spot_img
Friday, March 6, 2026
spot_img

‘ಮಹಿಷಾಸುರ’ ಪಾತ್ರದಲ್ಲಿಯೇ ಯಕ್ಷಗಾನ ಕಲಾವಿದ ಹೃದಯಾಘಾತದಿಂದ ನಿಧನ

ಕುಂದಾಪುರ: ‘ಮಹಿಷಾಸುರ’ ಪಾತ್ರವನ್ನು ಮುಗಿಸುತ್ತಿದ್ದಂತೆ ಕಲಾವಿದ ತೀವ್ರ ಹೃದಯಾಘಾತದಿಂದ ನಿಧನರಾದ ಘಟನೆ ನ.19ರ ರಾತ್ರಿ ಹಾರ್ದಳ್ಳಿ ಮಂಡಳ್ಳಿ ಸಮೀಪದ ಸೌಡದಲ್ಲಿ ನಡೆದಿದೆ.

ಮಂದಾರ್ತಿ ೨ನೇ ಮೇಳದ ಬಣ್ಣದ ವೇಷದ ಕಲಾವಿದ ಈಶ್ವರ ಗೌಡ ವೇಷದಲ್ಲಿಯೇ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ತೀವ್ರ ಎದೆನೋವು ಕಾಣಿಸಿಕೊಂಡು ಬಳಲುತ್ತಿದ್ದ ಅವರನ್ನು ವೇಷ ಭೂಷಣ ಕಳಚಿ, ಸಮೀಪದ ಹಾಲಾಡಿ ಆಸ್ಪತ್ರೆಗೆ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ, ಚಿಕಿತ್ಸೆಗೆ ಸ್ಪಂದಿಸದೇ ಅವರು ನಿಧನರಾದರು.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯವರಾದ ಇವರು ಶಿವರಾಜಪುರ, ಮೇಗರವಳ್ಳಿ, ಮಡಾಮಕ್ಕಿ, ಅಮೃತೇಶ್ವರೀ, ಮಂದಾರ್ತಿ ಮೇಳಗಳಲ್ಲಿ ಸುಮಾರು ಮೂರು ದಶಕಗಳಿಂದ ಕಲಾಸೇವೆ ಮಾಡುತ್ತಾ ಬಂದಿದ್ದರು. ಪೌರಾಣಿಕ ಪುರುಷ ಪಾತ್ರಗಳನ್ನು ಸಮರ್ಥವಾಗಿ ರಂಗದಲ್ಲಿ ಪ್ರಸ್ತುತ ಗೊಳಿಸುವ ಕಲಾಸಿದ್ಧಿ ಪಡೆದಿದ್ದರು.ಅಂತ್ಯ ಸಂಸ್ಕಾರ ಇಂದು ಶೃಂಗೇರಿ ಸನಿಹದ ನೆಮ್ಮಾರು ಗ್ರಾಮದ ಬುಕ್ಡಿಬೈಲಿನಲ್ಲಿ ಜರಗಲಿದೆ.

ಈಶ್ವರ ಗೌಡರು ಬಣ್ಣದ ವೇಷಕ್ಕೆ ಪ್ರಸಿದ್ಧರಾಗಿದ್ದರು. ಮಹಿಷಾಸುರ ಅವರ ಇಷ್ಟದ ಪಾತ್ರವಾಗಿತ್ತು. ಹೆಣ್ಣು ಬಣ್ಣದ ವೇಷ, ರಕ್ಕಸ ವೇಷಗಳಲ್ಲಿ ಛಾಪು ಮೂಡಿಸಿದ್ದರು.

ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!