spot_img
Friday, March 13, 2026
spot_img

ಶಿರೂರು ಸರಕಾರಿ ಮಾದರಿ ಶಾಲೆಯ ಶಿಕ್ಷಕ ಸಿ.ಎನ್.ಬಿಲ್ಲವ ಶಿರೂರು ಇವರಿಗೆ ರಾಜ್ಯ ಪ್ರಶಸ್ತಿ

ಬೈಂದೂರು: ಪಿ.ಎಂ.ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರು ಇಲ್ಲಿನ ಶಿಕ್ಷಕರಾಗಿರುವ ಸಿ.ಎನ್.ಬಿಲ್ಲವ ಶಿರೂರು ಅವರು 2025ನೇ ಸಾಲಿನ ಕರ್ನಾಟಕ ಸರಕಾರದ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಒಟ್ಟು 20 ಶಿಕ್ಷಕರಿಗೆ ಪ್ರಶಸ್ತಿಯನ್ನು ನೀಡುತ್ತಿದ್ದು ಉಡುಪಿ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಶಿಕ್ಷಕರಾಗಿದ್ದರು.ಪ್ರತಿಭಾವಂತ ಶಿಕ್ಷಕರಾದ ಇವರು ಪಿ.ಎಂ.ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರಿನಲ್ಲಿ ಉತ್ತಮ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಿ.ಎನ್.ಬಿಲ್ಲವ ಶಿರೂರು ಇವರು 60ಕ್ಕೂ ಹೆಚ್ಚು ಇಲಾಖಾ ತರಬೇತಿ ಪಡೆದಿದ್ದು ಜಿಲ್ಲಾ, ರಾಜ್ಯ ಮಟ್ಟದ ತರಬೇತಿಯ ಜೊತೆಗೆ ಸ್ಕೌಟ್, ಮಾಹಿತಿ ಸಿಂಧು, ಯೋಗ ಮುಂತಾದ ತರಬೇತಿಯನ್ನು ಪಡೆದಿದ್ದಾರೆ. ಶಿಕ್ಷಕ ವೃತ್ತಿಯೊಂದಿಗೆ ಚಿತ್ರಕಲೆ, ಕ್ಲೇ ಆರ್ಟ್ಸ್, ಕ್ರಾಫ್ಟ್, ಮರಳು ಶಿಲ್ಪ, ಕಲಿಕಾ ಮಾದರಿ ತಯಾರಿ, ಕಥೆ, ಕವನ, ನಾಟಕ ರಚನೆ, ಪತ್ರಿಕೆ ಸಂಪಾದಕತ್ವ, ಸಿಮೆಂಟ್ ಕಲಾಕೃತಿ ತಯಾರಿ, ಗಾರ್ಡನ್/ತೋಟಗಾರಿಕೆ ಜೊತೆಗೆ ಯೋಗ, ನಾಟಕ ಮತ್ತು ಯಕ್ಷಗಾನದ ಗೀಳು,ಶಿಕ್ಷಕ ವೃತ್ತಿಯೊಂದಿಗೆ ಬಿಡುವಿನ ಸಮಯದಲ್ಲಿ ಸಂಘ ಪರಿವಾರದೊಂದಿಗೆ ವ್ಯವಹರಿಸುತ್ತಾ ಜೆ.ಸಿ, ಹಳೆ ವಿದ್ಯಾರ್ಥಿ ಸಂಘ, ಶತಮಾನೋತ್ಸವ ಸಮಿತಿ, ಶಾರದೋತ್ಸವ ಸಮಿತಿ ಮುಂತಾದ ಸಮಿತಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಸೃಜನಶೀಲತೆ ಹಾಗೂ ಕೌಶಲ್ಯಗಳಿಗೆ ನೀರೆರೆದು ಪೋಷಿಸಿದ್ದಾರೆ.
ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ 3 ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ, ಕ್ಲೇ ಮಾಡಲಿಂಗ್ ವಿಭಾಗದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ, ನನ್ನ ಶಾಲಾ ಕೈತೋಟ ಪ್ರಶಸ್ತಿ, ಜಿಲ್ಲಾ ಮಟ್ಟದಲ್ಲಿ ಸತತ 8 ಬಾರಿ ಪ್ರಥಮ ಬಹುಮಾನ ಹಾಗೂ 3 ಬಾರಿ ರಾಜ್ಯ ಮಟ್ಟದಲ್ಲಿ ಭಾಗವಹಿಸಿದ್ದು ಹಾಗೂ 1 ಬಾರಿ ರಾಜ್ಯ ಮಟ್ಟದಲ್ಲಿ ಕಲಿಕಾ ಮಾದರಿ ತಯಾರಿಗೆ ಬಹುಮಾನ ಬಂದಿದ್ದು ಉತ್ತಮ ಜನಗಣತಿ ಕಾರ್ಯಕ್ಕೆ ರಾಷ್ಟ್ರಪತಿ ಬೆಳ್ಳಿ ಪದಕ ಬಂದಿದೆ ಹಾಗೂ 2021ರ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!