spot_img
Friday, March 13, 2026
spot_img

ಶಿಕ್ಷಕಿ ರಾಧಿಕಾ ರಾವ್ ಅವರಿಗೆ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿ

ಕುಂದಾಪುರ: ಅಮಾಸೆಬೈಲು ಡ್ಯುಯಲ್ ಸ್ಟಾರ್ ಶಾಲೆಯ ಮುಖ್ಯ ಶಿಕ್ಷಿ ರಾಧಿಕಾ ರಾವ್ ಅವರಿಗೆ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕಿ ಪ್ರಶಸ್ತಿ ಲಭಿಸಿದೆ.

ಬೆಂಗಳೂರಿನಲ್ಲಿ ಜನಿಸಿ, ಎಂ.ಎಸ್ಸಿ.ಬಿ.ಈಡಿ. ಪದವೀಧರೆಯಾಗಿ ಪ್ರಥಮದಲ್ಲಿ ಬೆಂಗಳೂರಿನಲ್ಲಿ ಒಂದು ಕಂಪೆನಿಯಲ್ಲಿ ಉದ್ಯೋಗವನ್ನು ಪ್ರಾರಂಭಿಸಿದ ರಾಧಿಕಾ ರಾವ್, ಕುಂದಾಪುರದ ವಕೀಲರಾದ ನಾಗರಾಜ ರಾವ್ ಅವರೊಂದಿಗೆ ಮದುವೆಯಾದ ಬಳಿಕ ಅಮಾಸೆಬೈಲು ಡ್ಯುಯಲ್ ಸ್ಟಾರ್ ಶಾಲೆಗೆ ಶಿಕ್ಷಕಿಯಾಗಿ ಬಂದರು.

ಕರೋನಾ ಕಾಲದ ಇವರ ಸೇವೆ ವಿದ್ಯಾರ್ಥಿಗಳ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಪಡೆಯಿತು. ಆ ವರ್ಷ ಡ್ಯುಯಲ್ ಸ್ಟಾರ್ ಶಾಲೆಯಲ್ಲಿ ವಿದ್ಯಾ ಸ್ಪೂರ್ತಿ ಪ್ರಶಸ್ತಿಯನ್ನು ನೀಡಲಾಗುವುದು ಅದು ಆನ್ ಲೈನ್ ತಂತ್ರಾಂಶಗಳ ಮೂಲಕ ವಿದ್ಯಾರ್ಥಿಗಳೇ ಆಯ್ಕೆ ಮಾಡಬೇಕಾಗಿತ್ತು. ಕೊನೆಯಲ್ಲಿ ರಾಧಿಕಾ ರಾವ್ ರವರ ಹೆಸರು ಅಗ್ರ ಪಂಕ್ತಿಯಲ್ಲಿ ಬಂದಿತು. ಪ್ರಪ್ರಥಮ ವಿದ್ಯಾ ಸ್ಪೂರ್ತಿ ಪ್ರಶಸ್ತಿಗೆ ಭಾಜನರಾದರು. ಶಾಲೆಯಲ್ಲಿ ಆಡಳಿತ ಮಂಡಳಿ, ವಿದ್ಯಾರ್ಥಿಗಳು, ಶಿಕ್ಷಕರು ಶಿಕ್ಷಕೇತರ ವೃಂದ ಮತ್ತು ಪೋಷಕರು ಮೆಚ್ಚಿದ ಶಿಕ್ಷಕಿಯಾಗಿ ಹೊರ ಹೊಮ್ಮಿದರು.
ಶಾಲೆಯಲ್ಲಿ ಮೂರು ಎಸ್.ಎಸ್.ಎಲ್.ಸಿ.ಬ್ಯಾಚ್ ಗಳು ಹೊರ ಹೊಮ್ಮಿ ನೂರು ಫಲಿತಾಂಶವನ್ನು ಪಡೆಯುವುದರೊಂದಿಗೆ ಹೆಚ್ಚಿನ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಲು ರಾಧಿಕಾ ರಾವ್ ರವರ ಪಾತ್ರವೂ ಬಹಳ ಮುಖ್ಯವಾಗಿದೆ. ಪ್ರತಿ ವರ್ಷವೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸರಸ್ವತಿ ದೇವಿಯ ಆರಾಧನೆ ಮಾಡಿ, ವಾರ್ಷಿಕ ಪರೀಕ್ಷೆ ಸುಲಭ ಮತ್ತು ಸುಲಲಿತವಾಗಿ, ಸಾಂಗವಾಗಿ, ನಿರ್ವಿಘ್ನವಾಗಿ ನಡೆಯಲಿ ಎಂಬ ಶುಭ ಹಾರೈಕೆಯಿಂದ ಪ್ರತಿಯೊಬ್ಬ ವಿದ್ಯಾರ್ಥಿಗೂ ಪೆನ್ನನ್ನು ನೀಡುತ್ತಾ ಬಂದಿರುವುದು ಮಾತೃ ಹೃದಯಿ ಎಂಬುದು ಎದ್ದು ಕಾಣುತ್ತದೆ. ಶಾಲೆಯ ಎಲ್ಲಾ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಸದಾ ಮುಂದೆ ಇದ್ದು ನಡೆಸಿಕೊಂಡು ಹೋಗುವ ಮುಂದಾಳುವಾಗಿ ಮುಂದಿರುವುದು ಮಾಸದ ಚೈತನ್ಯವಾಗಿದ್ದಾರೆ. ಶಾಲೆಯು ಹಮ್ಮಿಕೊಳ್ಳುವ ಕ್ರೀಡೆ, ವಾರ್ಷಿಕೋತ್ಸವ, ಪ್ರತಿಭಾ ಕಾರಂಜಿ, ವಿಜ್ಞಾನ ಮೇಳ, ಇನ್ ಸ್ಪಯರ್ ಅವಾರ್ಡ್, ಶಾಲಾ ಸಂಚಿಕೆ ಬ್ಲೂ ಮಿಂಗ್ ಸ್ಟಾರ್ಸ್ ನ ಸಂಪಾದಕಿ, ತಿಂಗಳ ಪರೀಕ್ಷೆ, ಪೋಷಕರ ಸಭೆ, ರಾಷ್ಟ್ರೀಯ ಹಬ್ಬಗಳ ಆಚರಣೆ ಹೀಗೆ ಸಣ್ಣ ಪುಟ್ಟ ಕಾರ್ಯಕ್ರಮಗಳಿಂದ ಹಿಡಿದು ದೊಡ್ಡ ಕಾರ್ಯಕ್ರಮಗಳ ವರೆಗಿನ ಎಡೆಬಿಡದ ಛಲ, ಕಾರ್ಯತತ್ಪರತೆ, ಸಮಯದ ಹೊಂದಾಣಿಕೆ, ದೃಢ ಸಂಕಲ್ಪ, ಇಚ್ಛಾಶಕ್ತಿಯಿಂದ ಎಲ್ಲವೂ ಸಾಧ್ಯ ಎಂಬುದನ್ನು ನಿರೂಪಿಸಿ ತೋರಿಸಿದ್ದಾರೆ. ಪತಿ ನಾಗರಾಜ ರಾವ್, ಪುತ್ರಿ ಸನ್ನಿಧಿಯೊಂದಿಗಿನ ಸಂತೃಪ್ತ ಸಂಸಾರ ಇವರದ್ದು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!