spot_img
Monday, March 16, 2026
spot_img

ಕೋಟ ಪಡುಕೆರೆ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ

ಕೋಟ: ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಟ-ಪಡುಕರೆ ಇಲ್ಲಿ ಎಸ್ ಆರ್ ರಂಗನಾಥ ಅವರ ಜನ್ಮದಿನಾಚರಣೆಯ ನಿಮಿತ್ತ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸರಕಾರಿ ಪ್ರೌಢಶಾಲೆ ಮಣೂರು ಇಲ್ಲಿನ ಹಿರಿಯ ಕನ್ನಡ ಭಾಷಾ ಶಿಕ್ಷಕ ರಾಮದಾಸ ಬಿ ನಾಯಕ ಅವರು, ಪುಸ್ತಕ ಓದಿ ಪ್ರಜ್ಷಾವಂತರಾಗಿ, ಇವತ್ತು ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗೃತೆಯನ್ನು ಸಾಧಿಸುವುದು ಒಂದು ಸವಾಲಾಗಿದೆ. ಪುಸ್ತಕದ ಜಗತ್ತಿನಲ್ಲಿ ಅಪಾರವಾದ ಜ್ಷಾನ ವಿದೆ ಅದನ್ನು ಪಡೆದುಕೊಳ್ಳುವತ್ತ ವಿದ್ಯಾರ್ಥಿಗಳು ಮನಸು ಮಾಡಬೇಕು ಎಂಬುದಾಗಿ ತಿಳಿಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ರಾಜೇಂದ್ರ ಎಸ್ ನಾಯಕ ವಹಿಸಿದ್ದರು. ಗ್ರಂಥಪಾಲಕಿ ರಾಧ ಕೆ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ವಿದ್ಯಾರ್ಥಿಕ್ಷೇಮಪಾಲನಾಧಿಕಾರಿಗಳಾದ ಡಾ.ರಮೇಶ್ ಆಚಾರ್ ಹಾಗೂ ಐ .ಕ್ಯೂ.ಎ.ಸಿ ಸಂಚಾಲಕರಾದ ಡಾ.ಸುಬ್ರಮಣ್ಯ ಎ ಉಪಸ್ಥಿತರಿದ್ದರು.

ಅಂತಿಮ ಬಿ.ಕಾಂ ವಿದ್ಯಾರ್ಥಿನಿ ರಕ್ಷಾ ಸ್ವಾಗತಿಸಿ, ದ್ವಿತೀಯ ಬಿಸಿ‌ಎ ವಿದ್ಯಾರ್ಥಿನಿ ತ್ರಿಷಾ ವಂದಿಸಿದರು .ಶ್ರದ್ದಾ ಅಂತಿಮ ಬಿ.ಕಾಂ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!