spot_img
Monday, April 27, 2026
spot_img

ಕೋಟ-ಪಡುಕರೆ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಮಹಿಳಾ ಆರೋಗ್ಯ ಅರಿವು ಕಾರ್ಯಕ್ರಮ

ಲಕ್ಚ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಮಹಿಳಾ ಘಟಕದ
ವತಿಯಿಂದ ದಿನಾಂಕ 10.09.2025ರಂದು ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಹಮ್ಮಿಕೊಂಡ ಮಹಿಳಾ ಆರೋಗ್ಯದ ಅರಿವು
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕುಂದಾಪುರ ಗ್ರಾಮೀಣ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ
ಕೋಟೇಶ್ವರ ಇಲ್ಲಿಯ ಸ್ತ್ರೀ-ರೋಗ ಮತ್ತು ಪ್ರಸೂತಿ ತಂತ್ರ ವಿಭಾಗದ ಪ್ರಾಧ್ಯಾಪಕರಾಗಿರು ಡಾ.ಮಯೂರ ಎಂ.ಡಿ ಇವರು
ಮಹಿಳೆಯರು ಇತ್ತೀಚೆಗೆ ಎದುರಿಸುತ್ತಿರುವ ಪಾಲಿಸಿಸ್ಟಿಕ ಓವೆರೀಯನ್ ರೋಗದ ಕುರಿತು ಮಾಹಿತಿಯನ್ನು ನೀಡುತ್ತಾ ಈ ರೋಗದ
ಲಕ್ಷಣಗಳಿಗೆ ಹೆಣ್ಣು ಮಕ್ಕಳು ಸಕಾಲಿಕ ಆರೋಗ್ಯ ಕಾಳಜಿಯನ್ನು ವಹಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ಮಹಿಳಾ ಘಟಕದ ಸಂಯೋಜಕರಾದ ಡಾ.ಸುನೀತ ವಿ ಇವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಕಾರ್ಯಕ್ರಮದ ಪ್ರಸ್ತುತತೆಯ ಬಗ್ಗೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜೇಂದ್ರ ಎಸ್‌ ನಾಯಕ ಇವರು ವಿದ್ಯಾರ್ಥಿನಿಯರು ಹೆಚ್ಚಾಗಿ ಸಂಪ್ರದಾಯಿಕ
ಆಹಾರ ಆಭ್ಯಾಸವನ್ನು ರೂಢಿಸಿಕೊಳ್ಳುವ ಮೂಲಕ ತಮ್ಮ ಆರೋಗ್ಯವನ್ನು ಸಂರಕ್ಷಣೆ ಮಾಡಬಹುದೆಂದು ನುಡಿದರು.

ಸಂಪನ್ಮೂಲ ವ್ಯಕ್ತಿಯನ್ನು ಡಾ.ರಶ್ಮಿ ಇತಿಹಾಸ ಉಪನ್ಯಾಸಕರು ಪರಿಚಯಿಸಿದರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ.ರಮೇಶ್‌ ಆಚಾರ್‌ ಭೋದಕ ಮತ್ತು ಭೋದಕೇತರ ವರ್ಗ, ಮಹಿಳಾ ಘಟಕದ ವಿದ್ಯಾರ್ಥಿ ಪ್ರತಿನಿಧಿಗಳಾದ ಅಂತಿಮ ಬಿ.ಎ ರಕ್ಷಿತಾ ,
ಅಂತಿಮ ಬಿ.ಸಿ.ಎ ಭೂಮಿಕಾ ಇವರು ಉಪಸ್ಥಿತರಿದ್ದರು,

ಅಂತಿಮ ಬಿ.ಸಿ.ಎ ಪ್ರತಿಕ್ಷ ಸ್ವಾಗತಿಸಿದರು, ಪ್ರೀತಿಕಾ ಅಂತಿಮ ಬಿ.ಎ ವಂದಿಸಿದರು ಹಾಗೂ ಭೂಮಿಕ ಕಾರ್ಯಕ್ರಮವನ್ನು ನಿರೂಪಿಸಿದರು

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!