spot_img
Friday, March 13, 2026
spot_img

ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಮಾಣಿಕ್ಯ ಎ.ಡಿ ಕಬಡ್ಡಿಯಲ್ಲಿ ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ ತಂಡಕ್ಕೆ ಆಯ್ಕೆ

ಕುಂದಾಪುರ: ಸಿ‌ಐ‌ಎಸ್‌ಸಿ‌ಇ ನಡೆಸುತ್ತಿರುವ ಗೇಮ್ಸ್ ಮತ್ತು ಸ್ಪೋರ್ಟ್ಸ್ 2025-26ರ ಸ್ಪರ್ಧೆಗಳ ಅಂಗವಾಗಿ ಆ.26ರಿಂದ ಮೂರು ದಿನಗಳ ತನಕ, ಗೋಬಿಂದ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್, ಬಹದೂರ್, ಪಂಜಾಬ್‌ನಲ್ಲಿ ನಡೆದ ರಾಷ್ಟ್ರೀಯ ಕಬಡ್ಡಿ ಸ್ಪರ್ಧೆಗಳಲ್ಲಿ ಕೆ‌ಎಜಿ‌ಒ ಕರ್ನಾಟಕ ತಂಡದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ವಿದ್ಯಾರ್ಥಿಗಳಾದ ಭವ್ಯಶ್ರೀ ಎಸ್ ಎಸ್, ವಿಜಯಲಕ್ಷ್ಮೀ ಎಚ್ ಎಚ್, ಮಾಣಿಕ್ಯ ಎ ಡಿ, ದೀಕ್ಷಾ ಕೆ ಸಿ, ತನಿಷ್ಕಾ ವಿ ಎಮ್ ಭಾಗವಹಿಸಿದ್ದರು. ತಂಡದ ನಿರ್ವಾಹಣೆಯನ್ನು ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿಯಾದ ಕುಮಾರಿ ಲತಾ ಗೌಡ ಅವರು ನಡೆಸಿದ್ದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಕೃಷ್ಣ ಹುಲ್ಲಾಳ ನೇತೃತ್ವದಲ್ಲಿ ಶಾಲೆಯ ಕಬಡ್ಡಿ ತರಬೇತುದಾರರಾದ ಕೇಶವ, ಬೈಂದೂರು ಅವರು ವಿದ್ಯಾರ್ಥಿಗಳಿಗೆ ಸೂಕ್ತವಾದ ಮಾರ್ಗದರ್ಶನಗೈದಿದ್ದರು. ಇವರಲ್ಲಿ ಮಾಣಿಕ್ಯ ಎಡಿ ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ ಆಟಗಾರ್ತಿಯಾಗಿ ಆಯ್ಕೆಯಾಗಿದ್ದಾರೆ.

ಇವರೆಲ್ಲರನ್ನೂ ಶಾಲೆಯ ವಾದ್ಯಮೇಳದೊಂದಿಗೆ ಸ್ವಾಗತಿಸಿ, ಶಾಂತಾರಾಮ ವೇದಿಕೆಯಲ್ಲಿ ಗೌರವಿಸಲಾಯಿತು. ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಶರಣ ಕುಮಾರರು ಅಭಿನಂದಿಸಿ ಮಾತನಾಡುತ್ತಾ ” ಸಾಧನೆ ಎಂಬುದು ಒಮ್ಮೆಲೇ ದೊರಕಲಾರದು. ಪ್ರತಿಯೊಂದು ಮೆಟ್ಟಿಲನ್ನು ಏರಿ ಸಾಗಿದರೆ ಮಾತ್ರ ಸಾಧಿಸಲು ಸಾಧ್ಯ. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಮಾಣಿಕ್ಯ ಶಾಲೆಯ ಮಾಣಿಕ್ಯಳಾಗಿದ್ದಾಳೆ.” ಎನ್ನುತ್ತಾ ವಿದ್ಯಾರ್ಥಿಗಳ ಜೀವನ ಹೇಗಿರಬೇಕೆಂದು ತಿಳಿಸುತ್ತಾ ಈ ಸಾಧನೆಗೆ ಸಹಕರಿಸಿದ ಸರ್ವರನ್ನೂ ಸ್ಮರಿಸಿದರು.

ಶಾಲಾ ಉಪಪ್ರಾಂಶುಪಾಲರಾದ ರಾಮ ದೇವಾಡಿಗ ಮಾತನಾಡುತ್ತಾ “ಗಿನ್ನಿಸ್ ದಾಖಲೆಯಂತೆ ಇದು ಕೂಡ ಮಹತ್ತರವಾದ ಹೆಜ್ಜೆಯಾಗಿದ್ದು, ಮೊದಲ ಪ್ರಯತ್ನದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಸಾಧನೆ ಮಾಡಿರುವುದು ಹೆಮ್ಮೆಯೆನಿಸುತ್ತಿದೆ. ಮುಂದಿನ ವರುಷಗಳಲ್ಲಿ ಇನ್ನಷ್ಟು ಪ್ರತಿಭೆಗಳು ಹೊರಹೊಮ್ಮಬೇಕಾಗಿವೆ. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಬೇಕಾಗಿದೆ.” ಎಂದರು. ಶಾಲಾ ಸಂಯೋಜಕರಾದ ಶ್ರೀಮಧು ಕೆ ಎಲ್ ಕಾರ್ಯಕ್ರಮವನ್ನು ನಿರ್ವಹಿಸಿದ್ದರು.

ಈ ಸಂದರ್ಭದಲ್ಲಿ ಶಾಲಾ ಆಡಳಿತಾಧಿಕಾರಿ ಶ್ರೀಮತಿ ವೀಣಾರಶ್ಮಿ ಎಮ್, ಪ್ರಾಥಮಿಕಶಾಲಾ ಮುಖ್ಯೋಪಾಧ್ಯಾಯ ಶ್ರೀಮತಿ ಸುಜಾತಾ ಸದಾರಾಮ ಮತ್ತು ಶಿಕ್ಷಕ-ಶಿಕ್ಷಕೇತರ ವೃಂದದ ಸರ್ವ ಸದಸ್ಯರು ಉಪಸ್ಥಿತರಿದ್ದು, ವಿದ್ಯಾರ್ಥಿಗಳನ್ನು ಅಭಿನಂದಿಸಿ, ಹರ್ಷವನ್ನು ವ್ಯಕ್ತಪಡಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!