spot_img
Tuesday, March 10, 2026
spot_img

ಮಂದಾರ್ತಿಯಲ್ಲಿ 72ನೇ ಸಹಕಾರ ಸಪ್ತಾಹ ಉದ್ಘಾಟನೆ | ಸಹಕಾರ ಕ್ಷೇತ್ರ ದೇಶದ ಪ್ರಗತಿಯ ದಿಕ್ಸೂಚಿ-ಜಯಕರ ಶೆಟ್ಟಿ ಇಂದ್ರಾಳಿ

ಮಂದಾರ್ತಿ: ಸಹಕಾರ ಕ್ಷೇತ್ರದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎನ್ನುವುದನ್ನು ವರ್ತಮಾನದ ಬೆಳವಣಿಗೆಗಳಿಂದ ನೋಡಬಹುದಾಗಿದೆ. ಪಡಿತರ ಹಾಗೂ ಆರ್ಥಿಕ ಸೌಲಭ್ಯಕ್ಕೆ ಸೀಮಿತವಾಗಿದ್ದ ಸಹಕಾರಿ ವ್ಯವಸ್ಥೆಯನ್ನು ಪ್ರಸ್ತುತ ವಿಭಿನ್ನ ಸೇವಾ ಚಟುವಟಿಕೆಗಳ ಕೇಂದ್ರವಾಗಿಸುವ ಆಮೂಲಾಗ್ರ ಬದಲಾವಣೆ ನಡೆಯುತ್ತಿದೆ. ಸಾರ್ವಂಗೀಣ ಪ್ರಗತಿಯಲ್ಲಿ ಇವತ್ತು ಸಹಕಾರ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.

ನ.14 ಶುಕ್ರವಾರ ಮಂದಾರ್ತಿ ಶ್ರೀ ದುರ್ಗಾ ಸಹಕಾರ ಸೌಧದ ಶ್ರೀ ಚಾಮುಂಡೇಶ್ವರಿ ಸಭಾಂಗಣದಲ್ಲಿ ಸಹಕಾರ ಮಹಾ ಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಮಂದಾರ್ತಿ ಸೇವಾ ಸಹಕಾರ ಸಂಘ ಹಾಗೂ ಸಹಕಾರ ಇಲಾಖೆ ಆಶ್ರಯದಲ್ಲಿ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಇವತ್ತು ಎಂಟು ಸಾವಿರಕ್ಕೂ ಹೆಚ್ಚು ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ನಗರಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಿದ್ದರೆ ಹಳ್ಳಿಗಳಲ್ಲಿ ಜನರು ಸಹಕಾರಿ ಸಂಘಗಳನ್ನೇ ನೆಚ್ಚಿಕೊಂಡಿದ್ದಾರೆ. ಸಹಕಾರ ಕ್ಷೇತ್ರದ ಬಲವರ್ಧನೆಗೆ ಮುಖ್ಯ ಕಾರಣ ಜನರ ವಿಶ್ವಾಸ ಹಾಗೂ ನಂಬಿಕೆ. ಇದುವೇ ಸಹಕಾರದ ಉಸಿರು. ಸಹಕಾರ ಕ್ಷೇತ್ರ ಸತತವಾಗಿ, ಸಾಮಾಜಮುಖಿ ಚಿಂತನೆಯೊಂದಿಗೆ ಸೇವಾ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಜನಜೀವನಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯ, ಸವಲತ್ತುಗಳು ಸಹಕಾರಿ ಸಂಘಗಳಿಂದ ದೊರಕಿಸಿಕೊಡುವ ನಿಟ್ಟಿನಲ್ಲೂ ಹೆಜ್ಜೆ ಇಡಲಿದೆ ಎಂದರು.

ಡಾ| ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ| ಗಣನಾಥ ಶೆಟ್ಟಿ ಎಕ್ಕಾರು ಅವರು ಆತ್ಮನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು ವಿಷಯದ ಕುರಿತು ಮಾತನಾಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತಸರ ಎಚ್. ಧನಂಜಯ ಶೆಟ್ಟಿ, ಸಹಕಾರ ಸಂಘಗಳ ಉಪ ನಿಬಂಧಕಿ ಕೆ.ಆರ್. ಲಾವಣ್ಯಾ, ಸಹಾಯಕ ನಿಬಂಧಕ ಸುಧೀರ್ ಕುಮಾರ್, ಸಹಕಾರಿ ಪ್ರಮುಖರಾದ ಶೇಡಿಕೊಡ್ಲು ವಿಟ್ಟಲ್ ಶೆಟ್ಟಿ ಸುಧೀರ್ ಕುಮಾರ್ ಪಡುಬಿದ್ರಿ, ಮೈರ್ಮಾಡಿ ಅಶೋಕ್ ಕುಮಾರ್ ಶೆಟ್ಟಿ ಹರೀಶ್ ಕಿಣಿ, ಸುರೇಶ್, ಅಶೋಕ್ ಕುಮಾರ್ ಬಲ್ಲಾಳ್, ಕರುಣಾಕರ ಶೆಟ್ಟಿ ಅನಿಲ್ ಕುಮಾರ್, ಮಂದಾರ್ತಿ ಸಹಕಾರಿ ಸಂಘದ ಉಪಾಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ನಿರ್ದೇಶಕರಾದ ಕೆ. ಶಂಭುಶಂಕರ ರಾವ್, ಗಣೇಶ್ ಶೆಟ್ಟಿ, ಪ್ರಥ್ವಿರಾಜ್ ಶೆಟ್ಟಿ, ಜಲಂಧರ ಶೆಟ್ಟಿ, ಗುರುಪ್ರಸಾದ್, ಪ್ರವೀಣ್ ಕುಮಾರ್ ಶೆಟ್ಟಿ ದಿನೇಶ ಮರಕಾಲ, ಚಂದ್ರಶೇಖರ, ಪ್ರೇಮ, ಗುಲಾಬಿ, ರಾಧಾ, ಬಸವ ನಾಯ್ಕ, ಯೂನಿಯನ್ ಸಿ‌ಇ‌ಒ ಅನುಷಾ ಕೋಟ್ಯಾನ್, ಮಂದಾರ್ತಿ ಸೇವಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಮಂದಾರ್ತಿ ಸಂಘದ ಅಧ್ಯಕ್ಷ ಎಚ್. ಗಂಗಾಧರ ಶೆಟ್ಟಿ ಸಾಗತಿಸಿ, ಶ್ರೀಧರ ಪಿ.ಎಸ್. ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!