spot_img
Wednesday, March 4, 2026
spot_img

ಮಣೂರು ಪಡುಕರೆ ಸರಕಾರಿ ಪಿಯು ಕಾಲೇಜಿನಲ್ಲಿ ಸೃಜನಶೀಲತೆಯ ಹಬ್ಬ

ಕೋಟ: ಮಣೂರು ಪಡುಕರೆ ಸರಕಾರಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸೃಜನಶೀಲತೆ, ವಿಜ್ಞಾನ ಜ್ಞಾನ ಹಾಗೂ ತಂಡ ಭಾವನೆ ಒಂದೇ ವೇದಿಕೆಯಲ್ಲಿ ಮೇಳೈಸಿದವು. ಕಾಲೇಜು ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳು ಜರುಗಿದವು. ಬೆಂಕಿ ಇಲ್ಲದೆ ಅಡುಗೆ, ತ್ಯಾಜ್ಯದಿಂದ ಕಲಾಕೃತಿ, ಲೋಗೋ ರಂಗೋಲಿ ಮತ್ತು ಸೈನ್ಸ್ ರಂಗೋಲಿ ಸ್ಪರ್ಧೆಗಳು ವಿದ್ಯಾರ್ಥಿಗಳ ಪ್ರತಿಭೆ ಹೊರಹೊಮ್ಮಲು ಸಹಾಯ ಮಾಡಿದವು.

ಲೋಗೋ ರಂಗೋಲಿ: ನೆಲದ ಮೇಲೆ ಫೇಸ್‌ಬುಕ್, ಇನ್‌ಸ್ಟಾಗ್ರಂ !
ಫೇಸ್‌ಬುಕ್, ಇನ್ಸ್‌ಸ್ಟಾಗ್ರಂ, ಯೂಟ್ಯೂಬ್, ನಂದಿನಿ, ರಾಯಲ್ ಎನ್‌ಫೀಲ್ಡ್, ಪೋರ್ಶೆ, ಬಿ‌ಎಂಡಬ್ಲ್ಯೂ, ಗೀತಾನಂದ ಫೌಂಡೇಶನ್ ಮುಂತಾದ ಸಂಸ್ಥೆಗಳ ಲೋಗೋಗಳ ಪಡಿಯಚ್ಚನ್ನು ಅಚ್ಚುಕಟ್ಟಾಗಿ ನೆಲದ ಮೇಲೆ ರಂಗೋಲಿಗಳಾಗಿ ರಚಿಸಿದ ವಿದ್ಯಾರ್ಥಿಗಳು ಮೆಚ್ಚುಗೆ ಪಡೆದರು. ಸರಳತೆಯಲ್ಲೇ ಸೊಬಗನ್ನು ಈ ಕೃತಿಗಳು ತೋರಿಸಿದವು.

ಸೈನ್ಸ್ ರಂಗೋಲಿ: ಬಣ್ಣಗಳಲ್ಲಿ ವಿಜ್ಞಾನ:
ಸಸ್ಯ ಜೀವಕೋಶ, ಕಪ್ಪೆಯ ಜೀರ್ಣಾಂಗವ್ಯೂಹ, ರಸಾಯನಶಾಸ್ತ್ರ ಪರಿಕಲ್ಪನೆಗಳು, ಮಾನವ ಶರೀರದ ರಕ್ತ ಸಂಚಾರ ವ್ಯವಸ್ಥೆ (Circulatory System) ಮುಂತಾದ ಆಕೃತಿಗಳನ್ನು ಬಣ್ಣಗಳೊಂದಿಗೆ ಮೂಡಿಸಿದರು. ಸುಂದರ ವಿನ್ಯಾಸ ಮತ್ತು ಬಣ್ಣಗಳಿಂದ ಅಲಂಕರಿಸಿದ ಆಕೃತಿಗಳು ಅವರ ಪರಿಶ್ರಮ ಮತ್ತು ಕಲಾತ್ಮಕತೆಯ ಸಾಕ್ಷಿಯಾಯಿತು.

ನಿರರ್ಥಕಕ್ಕೆ ಮರುಜನ್ಮ: ತ್ಯಾಜ್ಯದಿಂದ ಕಲಾಕೃತಿ:
‘ಆರ್ಟ್ ಫ್ರಂ ವೆಸ್ಟ್’ ವಿಭಾಗದಲ್ಲಿ ವಿದ್ಯಾರ್ಥಿಗಳು ತ್ಯಾಜ್ಯ ವಸ್ತುಗಳನ್ನು ಬಳಸಿಕೊಂಡು ಆಕರ್ಷಕ ವಸ್ತುಗಳನ್ನು ತಯಾರಿಸಿದರು. ಮುಖ್ಯವಾಗಿ:ಬಾಟಲಿಯಿಂದ ತಯಾರಿಸಿದ ಸುಂದರ ಜೋಡಿ ಗೊಂಬೆಗಳು, ಪ್ಲಾಸ್ಟಿಕ್ ಚಮಚಗಳಿಂದ ತಯಾರಿಸಿದ ಅಲಂಕಾರಿಕ ಹೂವಿನ ವಿನ್ಯಾಸ, ಪೇಪರ್ ರೋಲ್‌ಗಳು ಮತ್ತು ಮಣಿಗಳಿಂದ ಸಿದ್ಧಗೊಂಡ ಅಲಂಕಾರಿಕ ವಸ್ತುಗಳು, ಇವು ಎಲ್ಲರ ಮೆಚ್ಚುಗೆಗೆ ಪಾತ್ರವಾದವು.

ನೋಡಲೇ ರುಚಿಕರ, ಬೆಂಕಿ ಇಲ್ಲದ ಈ ಅಡುಗೆ!:
ಬೆಂಕಿ ಬಳಸದೆ ಸಿದ್ಧಪಡಿಸಿದ ಬಗೆ ಬಗೆ ಖಾದ್ಯಗಳು ರುಚಿ ಹಾಗೂ ಸೃಜನಶೀಲತೆಯ ಸಮನ್ವಯವನ್ನು ತೋರಿಸಿತು. ಗಮನ ಸೆಳೆದ ಕೆಲವು ಪದಾರ್ಥಗಳು: ವಿವಿಧ ಹಣ್ಣುಗಳ ತುಂಡುಗಳನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಿದ ಫ್ರೂಟ್ ಪ್ಲೇಟು, ತರಕಾರಿ ಮತ್ತು ಸೇವ್ ತುಂಬಿದ ಕಾಕಡಿ ಬೋಟ್‌ಗಳು, ಜ್ಯಾಮ್ ಮತ್ತು ಚಾಕೊಲೇಟ್ ವಿನ್ಯಾಸದ ಸ್ಯಾಂಡ್‌ವಿಚ್‌ಗಳು, ಸೊಗಸಾಗಿ ಅಲಂಕರಿಸಿದ ಡೆಸೆರ್ಟ್ ಗ್ಲಾಸ್‌ಗಳು, ಬಿಸ್ಕಿಟ್ ಕೇಕ್, ಮುಂತಾದವು ವಿದ್ಯಾರ್ಥಿಗಳ ಕೈಚಳಕದ ಚಮತ್ಕಾರಕ್ಕೆ ಸಾಕ್ಷಿಯಾಯಿತು.

ಸ್ಪರ್ಧೆಗಳು ತಂದುಕೊಟ್ಟ ಸಂಭ್ರಮ:
ಎಲ್ಲಾ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳ ಉತ್ಸಾಹಭರಿತ ಭಾಗವಹಿಸುವಿಕೆ ಕಂಡುಬಂದಿತು. ಅವರ ಕಲಾತ್ಮಕತೆ, ಸೃಜನಶೀಲತೆ ಹಾಗೂ ಸಹಕಾರದೊಂದಿಗೆ ಕಲಿಕೆ ಈ ಕಾರ್ಯಕ್ರದಲ್ಲಿ ವ್ಯಕ್ತವಾಯಿತು. ಶಿಕ್ಷಕರು ಹಾಗೂ ಸಹಪಾಠಿಗಳ ಮೆಚ್ಚುಗೆಯೊಂದಿಗೆ ದಿನವು ಸೃಜನಶೀಲತಾ ಸಂಭ್ರಮವಾಗಿ ಪರಿಣಮಿಸಿತು.

ಮಣೂರು ಪಡುಕರೆ ಸರಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳ ಹೊಸ ಚಿಂತನೆ, ಹೊಸ ಕಲ್ಪನೆ ಮತ್ತು ವಿಭಿನ್ನ ಪ್ರತಿಭೆಗಳಿಗೆ ಸ್ಪರ್ಧೆಗಳ ದಿನ ಸಾಕ್ಷಿಯಾಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!