spot_img
Friday, March 13, 2026
spot_img

ಎಸ್.ಎಲ್.ಆರ್.ಎಂ ಘಟಕ ನಿರ್ಮಾಣಕ್ಕೆ ಸ್ಥಳ ಸಮಸ್ಯೆ ಪರಿಹರಿಸಿ-ವಿಕಾಸ ಹೆಗ್ಡೆ

ಕುಂದಾಪುರ: ಕುಂದಾಪುರ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಸಂಸದರು ಮತ್ತು ಕುಂದಾಪುರ ಶಾಸಕರು ಗ್ರಾಮ ಪಂಚಾಯತುಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳ ಕುರಿತು ಸಭೆ ಕರೆದಿರುವುದು ಅತ್ಯಂತ ಸ್ವಾಗತಾರ್ಹ ಆದರೆ ಘನ ತ್ಯಾಜ್ಯ ವಿಲೇವಾರಿ ಮಾಡುವಾಗ ಹಸಿಕಸ ಹಾಗೂ ಒಣಕಸ ವಿಲೆಯನ್ನು ಹೆಚ್ಚಿನ ಎಲ್ಲಾ ಗ್ರಾಮ ಪಂಚಾಯತುಗಳು ಸಾರ್ವಜನಿಕರಲ್ಲಿ ಜಾಗೃತಗೊಳಿಸುವುದರ ಮೂಲಕ ಕಸ ವಿಲೇವಾರಿಯನ್ನು ಕ್ರಮಬದ್ದವಾಗಿ ಹಾಗೂ ಯಶಸ್ವಿಯಾಗಿ ನಡೆಸುತ್ತಿವೆ. ಆದರೆ ಸಂಸದರ ಹಾಗೂ ಶಾಸಕರ ಸಭೆಯಲ್ಲಿ ಗ್ರಾಮ ಪಂಚಾಯತುಗಳಲ್ಲಿ ಎಸ್ ಎಲ್ ಆರ್ ಎಂ ಘಟಕ ಸ್ಥಾಪನೆಗೆ ಇರುವ ಸ್ಥಳದ ಸಮಸ್ಯೆಗಳು ಹೆಚ್ಚಿನ ಗ್ರಾಮ ಪಂಚಾಯತುಗಳಲ್ಲಿ ಇತ್ಯರ್ಥವಾಗಿದೆ ಎನ್ನುವುದು ಅವರ ಮಾಹಿತಿಯ ಕೊರತೆಯಿಂದ ಇರಬಹುದು. ಇಂದಿಗೂ ಅದೆಷ್ಟೋ ಗ್ರಾಮ ಪಂಚಾಯತುಗಳಲ್ಲಿ ವಿಶೇಷವಾಗಿ ಕರಾವಳಿ ಭಾಗದ ಹೆಚ್ಚಿನ ಗ್ರಾಮ ಪಂಚಾಯತುಗಳಲ್ಲಿ ಎಸ್ ಎಲ್ ಆರ್ ಎಂ ಘಟಕ ನಿರ್ಮಾಣಕ್ಕೆ ಸ್ಥಳದ ಸಮಸ್ಯೆಯಿದೆ, ಇನ್ನು ಪುರಸಭೆಯವರು ಕಂದಾವರ ಗ್ರಾಮದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಮಾಡಿದ್ದಾರೆ ಆದರೆ ಇವರು ಸುತ್ತಮುತ್ತಲಿನ ಗ್ರಾಮ ಪಂಚಾಯತುಗಳಿಗೆ ಅಲ್ಲಿ ಕಸ ಹಾಕಲು ಬಿಡುವುದಿಲ್ಲ. ಸಂಸದರು ಹಾಗೂ ಶಾಸಕರು ತ್ಯಾಜ್ಯ ವಿಲೆಯಲ್ಲಿ ಸಮಸ್ಯೆ ಆದರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಹೊಣೆ ಮಾಡುತ್ತೇವೆ ಎನ್ನುವುದು ಸರಿಯಲ್ಲ, ತ್ಯಾಜ್ಯ ವಿಲೆಗೆ ಅಗತ್ಯವಿರುವ ಸ್ಥಳದ ಸಮಸ್ಯೆಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಪರಿಹರಿಸಲು ಸಾಧ್ಯವಿಲ್ಲ ಈ ಸಮಸ್ಯೆಯನ್ನು ಸಂಸದರು ಹಾಗೂ ಶಾಸಕರು ವಿಶೇಷ ಮುತುವರ್ಜಿವಹಿಸಿ ಬಗೆ ಹರಿಸುವುದು ಉತ್ತಮವೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!