spot_img
Wednesday, March 11, 2026
spot_img

ಬಸ್ರೂರು: ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡೋತ್ಸವ

ಬಸ್ರೂರು: ಬಸ್ರೂರು ಶ್ರೀ ಶಾರದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೨೦೨೫-೨೬ನೇ ಸಾಲಿನ ವಾರ್ಷಿಕ ಕ್ರೀಡೋತ್ಸವ ಎರಡು ದಿನಗಳ ಕಾಲ ನಡೆಯಿತು.

ಕ್ರೀಡೋತ್ಸವದ ಪ್ರಮುಖ ಆಕರ್ಷಣೆಯಾಗಿ ಕ್ರೀಡಾ ಜ್ಯೋತಿಯನ್ನು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಶಾಲೆಯ ಕ್ರೀಡಾಪಟುಗಳು ಮೆಲುನಡಿಗೆಯ ಮೂಲಕ ಶಾಲೆಗೆ ತಂದರು. ವಿದ್ಯಾರ್ಥಿಗಳು ಪಥಸಂಚಲನ ಕ್ರೀಡೋತ್ಸವದ ಮೆರುಗು ಹೆಚ್ಚಿಸಿತು.
ಶಾಲಾ ಸಂಚಾಲಕರಾದ ಸಂತೋಷ್ ಶೆಟ್ಟಿ ಅವರು ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಲಾ ಪೋಷಕರ ಸಮಿತಿಯ ಅಧ್ಯಕ್ಷೆ ಪ್ರೇಮ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕ್ರೀಡೆ ಮಾನವನ ಜೀವನದಲ್ಲಿ ದೈಹಿಕ ಆರೋಗ್ಯಕ್ಕೆ ಅತಿ ಮುಖ್ಯವಾದದ್ದು ಕ್ರೀಡೆಯಲ್ಲಿ ಎಲ್ಲರೂ ಭಾಗವಹಿಸಿ ಎಂದು ಪ್ರೋತ್ಸಾಹಿಸಿದರು. ಶಾಲಾ ಪೋಷಕ ಸಮಿತಿಯ ಕಾರ್ಯದರ್ಶಿ ದಿನೇಶ್ ಆಚಾರ್ಯ ಮಾತನಾಡಿ,” ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಸಾಧನೆಯ ಬಗ್ಗೆ ಗುರುತಿಸಲು ಇಂತಹ ಕ್ರೀಡೆಯಿಂದ ಸಾಧ್ಯ” ಎಂದು ತಿಳಿಸಿದರು. ಸಂತೋಷ್ ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ “ಭಾಗವಹಿಸುವಿಕೆ ಮುಖ್ಯ,ಬಹುಮಾನ ಮುಖ್ಯವಲ್ಲ” ಎಂದರು.
ನಂತರ ಓಟದ ಸ್ಪರ್ಧೆ, ಉದ್ದ ಜಿಗಿತ, ಚೆಂಡೆಸೆತ, ಮುಂತಾದ ಸ್ಪರ್ಧೆಯನ್ನು ನಡೆಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಾಧನೆ ಶಿಸ್ತಿನ ಮತ್ತು ತಂಡ ಭಾವನೆಯ ಮಹತ್ವವನ್ನು ನೆನಪಿಸಿಕೊಡಲಾಯಿತು, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳ ಸಹಕಾರದಿಂದ ಕ್ರೀಡೋತ್ಸವ ಯಶಸ್ಸಿಗೆ ಶ್ರಮಿಸಿದರು.
ಕ್ರೀಡೋತ್ಸವದಲ್ಲಿ ಶಾಲಾ ಆಡಳಿತ ಅಧಿಕಾರಿ ಆಶಾ ಶೆಟ್ಟಿ ಹಾಗೂ ಶಿಕ್ಷಕ,ಶಿಕ್ಷಕೇತರ ವೃಂದದವರು ಹಾಗೂ ಪೋಷಕರು ಉಪಸ್ಥಿತರಿದ್ದರು. ಸಹ ಶಿಕ್ಷಕಿ ನೂತನ ಕಾರ್ಯಕ್ರಮ ನಿರೂಪಿಸಿ, ಪ್ರಾಂಶುಪಾಲರಾದ ರೇಷ್ಮ ಅಡಪ ಸ್ವಾಗತಿಸಿ, ಸಹಶೀಕ್ಷಕಿ ವೀಣಾ ವಂದಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!