spot_img
Monday, January 19, 2026
spot_img

ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದಲ್ಲಿ ಡಿ.15ರಿಂದ ಡಿ.19ರ ತನಕ ವಾರ್ಷಿಕ ಜಾತ್ರಾ ಮಹೋತ್ಸವ

ಬಾರಕೂರು: ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದಲ್ಲಿ ಡಿ.15ರಿಂದ ಡಿ.19ರ ತನಕ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ.

ಡಿ.15ರಂದು ಬೆಳಿಗ್ಗೆ 108 ಕಾಯಿ ಗಣಪತಿ ಹೋಮ, ನವಕ ಪ್ರಧಾನ ಕಲಶಾಭಿಷೇಕ, ಮಧ್ಯಾಹ್ನ 12ಕ್ಕೆ ಪೂರ್ಣಾಹುತಿ, ರಾತ್ರಿ 7 ಗಂಟೆಗೆ ಗುರುಮಠದ ಮೂಲಮನೆಯಲ್ಲಿ ತುಳಸಿ ಪೂಜೆ, ರಾತ್ರಿ 10 ಗಂಟೆಗೆ ಕೆಂಡಸೇವೆ, ರಾತ್ರಿ 11.30ಕ್ಕೆ ರಂಗಪೂಜೆ, ತುಳಸಿ ಪೂಜೆ ನಡೆಯಲಿದೆ.

ಡಿ.16  ಪೂರ್ವಾಹ್ನ 9ಕ್ಕೆ ಮಹಾಮಂಗಳಾರತಿ, 10 ಗಂಟೆಗೆ ಪರಿವಾರ ದೇವರುಗಳ ನೃತ್ಯಸೇವೆ, 12 ಗಂಟೆಗೆ ತುಲಾಭಾರಾದಿ ಹರಕೆಗಳು, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಅಪರಾಹ್ನ ಗಂಟೆ 3ಕ್ಕೆ ಮಹಾಮಂಗಳಾರತಿ, ಮಹಾಬಲಿ ಪೂಜೆ, ಸಂಜೆ 5 ಗಂಟೆಗೆ ಸೆಡಿ ಪೂಜೆ,  ರಾತ್ರಿ 9-30ಕ್ಕೆ  ತೆಪ್ಪೋತ್ಸವ (ಹೊಳೆಯಾನ), ಕಟ್ಟೆಪೂಜೆ ನಡೆಯಲಿದೆ.

ಡಿ.17ರಂದು  ಪೂರ್ವಾಹ್ನ 9ಕ್ಕೆ ಮಹಾಮಂಗಳಾರತಿ, 10ಕ್ಕೆ ಪರಿವಾರ ದೇವರುಗಳ ನೃತ್ಯಸೇವೆ, ಗುರುಪೀಠದಲ್ಲಿ ದೀಪಾರಾಧಾನೆ, 12ಕ್ಕೆ ತುಲಾಭಾರಾದಿ ಹರಕೆಗಳು, ಅಪರಾಹ್ನ ಗಂಟೆ 3ರಿಂದ ಮುಳ್ಳುಹಾವಿಗೆ ಪಾದುಕೆ ಪೂಜೆ, ಬೆನಗಲ್ಲು ಪೂಜೆ, ಯೋಗಿ ಪುರುಷರ ದರ್ಶನ, ಬೊಬ್ಬರ್ಯ ದೇವರ ದರ್ಶನ, ಅಜ್ಜಮ್ಮ ದೇವರಿಗೆ ಹೂವು ಅರ್ಪಣೆ ನಡೆಯಲಿದೆ.

ಡಿ.18  ಪೂರ್ವಾಹ್ನ 11 ಕ್ಕೆ ನಾಗದೇವರ ದರ್ಶನ, 12 ಗಂಟೆಗೆ ಮಹಾಪೂಜೆ, ಹಸಲ ದೈ ಮತ್ತು ಕೋಳಿಯಾರ ದೈವದ ಪೂಜೆ, ರಾತ್ರಿ 9ಕ್ಕೆ ಮಲೆಸಾವಿರ ಮತ್ತು ಪರಿವಾರ ದೈವಗಳ ಕೋಲ ಪ್ರಾರಂಭ, ಡಿ.19ರಂದು ಗುರುವಾರ ಪ್ರಾತಃಕಾಲ 6 ಗಂಟೆಗೆ ಮಲೆಸಾವಿರ ದೈವ ದರ್ಶನ, 8 ಗಂಟೆಗೆ ಹಾಲಾವಳಿ, ಪರಿವಾರ ದೈವಗಳ ಕೋಲ ಸೇವೆ ನಡೆಯಲಿದೆ.

ಡಿ.15ರಂದು ಅಪರಾಹ್ನ 3 ಗಂಟೆಯಿಂದ 5ರ ತನಕ ಶ್ರೀ ಕುಲಮಹಾಸ್ತ್ರೀ ಮಹಿಳಾ ಭಜನಾ ಮಂಡಳಿ ಇವರಿಂದ, ಸಂಜೆ 7 ಗಂಟೆಗೆ ಯಕ್ಷಗಾನ, ರಾತ್ರಿ 12ರಿಂದ ಕುಣಿತ ಭಜನೆ, ಸ್ಥಳೀಯ ಭಜನಾ ಮಂಡಳಿ ಹಾಗು ಶ್ರೀ ವಿನಾಯಕ ಭಜನಾ ಮಂಡಳಿ ನಾಗರಮಠ ಇವರಿಂದ ನಡೆಯಲಿದೆ.

ಡಿ.16 ಸೋಮವಾರ ಸಂಜೆ 6.30ರಿಂದ ಸಾಂಸ್ಕøತಿಕ ವೈವಿಧ್ಯ-ಮೊಗವೀರ ಯುವಕ ಸಂಘ ಬೆಣ್ಣೆಕುದ್ರು ಬಾರ್ಕೂರು ಇವರಿಂದ. ಡಿ.17 ಮಂಗಳವಾರ ಸಂಜೆ 6.30ರಿಂದ ಸಾಂಸ್ಕøತಿಕ ವ್ಯವಿಧ್ಯ-ಮೊಗವೀರ ಮಹಿಳಾ ಸಂಘ ಬೆಣ್ಣೆಕುದ್ರು ಬಾರ್ಕೂರು ಇವರಿಂದ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!