spot_img
Saturday, April 25, 2026
spot_img

ಸಿರಿಬಾಗಿಲು ಪ್ರತಿಷ್ಠಾನದ ಭವನದಲ್ಲಿ ಶೌಚಾಲಯ, ಸೋಲಾರ್ ವ್ಯವಸ್ಥೆಯ ಉದ್ಘಾಟನೆ

ಕುಂದಾಪುರ: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಕೃತಿಕ ಭವನಕ್ಕೆ ಎಂ. ಆರ್. ಪಿ .ಎಲ್.ಮಂಗಳೂರು ಸಂಸ್ಥೆಯ ಸಿ. ಎಸ್. ಆರ್. ಅನುದಾನದಿಂದ ನಿರ್ಮಾಣ ಗೊಂಡ ನೂತನ ಶೌಚಾಲಯ ಹಾಗೂ ಸೋಲಾರ್ ಅಳವಡಿಕೆಯ ಉದ್ಘಾಟನೆಯನ್ನು ಎಂ. ಆರ್. ಪಿ. ಎಲ್. ಸಂಸ್ಥೆಯ ಎಚ್. ಆರ್. ವಿಭಾಗದ ಮೆನೇಜರ್ ಹರೀಶ್ ರಾವ್ ಅವರು ಉದ್ಘಾಟನೆಗೊಳಿಸಿದರು.

ಎಂ. ಆರ್ .ಪಿ.ಎಲ್.ಸಂಸ್ಥೆಯು ಸಮಾಜ ಸೇವೆಯ ಯೋಜನೆಯಡಿ ,ಸಂರಕ್ಷಣಾ ವಿಭಾಗದಲ್ಲಿ ಐದು ವಿಷಯಗಳಿಗೆ ಪ್ರಾಧಾನ್ಯತೆ ನೀಡಿದೆ. ಪ್ರಧಾನವಾಗಿ ಶಿಕ್ಷಣ, ಆರೋಗ್ಯ, ಬಹುಜನ ,ಪ್ರಕೃತಿ, ಸಂಸ್ಕೃತಿ. ಸಂಸ್ಕೃತಿ ಸಂರಕ್ಷಣೆಯ ಕರ್ತವ್ಯವನ್ನು ಸಿರಿಬಾಗಿಲು ಪ್ರತಿಷ್ಠಾನ ಸಿರಿಬಾಗಿಲನ್ನು ಪ್ರದಾನ ಕೇಂದ್ರವಾಗಿಸಿ , ಸಾಂಸ್ಕೃತಿಕ ವಲಯವನ್ನು ಉಳಿಸುವ ,ಬೆಳೆಸುವ, ಮುಂದಿನ ಪೀಳಿಗೆ ಹಸ್ತಾಂತರಿಸುವ ಯೋಜನೆಯನ್ನು ಹಮ್ಮಿಕೊಂಡು ಕಠಿಣ ಶ್ರಮದ ಮೂಲಕ ಯಶಸ್ವಿಯಾಗುತ್ತಿದೆ. ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಈ ಯೋಜನೆಯಡಿ ಸೋಲಾರ್ ವ್ಯವಸ್ಥೆಗೆ ಅನುದಾನವನ್ನು ನೀಡಿರುತ್ತದೆ. ಪ್ರತಿಷ್ಠಾನದಲ್ಲಿ ನಿರಂತರ ಕಾರ್ಯಕ್ರಮಗಳು ನಡೆಯುವ ಕಾರಣ ಆಗಮಿಸುವ ಕಲಾವಿದರಿಗೆ,ಪ್ರೇಕ್ಷಕರಿಗೆ ಉಪಯುಕ್ತ ವಾಗಲು ಆರೋಗ್ಯ ರಕ್ಷಣೆ ಯಡಿ ಶೌಚಾಲಯ ವ್ಯವಸ್ಥೆ ಗೆ ಅನುದಾನ ನೀಡಿರುತ್ತದೆ. ನಮ್ಮ ಸಂಸ್ಥೆಗೆ ಕಲೆ ಸಂಸ್ಕೃತಿಯನ್ನು ಉಳಿಸುವ, ಅದು ಗಡಿನಾಡು ಕಾಸರಗೋಡಿನಲ್ಲಿ ಇಂತಹ ಬೃಹತ್ ಸಂಸ್ಥೆಗೆ ಅನುದಾನ ನೀಡುವ ಮೂಲಕ ನಮಗೆ ಅವಕಾಶ ಕಲ್ಪಿಸಿದ್ದಕ್ಕಾಗಿ ಪ್ರತಿಷ್ಠಾನಕ್ಕೆ ಧನ್ಯವಾದಗಳು ಅರ್ಪಿಸುತ್ತಿದ್ದೇವೆ ಎಂದರು.

ಎಂ ಆರ್ ಪಿ ಎಲ್ ಸಂಸ್ಥೆಯ ಎಚ್ ಆರ್ ವಿಭಾಗದ ಕೃಷ್ಣ ಹೆಗ್ಡೆ ಮಿಯ್ಯಾರು ಅವರ ಅನುಪಸ್ಥಿತಿಯಲ್ಲಿ ಹರೀಶ್ ರಾವ್ ಅವರು ಈ ಕಾರ್ಯಕ್ರಮವನ್ನು ನೆರವೇರಿಸಿದರು. ಸೆಲ್ಕೋ ಸೋಲಾರ್ ಪ್ರೈವೆಟ್ ಲಿ.ಸಂಸ್ಥೆಯ ಮಹಾಪ್ರಬಂದಕರಾದ ಗುರುಪ್ರಸಾದ್ ಶೆಟ್ಟಿ ಅವರು ಸೋಲಾರ್ ವ್ಯವಸ್ಥೆ ಗೆ ಚಾಲನೆ ನೀಡಿ ಶುಭಹಾರೈಸಿರು. ಸಿರಿಬಾಗಿಲಿನ ಸಮಾಜಸೇವಕರಾದಂತಹ ರವೀಂದ್ರ ರೈ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. . ಪ್ರತಿಷ್ಠಾನದ ಅದ್ಯಕ್ಷ ರಾದ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅವರು ಅದ್ಯಕ್ಷತೆ ವಹಿಸಿ ಸಹಕರಿಸಿದ ಸಂಸ್ಥೆ ಗೆ ಅಭಾರಿಯಾಗಿದ್ದೇವೆ ಎಂದರು.

ಮೋಹನ್ ಕುಮಾರ್ ಶೆಟ್ಟಿ ಸಿರಿಬಾಗಿಲು ಕಾರ್ಯಕ್ರಮವನ್ನು ನಿರೂಪಿಸಿದರು.ಪ್ರಸನ್ನ ಕೃಷ್ಣ ಕಾರಂತ ದೇಶಮಂಗಲ ಅಥಿತಿಗಳನ್ನು ಸ್ವಾಗತಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!