spot_img
Tuesday, March 10, 2026
spot_img

ಸುರಭಿ ಬೈಂದೂರು ಆಯೋಜಿಸಿದ್ದ ರಾಜ್ಯಮಟ್ಟದ ಕಥಾ ಸ್ಪರ್ಧೆ ಫಲಿತಾಂಶ

ಬೈಂದೂರು: ಪ್ರಸ್ತುತ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗ ಹಾಗೂ ಸಾಂಸ್ಕೃತಿಕ ಸಂಸ್ಥೆಯಾದ ಸುರಭಿ ಬೈಂದೂರು ತನ್ನ ರಜತ ವರ್ಷದ ಸಂಭ್ರಮಕ್ಕಾಗಿ ರಾಜ್ಯಮಟ್ಟದ ಕಥಾ ಸ್ಪರ್ಧೆಯನ್ನು ಆಯೋಜಿಸಿದ್ದು ರಾಜ್ಯದ ಸುಮಾರು 25 ಕ್ಕೂ ಹೆಚ್ಚು ಜಿಲ್ಲೆಗಳಿಂದ ಸುಮಾರು 65ಕ್ಕೂ ಮಿಕ್ಕಿ ಕಥೆಗಳು ಬಂದಿದ್ದು ಫಲಿತಾಂಶ ಪ್ರಕಟವಾಗಿದೆ.

ಶ್ರೀರಂಜಿನಿ ಅಡಿಗ, ಕುಮಾರಸ್ವಾಮಿ ಲೇ‌ಔಟ್ ಬೆಂಗಳೂರು ಇವರ “ಮುಸಾಫಿರ್ ಹೂಂ ಯಾರೋಂ” ಕಥೆ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಸದಾಶಿವ ಸೊರಟೂರು ಹೊನ್ನಾಳಿ, ದಾವಣಗೆರೆ. ಇವರ “ಬ್ಲಾಕ್ ಅಂಡ್ ವೈಟ್” ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಲಕ್ಷ್ಮಣ ಶೆರೆಗಾರ, ಗೋಕಾಕ್, ಬೆಳಗಾವಿ ಇವರ “ಬಿಡುಗಡೆ” ಕಥೆ ತೃತೀಯ ಸ್ಥಾನ ಪಡೆದುಕೊಂಡಿದೆ.

ವಿಜೇತರಿಗೆ ಇದೇ ನವಂಬರ್ ತಿಂಗಳ ೨೦ನೇ ತಾರೀಕಿನಂದು ಬೈಂದೂರಿನ ಶ್ರೀ ಸೇನೆಶ್ವರ ದೇವಾಲಯದ ಶಾರದಾ ವೇದಿಕೆಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆಯುವ ನಡೆಯುವ “ಕನ್ನಡ ನುಡಿ ಹಬ್ಬ” ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಕಥಾ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ನಿರ್ಣಾಯಕರಾಗಿ ಬೆಂಗಳೂರು ದೂರದರ್ಶನದ “ಚಂದನ” ವಾಹಿನಿಯ “ಥಟ್ ಅಂತ” ಹೇಳಿ ಖ್ಯಾತಿಯ ಡಾ.ನಾ.ಸೋಮೇಶ್ವರ. ವಿಶ್ರಾಂತ ಪ್ರಾಧ್ಯಾಪಕಿ ಡಾ.ರೇಖಾ ಬನ್ನಾಡಿ, ಸಾಹಿತಿ ಸುಧಾ ಆಡುಕಳ. ಇವರುಗಳು ತೀರ್ಪುಗಾರರಾಗಿ ಸಹಕರಿಸಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!