spot_img
Monday, March 16, 2026
spot_img

ಅ.5ರಂದು ಡಾ.ಜಿ.ಶಂಕರ್ 70ನೇ ಹುಟ್ಟುಹಬ್ಬ: ಮೊಗವೀರ ಯುವ ಸಂಘಟನೆ ಘಟಕಗಳ ವ್ಯಾಪ್ತಿಯಲ್ಲಿ ವಿವಿಧ ಸಮಾಜಮುಖಿ ಕಾರ್ಯಕ್ರಮ

ಉಡುಪಿ: ಸಾಮಾಜಿಕ, ಶೈಕ್ಷಣಿಕ ಧಾರ್ಮಿಕ ಕ್ಷೇತ್ರದ ಹರಿಕಾರ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್ ಅವರು ಅ.5ರಂದು ತಮ್ಮ 70ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.

ಆ ಪ್ರಯುಕ್ತ ಜಿಲ್ಲಾ ಮೊಗವೀರ ಯುವ ಸಂಘಟನೆಯ ವಿವಿಧ ಘಟಕ ವ್ಯಾಪ್ತಿಯಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೈಂದೂರು ಶಿರೂರು, ಹೆಮ್ಮಾಡಿ, ಕುಂದಾಪುರ, ಕೋಟೇಶ್ವರ, ಕೋಟ, ಸಾಲಿಗ್ರಾಮ, ಹಾಲಾಡಿ, ಮಂದಾರ್ತಿ, ಹಿರಿಯಡಕ, ಮಲ್ಪೆ, ಉಪ್ಪೂರು, ಬೆಳ್ಳಂಪಳ್ಳಿ, ಉದ್ಯಾವರ ಘಟಕಗಳು ಅಶಕ್ತರಿಗೆ ಅನಾರೋಗ್ಯ ಪೀಡಿತರಿಗೆ ಧನಸಹಾಯ, ವೃದ್ಧಾಶ್ರಮ, ಅನಾಥಶಾಮ್ರಗಳಿಗೆ ನೆರವು ವಿತರಣೆ, ಗೋ ಶಾಲೆಗೆ ಮೇವು ಮತ್ತು ಪಶು ಆಹಾರ ಪೂರೈಕೆ ನಡೆಯಲಿದೆ.

ಜಿಲ್ಲಾ ಮೊಗವೀರ ಯುವ ಸಂಘಟನೆಯ ವತಿಯಿಂದ ಜಿಲ್ಲಾ ಆಸ್ಪತ್ರೆ, ಬ್ರಹ್ಮಾವರ ಆಸ್ಪತ್ರೆಯ ಸರಕಾರಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಅ. ೬ರಂದು ಸ್ವಯಂಪ್ರೇರಿತ ರಕ್ತದಾನ ಶಿಬಿರವು ಬಾರಕೂರಿನ ಸಂಕಮ್ಮ ತಾಯಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಜಯಂತ್ ಅಮೀನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಅಶಕ್ತ ರೋಗಿಗಳಿಗೆ, ಯಕ್ಷಗಾನ ಕಲಾವಿದರಿಗೆ, ವಿಶೇಷ ಶಾಲೆಯ ಮಕ್ಕಳಿಗೆ, ಗುರಿಕಾರರಿಗೆ ನೆರವನ್ನು ನೀಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಿದ್ದು ಯಾವುದೇ ಸಂಭ್ರಮಾಚರಣೆ ಇರುವುದಿಲ್ಲ ಎಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರಕಟನೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!