spot_img
Thursday, March 12, 2026
spot_img

ಅಮಾಸೆಬೈಲು ಡ್ಯುಯಲ್ ಸ್ಟಾರ್ ಶಾಲೆ ಶಿಕ್ಷಕ ವಿಘ್ನೇಶ್.ಜಿ.ಎಲ್ ಅವರಿಗೆ ಕೋಟ ಶಿವರಾಮ ಕಾರಂತ ಶ್ರೇಷ್ಠ ಶಿಕ್ಷಕ ಪ್ರಶಸ್ತಿ

ಕುಂದಾಪುರ: ಕಾರಂತ ಪ್ರತಿಷ್ಠಾನ ಕೋಟ, ಗ್ರಾಮ ಪಂಚಾಯತ್ ಕೋಟತಟ್ಟು, ಹಾಜಿ ಅಬ್ದುಲ್ಲ ಸಾಹೇಬ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ, ರೋಟರಿ ಕ್ಲಬ್ ಕೋಟ ಸಿಟಿ, ಉಸಿರು ಕೋಟ ಇವರ ಸಾರಥ್ಯದಲ್ಲಿ ಕೊಡಮಾಡುವ ಕಾರಂತ ಶಿಕ್ಷಕ ಪುರಸ್ಕಾರ ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲು ಇಲ್ಲಿನ ಸಹಶಿಕ್ಷಕರಾದ ವಿಘ್ನೇಶ್.ಜಿ.ಎಲ್ ಇವರಿಗೆ ಲಭಿಸಿದೆ.

ಸಮಾಜ ವಿಜ್ಞಾನದ ಶಿಕ್ಷಕರಾಗಿ, ಯಕ್ಷಗಾನ ಗುರುವಾಗಿ ಹಾಗೂ ಶಾಲಾ ಚಟುವಟಿಕೆಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಸಂಸ್ಥೆಯ ಗೌರವವನ್ನು ,ವಿದ್ಯಾರ್ಥಿಗಳ ಪ್ರತಿಭೆಯನ್ನು ಸಮಾಜದಲ್ಲಿ ಅನಾವರಣಗೊಳಿಸುವುದರಲ್ಲಿ ವಿಘ್ನೇಶ್.ಜಿ.ಎಲ್ ತನ್ನದೇ ಆದ ಸೇವೆಯನ್ನು ಸಲ್ಲಿಸುತ್ತಾ ಬರುತ್ತಿದ್ದಾರೆ.

ಎಸ್.ಎಮ್. ಎಸ್.ಕಾಲೇಜಿನ ಪದವಿಯ ಸಂದರ್ಭದಲ್ಲಿ ಬೆಸ್ಟ್ ಔಟ್ ಗೋಯಿಂಗ್ ಪ್ರಶಸ್ತಿಯನ್ನು ಪಡೆದುಕೊಂಡಿರುವ ಇವರು, ಚಿಕ್ಕಂದಿನಲ್ಲಿಯೇ ಯಕ್ಷಗಾನದ ಪ್ರಶಿಕ್ಷಣಾರ್ಥಿಯಾಗಿ ಪ್ರಸ್ತುತ ಯಕ್ಷಗಾನ ಗುರುವಾಗಿ, ನಾಟಕ, ಕ್ರೀಡೆ, ಕವನ ರಚನೆ, ಚಿತ್ರಕಲೆ ಮುಂತಾದ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಡಿದ್ದಾರೆ. ಅವರ ಕಾರ್ಯಕ್ಷಮತೆ ಪೋಷಕರ ಹೃನ್ಮನವನ್ನು ಗೆದ್ದಿದೆ. ವಿದ್ಯಾರ್ಥಿಗಳನ್ನು ಶಾಲೆ, ವಲಯ ,ಜಿಲ್ಲೆ ,ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ಸಹಕರಿಸಿದ್ದು ಅವರೊಂದಿಗೆ ಡ್ಯುಯಲ್ ಸ್ಟಾರ್ ಶಾಲೆಯ ಹೆಸರು ಕೂಡ ಆಗಸದ ಎತ್ತರಕ್ಕೆ ಏರಿರುತ್ತದೆ. ಅವರ ಶಿಕ್ಷಣ ಕ್ಷೇತ್ರದ ಸೇವೆ ಹಾಗೂ ಸಾಧನೆಗಾಗಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ರುಪ್ಸ ರವರು ನೀಡಿದ್ದಾರೆ. ಅಲ್ಲದೆ ದೇವಾಡಿಗರ ಸಂಘ ಮಂಗಳೂರು ಇವರು ಕೂಡ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಕೂಡ ನೀಡಿರುತ್ತಾರೆ. ಶಾಲೆಯಲ್ಲಿ ಪ್ರತಿ ವರ್ಷ ಕೊಡ ಮಾಡುವ ವಿದ್ಯಾ ಸ್ಪೂರ್ತಿ ಪ್ರಶಸ್ತಿಯನ್ನು ಕೂಡ ಇವರು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ಮಕ್ಕಳಿಗೆ ಹೆಜ್ಜೆ ಕಲಿಕೆ, ಮುಖವರ್ಣಿಕೆ, ಚೆಂಡೆ ಮದ್ದಳೆಯ ತರಬೇತಿಯನ್ನು ನೀಡುತ್ತಿದ್ದಾರೆ.

ಪ್ರಸ್ತುತ ಶಾಲೆಯಲ್ಲಿ ಗೆಜ್ಜೆನಾದ ಯಕ್ಷ ಕಲಾರಂಗವನ್ನು ಸ್ಥಾಪಿಸಿ ಅಲ್ಲಿ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿಯನ್ನು ನೀಡಿ ಅವರ ಯಕ್ಷಗಾನ ಪ್ರದರ್ಶನವನ್ನು ಅಮಾಸೆಬೈಲು, ಹೆಂಗವಳ್ಳಿ, ಶೇಡಿಮನೆ ಚಕ್ಕರಮಕ್ಕಿ, ಗೋಳಿಯಂಗಡಿ ,ಹಿಲಿಯಾಣ, ಸಿದ್ದಾಪುರ , ಕುಣಿಗಲ್, ಬಾರ್ಕೂರು, ಕುಂದಾಪುರ ಮುಂತಾದ ಸ್ಥಳಗಳಲ್ಲಿ ಪ್ರದರ್ಶನ ನೀಡಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!