spot_img
Tuesday, March 10, 2026
spot_img

ರಾಷ್ಟ್ರ ಮಟ್ಟದ ಈಜು ಸ್ಪರ್ಧೆಗೆ ರಿಶಾಂತ್ ಖಾರ್ವಿ ಆಯ್ಕೆ

ಕುಂದಾಪುರ: ನವೆಂಬರ್ 30 ರಿಂದ ಡಿಸೆಂಬರ್ 5ರವರೆಗೆ ದೆಹಲಿಯಲ್ಲಿ ನೆಡೆಯುವ ರಾಷ್ಟ್ರ ಮಟ್ಟದ‌ಈಜು ಸ್ಪರ್ಧೆಯಲ್ಲಿ 14ವರ್ಷದ ಒಳಗಿನ ವಯೋಮಿತಿಯ ವಿಭಾಗದಲ್ಲಿ ರಿಶಾಂತ್ ಖಾರ್ವಿ ಆಯ್ಕೆಯಾಗಿದ್ದಾರೆ. ಇವರು ಮೂಲತಃ ಕುಂದಾಪುರದವರಾದ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಖ್ಯಾತ ಈಜು ತರಬೇತುದಾರ ದಯಾನಂದ ಖಾರ್ವಿ ಮತ್ತು ಚಿತ್ರಲೇಖಾ ಅವರ ಪುತ್ರ.

ಬಾಲ್ಯದಿಂದಲೇ ಈಜಿನಲ್ಲಿ ಆಸಕ್ತಿ ಹೊಂದಿದ್ದರಿ ಶಾಂತ್ ತನ್ನ ತಂದೆಯ ಈಜಿನ ಶೈಲಿಯಿಂದ ಪ್ರೇರಿತನಾಗಿ ತಂದೆಯನ್ನೇ ಗುರುವಾಗಿ ಸ್ವೀಕರಿಸಿ, ಈಜು ಕಲಿತ ಕಠಿಣ ಪರಿಶ್ರಮಿ ಬೆಂಗಳೂರಿನ ಆಸು ಪಾಸಿನಲ್ಲಿ ನೆಡೆದ ಬಹತೇಕ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು, ಪ್ರಸಿದ್ಧಿಯನ್ನು ಪಡೆದು ಉತ್ತಮ ಈಜುಪಟುವೆಂದು ಖ್ಯಾತಿ ಪಡೆದಿದ್ದಾರೆ.

14 ರಿಂದ 17 ವರ್ಷದ ವಯೋಮಾನದ ವಿಭಾಗದಲ್ಲಿ ಇತ್ತೀಚಿಗೆ ಮೈಸೂರಿನಲ್ಲಿ ನೆಡೆದ ರಾಜ್ಯ ಮಟ್ಟದ ಈಜು ಮತ್ತು ಡೈವಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ರಿಶಾಂತ್ 200ಮೀ ವೈಯುಕ್ತಿಕ ಮಿಡ್ಲೆ ಮತ್ತು 4×100 ರಿಲೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು 200ಮೀ ಬಟರ್ ಪ್ಲೈ ಮತ್ತು 400ಮೀ ಪ್ರೀ ಸ್ಟೈಲ್‌ನಲ್ಲಿ ಬೆಳ್ಳಿ ಪದಕವನ್ನು ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!