಾರೆ. ಯಕ್ಷಗಾನ ಕಲಾ ರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ಕೊರಗಾಭಿವೃದ್ಧಿ ಸಂಸ್ಥೆಗಳು ಕರ್ನಾಟಕ ಮತ್ತು ಕೇರಳದ ಅಧ್ಯಕ್ಷೆ ಸುಶೀಲಾ ನಾಡ, ಉಳ್ಳೂರು ೭೪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾ ಶೆಟ್ಟಿ, ಶ್ರೀಬನಶಂಕರಿ ದೇವಾಲಯದ ಮೊಕ್ತೇಸರ ಸಂಜೀವ ಶೆಟ್ಟಿ ಸಂಪಿಗೇಡಿ ಭಾಗವಹಿಸಲಿದ್ದಾರೆ.

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಟ್ರಸ್ಟ್‌ನ ಡಾ.ಎಚ್.ಎಸ್.ಶೆಟ್ಟಿ, ಉಪಾಧ್ಯಕ್ಷ ಹಾಲಾಡಿ ನಾಗರಾಜ ಶೆಟ್ಟಿ ಕಾರ್ಯದರ್ಶಿ ಡಾ.ಸುಮನಾ ಶ್ರೀನಿವಾಸ ಶೆಟ್ಟಿ ಭಾಗವಹಿಸಲಿದ್ದಾರೆ.

100 ಮನೆಗಳ ನಿರ್ಮಾಣ :
ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಬೆಂಗಳೂರು ಮೂಲಕ ಮೈಸೂರು ಮರ್ಕಂಟೈಲ್ ಕಂ ಲಿಮಿಟೆಡ್ ಬೆಂಗಳೂರು ಇದರ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ.ಎಚ್.ಎಸ್ ಶೆಟ್ಟಿ ಅವರು ಕೊರಗ ಕುಟುಂಬಗಳಿಗೆ ಉಚಿತ ನೂರು ಮನೆಗಳನ್ನು ನಿರ್ಮಿಸಿ ಕೊಡುವ ಗುರಿ ಹೊಂದಿದ್ದು ಈಗಾಗಲೇ 28 ಮನೆಗಳನ್ನು ನಿರ್ಮಿಸಲಾಗಿದೆ. ಕಳೆದ ವರ್ಷ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿದ್ಕಲ್‌ಕಟ್ಟೆ ಮತ್ತು ಜನ್ನಾಡಿಯಲ್ಲಿ ಕೊರಗರ ಕಾಲೋನಿಯಲ್ಲಿ 10 ಮನೆ ಮತ್ತು ಮಣಿಗೇರಿಯಲ್ಲಿ ೪ಮನೆಗಳನ್ನು ನಿರ್ಮಿಸಿ ಹಸ್ತಾಂತರ ಮಾಡಲಾಗಿತ್ತು.

ಶ್ರೀಕೃಷ್ಣ ನಾಮಾವಳಿ
14 ಮನೆಗಳಿಗೆ ಕೃಷ್ಣನ ವಿವಿಧ ಹೆಸರುಗಳನ್ನು ಇರಿಸಲಾಗಿದೆ. ಕೃಷ್ಣ, ಕೇಶವ, ಮಾಧವ, ಗೋವಿಂದ, ಮಧುಸೂದನ, ಜನಾರ್ದನ, ಗೊವರ್ಧನ, ಗೋಪಾಲ, ಶ್ಯಾಮ, ಗಿರಿಧರ, ಅಚ್ಯುತ, ಮುಕುಂದ, ದಾಮೋದರ, ನಾರಾಯಣ ಈ ರೀತಿ ಶ್ರೀಕೃಷ್ಣನ ಹೆಸರುಗಳನ್ನು ಮನೆಗಳಿಗೆ ಇರಿಸಲಾಗಿದೆ. ಈ ಹಿಂದೆ ಶ್ರೀರಾಮನ ಹೆಸರುಗಳನ್ನು ಇಡಲಾಗಿತ್ತು.

ಈ ಮನೆಗಳ ಫಲಾನುಭವಿಗಳು ಯಾರೆಂದರೆ ಬಸವ ಕೊರಗ, ಉದ್ದೇಶ ಕೊರಗ, ಗುಲಾಬಿ, ಪಾಂಡು ಕೊರಗ, ರಾಮ ಕೊರಗ, ಬಡಿಯ ಕೊರಗ, ಮರಿಯ ಕೊರಗ, ಐತು ಕೊರಗ, ಚಂದ್ರ ಕೊರಗ, ರುಕ್ಕು, ಕಾವೇರಿ, ಯೋಗೇಂದ್ರ ಕೊರಗ, ಜಲಜ, ಮುತ್ತ ಕೊರಗ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!