spot_img
Monday, March 16, 2026
spot_img

“ಸವಾಲಿನ ಕಾಲಘಟ್ಟದಲ್ಲಿ ಅಗಲಿದ ಅನರ್ಘ್ಯ ರತ್ನ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ”.ಡಾ. ವೆಂಕಟರಾಮ್ ಭಟ್

ಶಂಕರನಾರಾಯಣ :ಸ್ವಾರ್ಥ ಜೀವನವನ್ನು ತೊರೆದು ಸಮಾಜಮುಖಿಯಾಗಿ ಯುವ ಪೀಳಿಗೆಗೆ ಮಾದರಿಯಾಗಿ ಬದುಕಿದವರು ಪದ್ಮಶ್ರೀ ಸಾಲುಮರದ ತಿಮ್ಮಕ್ಕ. ಇಂದಿನ ಜಾಗತೀಕರಣ ಯುಗದಲ್ಲಿ ತಾಪಮಾನ ನಿಯಂತ್ರಿಸುವ ಮರ ಗಿಡಗಳನ್ನೇ ತನ್ನ ಮಕ್ಕಳಂತೆ ಭಾವಿಸಿ ಸುಮಾರು 385 ವೃಕ್ಷಗಳನ್ನು ನೆಟ್ಟು ನಾಲ್ಕು ಕಿಲೋಮೀಟರ್ ನಿಂದ ನೀರು ತಂದು ನೀರುಣಿಸಿದ ಮಹಾ ತಾಯಿ ಇಂದು ನಮ್ಮೊಂದಿಗೆ ಇಲ್ಲ. ಅವರು ಬೆಳೆಸಿದ ಆ ವೃಕ್ಷ ಸಂಪತ್ತು ಇಂದು ಪರಿಸರಕ್ಕೆ ದೊಡ್ಡ ಮೌಲ್ಯವುಳ್ಳ ಮರಗಳಾಗಿವೆ. ಅವನ್ನು ಮುಂದಿನ ಪೀಳಿಗೆಗೆ ನೆರಳಾಗಿ ನೀಡಿ 114 ವರ್ಷ ಸುಧೀರ್ಘ ನಿಸ್ವಾರ್ಥ ಜೀವನ ನಡೆಸಿ ನಮ್ಮನ್ನು ಅಗಲಿದ ಅನರ್ಘ್ಯ ರತ್ನ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನವರು. ಕಾಲೇಜಿನ ಔಷಧಿ ವನದಲ್ಲಿ ಅವರ ಹೆಸರಿನಲ್ಲಿ ಮಾವಿನ ಗಿಡವನ್ನು ನೆಟ್ಟು ಶೃಧ್ಧಾಂಜಲಿ ಸೂಚಿಸುತ್ತಿರುವುದು ಅರ್ಥಪೂರ್ಣ ಎಂದು ಪ್ರಾಂಶುಪಾಲ ಡಾ. ವೆಂಕಟರಾಮ್ ಭಟ್ ತಿಳಿಸಿದರು.

ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಶಂಕರನಾರಾಯಣದ ಪರಿಸರ ಸಂಘದ ನೇತೃತ್ವದಲ್ಲಿ ನಡೆದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನವರ ಸಂತಾಪ ಸಭೆಯಲ್ಲಿ ಮಾತನಾಡುತ್ತಿದ್ದರು.

ಕಾಲೇಜಿನ ಆಂತರಿಕ ಗುಣಮಟ್ಟ ಮತ್ತು ಭರವಸ ಕೋಶ ಸಂಚಾಲಕ ಡಾ. ವಸಂತ್ ಜಿ ಭಾಗವಹಿಸಿ ಇಂದಿನ ಸ್ವಾರ್ಥ ಪ್ರಪಂಚಕ್ಕೆ ತಿಮ್ಮಕ್ಕನವರು ಆದರ್ಶ. ಅವರ ತಾತ್ವಿಕತೆಯನ್ನು ಎಲ್ಲರೂ ಅನುಸರಿಸಬೇಕೆಂದು ತಿಳಿಸಿದರು.

ವಿದ್ಯಾರ್ಥಿಗಳಾದ ಪ್ರಜ್ಞ, ಮಿಲನ ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಗಂಗಾಧರ ಸ್ವಾಗತಿಸಿದರು. ಪರಿಸರ ಸಂಘದ ಸಂಚಾಲಕ ಮಹಾಲಿಂಗಪ್ಪ ಆರ್ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕ ರಮೇಶ್ ವಂದಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಚಿನ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!