spot_img
Wednesday, March 11, 2026
spot_img

ಪದವಿಯೊಂದಿಗೆ ತಂತ್ರಜ್ಞಾನದ ಕಲಿಕೆಯೂ ಅಗತ್ಯ-ಗೌತಮ್ ನಾವಡ

ಕುಂದಾಪುರ: ವಿದ್ಯಾರ್ಥಿಗಳು ತಮ್ಮ ಪದವಿಯ ಜೊತೆಗೆ ಮುಂದುವರಿದ ತಂತ್ರಜ್ಞಾನಗಳನ್ನೂ ಸಹ ಕಲಿತಾಗ ಮಾತ್ರ ಉನ್ನತ
ಜ್ಞಾನದೊಂದಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಪಡೆಯಲು ಸಾಧ್ಯ ಎಂದು ಕುಂದಾಪುರದ ಫೋರ್ಥ್ ಫೋಕಸ್ ಸಂಸ್ಥೆಯ
ಸ್ಥಾಪಕರಾದ ವಿ. ಗೌತಮ್ ನಾವಡ ಅವರು ಹೇಳಿದರು.

ಅವರು  ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ಗಣಕಶಾಸ್ತ್ರ ವಿಭಾಗ ಮತ್ತು ವರ್ಡ್
ಪ್ರೆಸ್ ಉಡುಪಿ ಕಮ್ಯೂನಿಟಿ ಇವರ ಸಹಯೋಗದಲ್ಲಿ ಅಂತಿಮ ವರ್ಷದ ಬಿಸಿ‌ಎ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವೆಬ್
ಡೆವಲಪ್‌ಮೆಂಟ್ ವರ್ಡ್ ಪ್ರೆಸ್ ಕ್ಯಾಂಪಸ್ ಕನೆಕ್ಟ್ ಎಂಬ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು. ಕಾಲೇಜಿನ ಉಪ-
ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಅಧ್ಯಕ್ಷತೆ ವಹಿಸಿದ್ದರು.

ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಮಹೇಶ್ ಕುಮಾರ್ ಸ್ವಾಗತಿಸಿದರು. ಶೈಕ್ಷಣಿಕ ನಿಕಾಯಕರು ಹಾಗೂ ಕಾರ್ಯಕ್ರಮದ
ಸಂಯೋಜಕರಾದ ಗಿರಿರಾಜ್ ಭಟ್ ಪ್ರಸ್ತಾವಿಕ ನುಡಿಗಳನ್ನಾಡಿ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿದರು. ಈ ಸಂದರ್ಭ ಉಡುಪಿ
ಸಬ್‌ವೆಬ್ ಸಂಸ್ಥಾಪಕ ಶಶಿಕಾಂತ್ ಶೆಟ್ಟಿ, ತೀರ್ಥಹಳ್ಳಿಯ ಯುಕ್ತಿ ಡಿಜಿಟಲ್ ಸಂಸ್ಥಾಪಕ ಮಂಜುನಾಥ್ ಎಮ್.ಎಮ್., ಕೋಟೇಶ್ವರ
ಕೋಟಿ ಸಾಫ್ಟ್ ಸೊಲ್ಯೂಶನ್ ಮುಖ್ಯ ಕಾರ್ಯನಿರ್ವಾಹಕ ಓಂಕಾರ ಉಡುಪ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ರಿಷಿತಾ ಪ್ರಾರ್ಥಿಸಿದರು. ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಶ್ರೀಮತಿ ವಿಲ್ಮಾ ಶೆರಲ್ ವಂದಿಸಿ, ಶ್ರೀಮತಿ ಜಯಲಕ್ಷ್ಮಿ
ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಗಾರದಲ್ಲಿ ಭಾಗವಹಿಸಿ ೭೦ ವಿದ್ಯಾರ್ಥಿಗಳು ವೆಬ್‌ಸೈಟ್‌ಗಳನ್ನು ನಿರ್ಮಿಸಿ ನೇರವಾಗಿ ಲೈವ್ ಮಾಡಿ ಪ್ರಾಯೋಗಿಕ ಕಲಿಕೆಗೆ ಸಾಕ್ಷಿಯಾದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!