spot_img
Tuesday, March 3, 2026
spot_img

ತೆಕ್ಕಟ್ಟೆ ಹಯಗ್ರೀವದಲ್ಲಿ ಶಿವರಾಮ ಕಾರಂತರ ಸ್ಮೃತಿ ದಿನಾಚರಣೆ

ತೆಕ್ಕಟ್ಟೆ: ಡಾ. ಶಿವರಾಮ ಕಾರಂತರ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಸೃಜನಶೀಲತೆಯು ಹೆಚ್ಚು ಜನಜನಿತವಾಗಿದ್ದರೆ, ಅವರ ಸಾಮಾಜಿಕ ಮುಖದ ಪರಿಚಯ ಅಷ್ಟಾಗಿ ಪ್ರಕಟವಾಗಿಲ್ಲ. ಆರ್ಥಿಕ ಬಡತನ ಹೊಂದಿದ ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಜನರೆಡೆಗಿನ ಅವರ ಸ್ಪಂದನ ನಿರಂತರವಾಗಿತ್ತು ಎಂದು ಕಲಾವಿದೆ, ಲೇಖಕಿ, ಕಾರಂತರ ಒಡನಾಡಿ ಕೋಟ ಸದಾರಮೆ ಕಾರಂತರು ನುಡಿದರು.

ರಸರಂಗ (ರಿ.) ಕೋಟ ಇವರು ತೆಕ್ಕಟ್ಟೆ ಹಯಗ್ರೀವದಲ್ಲಿ ಡಿಸೆಂಬರ್ 11ರಂದು ಆಯೋಜಿಸಿದ್ದ ಶಿವರಾಮ ಕಾರಂತರ ಸ್ಮೃತಿ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನ್ನಾಡಿದರು. ಕಾರಂತ ಬಾಲ ಪುರಸ್ಕೃತೆ ಪರಿಣಿತ ವೈದ್ಯ ಹಾಗೂ ಕಾರಂತರ ಒಡನಾಡಿ ಸದಾರಮೆ ಕಾರಂತರನ್ನು ಅಭಿನಂದಿಸಲಾಯಿತು.

ಕಾರಂತರ ಜೀವನದ ದಾರಿ ಬರೆದು ತೋರಿಸುವುದಷ್ಟೇ ಆಗಿರಲಿಲ್ಲ, ಹೇಗೆ ಬದುಕಬಹುದು ಎನ್ನುವುದನ್ನೂ ನಡೆದು ತೋರಿಸಿದವರು ಎಂದು ಸದಾರಮೆ ಮಾತನ್ನಾಡಿದರು. ಕಾರಂತರ ಬಾಲ ಪುರಸ್ಕಾರ ಪಡೆದ ಬಾಲ ಕಲಾವಿದೆ ಕುಮಾರಿ ಪರಿಣಿತ ವೈದ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ರಸರಂಗದ ಅಧ್ಯಕ್ಷ ಸುಧಾ ಮಣೂರು, ಕಾರಂತ ಥೀಂ ಪಾರ್ಕ್‌ನ ಟ್ರಸ್ಟೀ ಸುಶೀಲಾ ಸೋಮಶೇಖರರವರು ಉಪಸ್ಥಿತರಿದ್ದರು. ಭಾಗ್ಯಲಕ್ಷ್ಮೀ ವೈದ್ಯ ಸ್ವಾಗತಿಸಿ, ಪಾರ್ವತಿ ಮೈಯ್ಯ ವಂದಿಸಿದರು. ಸುಪ್ರೀತಾ ಪುರಾಣಿಕ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಮರಣಾ ಕಾರ್ಯಕ್ರಮದ ಬಳಿಕ ಸುಧಾ ಮಣೂರು ಪರಿಕಲ್ಪನೆಯಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಇದರ ಬಾಲ ಕಲಾವಿದರಿಂದ “ವೈದೇಹಿ ಹರಣ” ಗಾನ ತಾಳಮದ್ದಲೆ ಯಶಸ್ವೀ ಕಲಾವೃಂದದ ಸಹಕಾರದಿಂದ ರಂಗ ಪ್ರಸ್ತುತಿಗೊಂಡಿತು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!