spot_img
Monday, March 16, 2026
spot_img

ಹೆಮ್ಮಾಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: 1.12 ಕೋಟಿ ಲಾಭ: ಶೇ.12 ಡಿವಿಡೆಂಡ್ ಘೋಷಣೆ

ಜನಪ್ರತಿನಿಧಿ ವಾರ್ತೆ] ಕುಂದಾಪುರ: ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ., ಹೆಮ್ಮಾಡಿ ವರದಿ ವರ್ಷದಲ್ಲಿ ಸರ್ವಾಂಗೀಣ ಪ್ರಗತಿಯ ಹಾದಿಯಲ್ಲಿ ಮುನ್ನೆಡೆಯುತ್ತಿದ್ದು ವಾರ್ಷಿಕ 281,22,13,181.10 ವಾರ್ಷಿಕ ವ್ಯವಹಾರ ನಡೆಸಿದೆ. ವರದಿ ಸಾಲಿನಲ್ಲಿ ರೂ.1,12,09,266.17 ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.12% ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಉದಯ ಪೂಜಾರಿ ತಿಳಿಸಿದರು.

ಆ.19ರಂದು ತಲ್ಲೂರು ಮೂರ್ತೆದಾರರ ಸಭಾಭವನದಲ್ಲಿ ನಡೆದ ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ., ಹೆಮ್ಮಾಡಿ ಇದರ 34ನೇ ವಾರ್ಷಿಕ ಸರ್ವಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘದ ವಾರ್ಷಿಕ ಸಾಧನೆಯ ವಿವರ ನೀಡಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕೃಷ್ಣ ಅವರು, ವರದಿ ವರ್ಷದ ಅಂತ್ಯಕ್ಕೆ ಸದಸ್ಯರ ಪಾಲುಬಂಡವಾಳ ಶೇ.4.25% ರಷ್ಟು ಪ್ರಗತಿ ಸಾಧಿಸಿದೆ. ಒಟ್ಟು 9,568 ಸದಸ್ಯರಿದ್ದು, ರೂ.97,45,850 ಪಾಲುಬಂಡವಾಳವನ್ನು ಹೊಂದಿದೆ. ಠೇವಣಿ ಸಂಗ್ರಹಣೆಯಲ್ಲಿ ಕೂಡಾ ಶೇ.6.59ರಷ್ಟು ಹೆಚ್ಚಳ ಸಾಧಿಸಿದೆ. ಒಟ್ಟು ರೂ. 63,99,74,841 ಠೇವಣಿಯನ್ನು ಹೊಂದಿದೆ ಎಂದರು.

ಸದಸ್ಯರ ಬೇಡಿಕೆಗನುಗುಣವಾಗಿ ವಿವಿಧ ಬಗೆಯ ಸಾಲವನನು ನೀಡಲಾಗಿದ್ದು, ರೂ.54,19,61,909 ಸಾಲ ನೀಡಿದ್ದು, ರೂ.48,22,46,315 ವಸೂಲಾತಿಯಾಗಿದ್ದು, ರೂ.57,26,75,599.40 ಹೊರಬಾಕಿ ಇದ್ದು, ಶೇ.11.64% ವೃದ್ಧಿಯಾಗಿದೆ. ಮುಂದೆ ಶೇ.100 ಸಾಲ ವಸೂಲಾತಿಗೆ ಪ್ರಯತ್ನಿಸಲಾಗುವುದು ಎಂದರು.

ವರದಿ ಸಾಲಿನಲ್ಲಿ ಸಂಘದಿಂದ 324 ಕಲ್ಪತರು ಮಹಿಳಾ ಸ್ವ-ಸಹಾಯ ಗುಂಪುಗಳನ್ನು ಪ್ರಾಯೋಜಿಸಿದ್ದು, ಮಹಿಳಾ ಸಶಕ್ತಿಕರಣಕ್ಕಾಗಿ ರೂ.17,53,42,396 ಸಾಲ ನೀಡಲಾಗಿದೆ. ಸಂಸ್ಥೆಯು ವರದಿ ವರ್ಷದಲ್ಲಿ ಒಟ್ಟು ರೂ.281,22,13,184.10. ಇದರಲ್ಲಿ ಒಟ್ಟು ದುಡಿಯುವ ಬಂಡವಾಳ 71,30,92,648.16 ಆಗಿರುತ್ತದೆ. ಸಂಘವು ವಿವಿಧ ಆರ್ಥಿಕ ಸಂಸ್ಥೆಗಳಲ್ಲಿ ರೂ.14,58,86,047.64 ಧನ ವಿನಿಯೋಗ ಮಾಡಿದೆ. ಸಂಘವು ಒಟ್ಟು 5,00,08,335.25 ನಿಧಿಗಳನ್ನು ಹೊಂದಿದೆ. ಸಂಘದಲ್ಲಿ ವರ್ಷದ ಅಂತ್ಯಕ್ಕೆ ಚರಾಸ್ತಿರ ಆಸ್ತಿ ರೂ.3,46,05,633.95ರಷ್ಟು ಆಸ್ತಿಯನ್ನು ಹೊಂದಿದೆ. ವರದಿ ವರ್ಷದಲ್ಲಿ ರೂ.14,59,796 ಸವಕಳಿ ತೆಗೆದಿರಿಸಲಾಗಿದೆ ಎಂದರು.

ಸಂಘವು ಸತತವಾಗಿ ‘ಎ’ ದರ್ಜೆಯ ಆಡಿಟ್ ವರ್ಗೀಕರಣ ಹೊಂದಿದ್ದು, ಈ ಬಾರಿಯೂ ‘ಎ’ ದರ್ಜೆಯ ಆಡಿಟ್ ವರ್ಗೀಕರಣ ದೊರೆತಿದೆ. 2025-26ನೇ ಆರ್ಥಿಕ ವರ್ಷಕ್ಕೆ ರೂ.7,48,71,000.00 ಬಜೆಟ್ ಹೊಂದಲಾಗಿದೆ. ಮುಂದಿನ ವರ್ಷದಲ್ಲಿ ಒಂದು ಕೋಟಿ 30 ಲಕ್ಷಕ್ಕೂ ಮಿಕ್ಕಿ ನಿವ್ವಳ ಲಾಭಗಳಿಸುವ ಗುರಿ ಹೊಂದಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಸಂಘದ ‘ಎ’ ತರಗತಿ ಸದಸ್ಯರನ್ನು ಹೆಚ್ಚಿಸಿಕೊಳ್ಳುವುದು, ಠೇವಣಿ ಹಾಗೂ ಸಾಲದ ಗುರಿ ಮೀರಿದ ಸಾಧನೆ ಮಾಡುವುದು, ಕಲ್ಪತರು ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರ ಅಗತ್ಯಕ್ಕೆ ತಕ್ಕಂತೆ ಸಾಲ ಸೌಲಭ್ಯ ನೀಡುವುದು, ಹೆಮ್ಮಾಡಿಯ ಸ್ವಂತ ಜಾಗದಲ್ಲಿ ಪ್ರಧಾನ ಕಚೇರಿ ನಿರ್ಮಿಸುವುದು, ಹೊಸ ಶಾಖೆಯನ್ನು ತೆರೆಯುವುದು, ಸಂಘದ ಸಿಬ್ಬಂದಿಗಳಿಗೆ ವ್ಯವಹಾರ, ವೃತ್ತಿ ಕೌಶಲ್ಯ ತರಬೇತಿ ನೀಡುವ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಕೃಷ್ಣ ಪೂಜಾರಿ,ಶೇಖರ ಪೂಜಾರಿ, ಮಂಜು ಪೂಜಾರಿ, ಶ್ರೀನಿವಾಸ ಪೂಜಾರಿ,ನಾರಾಯಣ ಪೂಜಾರಿ, ರಘು ಪೂಜಾರಿ, ಶ್ರೀಮತಿ ಜಯಪದ್ಮಾ ಶ್ರೀಮತಿ ಸರೋಜ ಜಿ., ಹಾಗೂ ಮೂರ್ತೆದಾರರ ಮಹಾ ಮಂಡಳದ ನಿರ್ದೇಶಕರಾದ ಮಂಜು ಪೂಜಾರಿ ಉಪಸ್ಥಿತರಿದ್ದರು.

ಪ್ರತಿಭಾ ಪುರಸ್ಕಾರ: 2024-25ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ 95%ಕ್ಕಿಂತ ಅಧಿಕ ಅಂಕ ಗಳಿಸಿದ ಸದಸ್ಯರ ಸದಸ್ಯರ ಮಕ್ಕಳಾದ ಚಿತ್ತಾರ, ನಿಶ್ಚಿತಾ ಜಿ., ಹರ್ಷಿತಾ ಎಸ್.ಪೂಜಾರಿ, ರತ್ವಿಕ್, ವರ್ಷಾ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಾದ ಸುಮಿತ್ ಮರವಂತೆ, ಮೈತ್ರಿ ಬಡಾಕೆರೆ, ಜ್ಯೋತಿ ಬಡಾಕೆರೆ, ಭಾರ್ಗವ್ ಬಡಾಕೆರೆ ಇವರನ್ನು ಸನ್ಮಾನಿಸಲಾಯಿತು.

ಆರ್.ಡಿ ಸೌಲಭ್ಯ: ಸದಸ್ಯರು ಹಣವನ್ನು ಉಳಿತಾಯ ಮಾಡಲು ಸಂಘದ ಆರ್.ಡಿ ಸೌಲಭ್ಯವನ್ನು ಬಳಿಸಿಕೊಳ್ಳಬಹುದು. ಮುಂದಿನ ಭವಿಷ್ಯದ ದೃಷ್ಟಿಯಿಂದ ಉಳಿತಾಯ ಮನೋಭಾವನೆ ಬೆಳೆಸಿಕೊಳ್ಳಬೇಕು. ಯಾರೂ ಬೇಕಾದರೂ ಹಣವನ್ನು ಪಾವತಿಸಬಹುದು. ತಕ್ಷಣ ಖಾತೆದಾರರಿಗೆ ಸಂದೇಶ ಬರುತ್ತದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದರು.

ಮರದಿಂದ ಬಿದ್ದು ಚಿಕಿತ್ಸೆ ಪಡೆಯುತ್ತಿರುವ ಸಂಘದ ಉಪಾಧ್ಯಕ್ಷರಾದ ನರಸಿಂಹ ಪೂಜಾರಿ ಹಕ್ಲಾಡಿ ಅವರಿಗೆ ಕಿರು ಆರ್ಥಿಕ ನೆರವು ನೀಡಲಾಯಿತು.

ಸಂಘದ ಸಿಬ್ಬಂದಿ ರಮೇಶ ಸಭೆಯ ತಿಳುವಳಿಕೆ ಪತ್ರ ವಾಚಿಸಿದರು. ಸಿಬ್ಬಂದಿ ನಾಗರಾಜ ಸ್ವಾಗತಿಸಿ, ವಂದಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!