spot_img
Thursday, March 12, 2026
spot_img

ಕುಂದಾಪುರ: ಜೀವನ ಮೌಲ್ಯ-ನೈತಿಕ ಶಿಕ್ಷಣ ಶಿಬಿರ ಉದ್ಘಾಟನೆ

ಕುಂದಾಪುರ: ಶಿಕ್ಷಣದಲ್ಲಿ ಪದವಿಯ ಜೊತೆಗೆ ಜೀವನ ಮೌಲ್ಯಗಳು ಅತ್ಯವಶ್ಯಕವಾಗಿ ಬೇಕಾಗುತ್ತದೆ ಎಂದು ಕುಂದೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರರು ವಾಸುದೇವ ಯಡಿಯಾಳ್ ಅಭಿಪ್ರಾಯಪಟ್ಟರು.

ಅವರು ಸೆಪ್ಟೆಂಬರ್ 29ರಂದು ಭಂಡಾರ್ಕಾರ್ಸ್ ಕಾಲೇಜು ಮತ್ತು ಕುಂದೇಶ್ವರ ದೇವಸ್ಥಾನದ ಸಹಯೋಗದಲ್ಲಿ ನಡೆದ ಒಂದು ದಿನದ ಜೀವನ ಮೌಲ್ಯ-ನೈತಿಕ ಶಿಕ್ಷಣ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಉದ್ಯೋಗ, ಪದವಿ, ಶಿಕ್ಷಣ ಇವೆಲ್ಲವೂಗಳಿಗಿಂತ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳುವುದು ಮುಖ್ಯವಾಗಿರುತ್ತದೆ. ಜೀವನವನ್ನು ಮೌಲ್ಯಯುತ ಮತ್ತು ನೈತಿಕವಾಗಿ ರೂಪಿಸಿಕೊಳ್ಳುವ ಕುರಿತು ತಿಳುವಳಿಕೆ ಬೇಕಾಗುತ್ತದೆ. ಮೊದಲು ನೈತಿಕತೆ ಮತ್ತು ಒಳ್ಳೆಯತನವನ್ನು ಕಲಿಯಬೇಕು ಎಂದು ಹೇಳಿದರು.

ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ವಹಿಸಿದ್ದರು.

ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಯು. ಎಸ್. ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಕುಂದಾಪ್ರ ೮೯.೬ ಎಫ್. ಎಮ್ ಇದರ ಕಾರ್ಯಕ್ರಮ ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕಿ ಅಕ್ಷತಾ ಸ್ವಾಗತಿಸಿದರು. ಕಂಪ್ಯೂಟರ್ ಉಪನ್ಯಾಸಕ ರಾಮಚಂದ್ರ ಆಚಾರ್ಯ ವಂದಿಸಿದರು.

ಶಿಬಿರದ ಮೊದಲ ಗೋಷ್ಠಿಯಲ್ಲಿ ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳು ಕುರಿತು ರಾಷ್ಟ್ರೀಯ ತರಬೇತುದಾರರು, ಗಣಿತ ಉಪನ್ಯಾಸಕರು ಎಮ್. ಐ. ಟಿ ಮಣಿಪಾಲ ಡಾ.ಹರೀಣಾಕ್ಷಿ ಮಾತನಾಡಿದರು.

ಎರಡನೇ ಗೋಷ್ಠಿಯಲ್ಲಿ ಯಕ್ಷಗಾನದಲ್ಲಿ ಮನೋಭಾವನೆ ಮತ್ತು ಮನೋರಂಜನೆ ಕುರಿತು ಮುದ್ರಾಡಿ ಹೈಸ್ಕೂಲ್ ಕನ್ನಡ ಶಿಕ್ಷಕರಾದ ಪಿ.ವಿ. ಆನಂದ ಅವರು ಮಾತನಾಡಿದರು.

ಮಧ್ಯಾಹ್ನ ಕೀರ್ತನಕಾರ ಎಸ್. ಪಿ. ಗುರುದಾಸ ಅವರಿಂದ ಕನಕ ಪುರಂದರ ಪ್ರಭೆ ಕುರಿತು ಹರಿಕಥೆ ನಡೆಯಿತು. ಹಾರ್ಮೋನಿಯಮ್ ನಲ್ಲಿ ಎಮ್. ರಮೇಶ್ ಹೆಬ್ಬಾರ್ ಪ್ರದೀಪ ಉಪಾಧ್ಯಾಯ ತಬಲದಲ್ಲಿ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!