spot_img
Wednesday, March 11, 2026
spot_img

ಸಿರಿಬಾಗಿಲು ಪ್ರತಿಷ್ಠಾನ: ಅ.26ಕ್ಕೆ ತಾಳಮದ್ದಳೆ, ಸದಸ್ಯರ ಸಮಾವೇಶ: ಯಕ್ಷಗಾನ

kundapura: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಯ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಅಕ್ಟೋಬರ್ 26ಆದಿತ್ಯವಾರದಂದು ಮಧ್ಯಾಹ್ನ1 ಗಂಟೆಗೆ ಜಯರಾಮ ದೇವಸ್ಯ ಬಳಗದಿಂದ ಯಕ್ಷಗಾನ ತಾಳಮದ್ದಳೆ, ತದನಂತರ ಸದಸ್ಯರ ಸಮಾವೇಶ ಜರಗಲಿದೆ.

ಸಂಜೆ 4 ಗಂಟೆಗೆ ನಡೆಯುವ ಸಮಾವೇಶದ ಆಶೀರ್ವಚನ-ದೀಪ ಪ್ರಜ್ವಲನೆಯನ್ನು ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ನೆರವೇರಿಸಲಿದ್ದಾರೆ. ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣಯ್ಯರವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ, ಮುಖ್ಯ ಅತಿಥಿಗಳಾಗಿ ಹಿರಿಯರ ರಂಗಭೂಮಿ ತಜ್ಞರಾದ ಮೂರ್ತಿ ದೇರಾಜೆ, ವಿದ್ವಾಂಸರು-ತಾಳಮದ್ದಲೆ ಅರ್ಥದಾರಿ- ಪ್ರವಚನಕಾರರಾದ ಉಜಿರೆ ಅಶೋಕ ಭಟ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಸತೀಶ ಅಡಪ ಸಂಕಬೈಲು, ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶೀನ ಶೆಟ್ಟಿ ಕಜೆ ಪ್ರತಿಷ್ಠಾನದ ಪ್ರೋತ್ಸಾಹಕರಾದ ಕಾಸರಗೋಡಿನ ಹಿರಿಯ ಕವಿ ರಾಧಾಕೃಷ್ಣ ಕೆ. ಉಳಿಯತಡ್ಕ, ಹಾಗೂ ವಾಸುದೇವ ಕಾರಂತ ಉಜಿರೆಕೆರೆ ಭಾಗವಹಿಸಲಿದ್ದಾರೆ. ಸಂಜೆ 6 ಗೆ ಪ್ರಪ್ರಥಮ ಬಾರಿಗೆ “ಸಾಕೇತ ಕಲಾವಿದರು ಹೆಗ್ಗೋಡು ಸಾಗರ “ಇವರಿಂದ “ಗದಾಯುದ್ಧ” ಎಂಬ ಬಡಗುತಿಟ್ಟಿನ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!