spot_img
Monday, March 16, 2026
spot_img

ಸರಕಾರಿ ಪ್ರೌಢ ಶಾಲೆ ಹೆಸ್ಕತ್ತೂರು: ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ

ಕುಂದಾಪುರ : ಸರಕಾರಿ ಪ್ರೌಢ ಶಾಲೆ ಹೆಸ್ಕತ್ತೂರು ಇಲ್ಲಿ 79 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ* ಯನ್ನು ಆಚರಿಸಲಾಯಿತು.

ನೂತನವಾಗಿ ಆಯ್ಕೆಗೊಂಡ SDMC ಯ ಅಧ್ಯಕ್ಷ ಪುರುಷೋತ್ತಮ ಇವರು ಧ್ವಜಾರೋಹಣ ಗೈದು ಶುಭಾಶಯಗಳನ್ನು ಕೋರಿದರು.

ಮುಖ್ಯ ಅತಿಥಿಗಳಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ KN ಚಂದ್ರಶೇಖರ್ ಭಾಗವಹಿಸಿ, ದೇಶದ ಉನ್ನತಿಗಾಗಿ ಸಾಂಘಿಕವಾಗಿ ಯುವ ಜನತೆ ದುಡಿಯಬೇಕಾಗಿದೆ ಎಂದು ಕರೆ ಕೊಟ್ಟರು. ಕೊರ್ಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪಲ್ಲವಿ, ಪಂಚಾಯತ್ ಸದಸ್ಯರಾದ ರಾಘವೇಂದ್ರ ಶೆಟ್ಟಿ, SDMC ಯ ಸದಸ್ಯರಾದ ಐರೋಡಿ ಮಂಜುನಾಥ ಕುಲಾಲ, ಕೃಷ್ಣ ಕೆದಿಲಾಯ, ರಾಜೇಶ್ ಐತಾಳ್, ಮಾಜಿ ಪಂಚಾಯತ್ ಸದಸ್ಯ ರವೀಂದ್ರ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.

ಆಂಗ್ಲ ಭಾಷೆ ಶಿಕ್ಷಕ ಗೋಪಾಲ ಸೋಮಯಾಜಿ ನಿರ್ವಹಿಸಿ, ಮುಖ್ಯ ಶಿಕ್ಷಕ ಅಬ್ದುಲ್ ರವೂಫ್ ಸ್ವಾಗತಿಸಿ, ಗಣಿತ ಶಿಕ್ಷಕ ಉದಯ್ ಕುಮಾರ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಎಲ್ಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕ ಶಮಂತ್ ವಿದ್ಯಾರ್ಥಿ ತಂಡವನ್ನು ಮುನ್ನಡೆಸಿದನು. ದೈಹಿಕ ಶಿಕ್ಷಣ ಶಿಕ್ಷಕ ಜಯ ಪ್ರಸಾದ್ ಶೆಟ್ಟಿ ಹಾಗೂ ಚಿತ್ರ ಕಲಾ ಶಿಕ್ಷಕ ಸುಂದರ್ ತೋಡಾರ್ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!