spot_img
Thursday, March 12, 2026
spot_img

ಶ್ರೀ ವಿನಾಯಕ ಯುವಕ ಮಂಡಲ  ಸಾೖಬ್ರಕಟ್ಟೆ ಯಡ್ತಾಡಿ: 14ನೇ ವರ್ಷದ ಶಾರದೋತ್ಸವ

kundapura: ಶ್ರೀ ವಿನಾಯಕ ಯುವಕ ಮಂಡಲ (ರಿ)  ಸಾೖಬ್ರಕಟ್ಟೆ ಯಡ್ತಾಡಿ ಇವರ ಆಶ್ರಯದಲ್ಲಿ 14 ನೇ ವರ್ಷದ ಸಾರ್ವಜನಿಕ ಶ್ರೀ ಶಾರದ ಮಹೋತ್ಸವ ನಮ್ಮೂರ ದಸರಾ-2025 (ಭಕ್ತಿ ಬಣ್ಣದ ಸಂಭ್ರಮ) ಕಾರ್ಯಕ್ರಮವು ಸಾೖಬ್ರಕಟ್ಟೆಯ ಮಹಾತ್ಮ ಗಾಂಧಿ ಫ್ರೌಡಶಾಲೆಯ ಸಭಾಭವನದಲ್ಲಿ ವೇದಮೂರ್ತಿ  ರಾಜೇಶ್ ಐತಾಳ್ ಅವರ ಪೂಜಾ ಮಾರ್ಗದರ್ಶನದಲ್ಲಿ 29-09-2025 ರಿಂದ 02-10-2025 ತನಕ ನಡೆಯಲಿದೆ.
29-09-2025 ರಂದು ಬೆಳಿಗ್ಗೆ 8.15 ಗಂಟೆಯಿಂದ ಸಂಭ್ರಮದ ಮೆರವಣಿಗೆಯ ಮೂಲಕ ಶ್ರೀ ಶಾರದ ದೇವಿಯ ಪೂರ್ಣ ಕುಂಭ ಕಲಶದೊಂದಿಗೆ ವೈಭವದ ಪುರಪ್ರವೇಶ ಹಾಗೂ ಶ್ರೀ ಶಾರದಾಂಬೆಯ ವಿಗ್ರಹ ಪ್ರತಿಷ್ಠಾಪನೆ, 6 ಕಾಯಿ ಗಣಹೋಮ ಸಂಜೆ 6 ರಿಂದ ಅಂಗನವಾಡಿ ಪುಣಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 7.30ಕ್ಕೆ ‘ ಶ್ರೀ ವಿನಾಯಕ ಸಾಧನ ಶ್ರೀ ಪುರಸ್ಕಾರ’ ಶ್ರೀ ಎಂ ವೀರಣ್ಣ ಶೆಟ್ಟಿ  ಅವರಿಗೆ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು, ರಾತ್ರಿ 8.15 ಕ್ಕೆ ಚೈತನ್ಯ ಕಲಾವಿದರು ಬೈಲೂರು ಪ್ರಸನ್ನ ಶೆಟ್ಟಿ ಬೈಲೂರು ಇವರ ಸಾಂಸಾರಿಕ ಕನ್ನಡ ನಾಟಕ “ಅಷ್ಟೆಮಿ” ನಡೆಯಲಿದೆ. 30-09-2025 ಬೆಳಿಗ್ಗೆ 10.00 ರಿಂದ ಸತ್ಯನಾರಾಯಣ ಪೂಜೆ , ಮಹಾಪೂಜೆ ಹಾಗೂ ಸಂಜೆ 6ಕ್ಕೆ ದುರ್ಗಾದೀಪ ನಮಸ್ಕಾರ,  01-10-2025 ರಂದು ಬೆಳಿಗ್ಗೆ 10ಕ್ಕೆ ದುರ್ಗಾ ಹೋಮ, ಸಂಜೆ 8 ಕ್ಕೆ ಸ್ಥಳೀಯ  ಪ್ರತಿಭೆಗಳಿಂದ ನೃತ್ಯ ವೈವಿಧ್ಯ ರಾತ್ರಿ 9 ರಿಂದ ಓಂಕಾರ ಕಲಾವಿದರು ಕನ್ನುಕೆರೆ ತೆಕ್ಕಟ್ಟೆ ಇವರಿಂದ ಕುಂದಗನ್ನಡದ ಹಾಸ್ಯಮಯ ನಗೆ ನಾಟಕ ವಾಚ್‌ಮ್ಯಾನ್ 02-10-2025 ಬೆಳಿಗ್ಗೆ 10.00 ಕ್ಕೆ ಚಂಡಿಕಹೋಮ, ಮಧ್ಯಾಹ್ನ 12.30 ಕ್ಕೆ ಅನ್ನ ಸಂತರ್ಪಣೆ ಮದ್ಯಾಹ್ನ 1.30 ರಿಂದ ಪುಣಾಣಿಗಳಿಗಾಗಿ ಮುದ್ದು ಕೃಷ್ಣ ಸ್ಪರ್ದೆ, ಮದ್ಯಾಹ್ನ 3 ರಿಂದ ಆಟೋಟ ಸ್ಪರ್ಧೆ, 4 ರಿಂದ ಪುರುಷರು ಮತ್ತು ಮಹಿಳೆಯರಿಗಾಗಿ ಮೊಸರು ಕುಡಿಕೆ ಸ್ಪರ್ಧೆ ಸಂಜೆ 6 ಗಂಟೆಗೆ ಶ್ರೀದೇವಿಯ  ವೈಭವದ ಶೋಭಾಯಾತ್ರೆಯ ಮೂಲಕ ಜಲಸ್ತಂಭನ ಎಂದು ಯುವಕ ಮಂಡಲದ ಅಧ್ಯಕ್ಷ  ಅಕ್ಷಯ ಶೆಟ್ಟಿ, ಕಾರ್ಯದರ್ಶಿ ಶ್ರೀ ಕಾರ್ತಿಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!