spot_img
Sunday, March 15, 2026
spot_img

ಸಿರಿಬಾಗಿಲು ಪ್ರತಿಷ್ಠಾನ: ಭಜನೆ- ಹರಿಸಂಕೀರ್ತನೆ- ಗಮಕ ತಾಳಮದ್ದಳೆ

ಸಿರಿಬಾಗಿಲು : ಇದೇ ಆಗಸ್ಟ್ ತಿಂಗಳ 15 ,16 ,17 ನೇ ತಾರೀಕಿನಂದು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಕಲೆ- ಸಂಸ್ಕೃತಿ- ಸಾಹಿತ್ಯ ಉಳಿಸುವ, ಬೆಳೆಸುವ ,ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಯೋಜನೆಯಂತೆ ಭಜನೆ- ಹರಿಸಂಕೀತನೆ- ಗಮಕ -ಹವ್ಯಾಸಿ ತಂಡಗಳ ಯಕ್ಷಗಾನ ತಾಳಮದ್ದಳೆಗಳು, ವಿದ್ಯಾರ್ಥಿ ಸಮಾಗಮ ಜರಗಲಿದೆ.
ದಿನಾಂಕ 15 ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಾಡಿನ ವಿವಿಧ ಭಜನಾ ತಂಡಗಳ ಭಜನಾ ಕಾರ್ಯಕ್ರಮ, ತದನಂತರ ಹರಿಸಂಕೀರ್ತನೆಯು ನಡೆಯಲಿದೆ. ಅದೇ ದಿನ ದೂರದ ಕುಂದಾಪುರದ  ಶ್ರೀ ನಾದೋಪಾಸನ  ಸಮೂಹ ,ಕೋಟೇಶ್ವರ ಇವರ ಪಾಲ್ಗೊಳ್ಳುವಿಕೆ ಮೆರಗು ನೀಡಲಿದೆ.ದಿನಾಂಕ 16 ,17 ರಂದು ಬೆಳಿಗ್ಗೆ 10 ಗಂಟೆಯಿಂದ ರಾತ್ರಿಯವರೆಗೆ  ಹವ್ಯಾಸಿ ಯಕ್ಷಗಾನ ಕಲಾವಿದರ ಒಟ್ಟು 9 ತಂಡಗಳ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಜತೆಗೆ      16 ರಂದು ವಿಶೇಷವಾಗಿ 12-00  ಗಂಟೆಗೆ :ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜ್ ಉಜಿರೆ  ಗ್ರೇಡ್ ಎ‌.+.+ಗ್ರೇಡ್ ಉಜಿರೆ – ವಿದ್ಯಾರ್ಥಿಗಳಿಗೆ – ಯಕ್ಷಗಾನ ಕುರಿತಾದ ಉಪನ್ಯಾಸ- ಪ್ರಾತ್ಯಕ್ಷಿಕೆ – ಸಂವಾದವು  ತೆಂಕುತಿಟ್ಟು ಯಕ್ಷಗಾನ ಶಾಸ್ತ್ರೀಯ ನಾಟ್ಯ ಗುರುಗಳಾದ ಕರ್ಗಲ್ಲು  ವಿಶ್ವೇಶ್ವರ ಭಟ್ ರವರಿಂದ ನಡೆಲಿದೆ.
17 ರಂದು ಮಧ್ಯಾಹ್ನ 2 ಗಂಟೆಗೆ ಗಮಕ ಶ್ರಾವಣ ಕಾರ್ಯಕ್ರಮ ವನ್ನು  ಕರ್ನಾಟಕ ಗಮಕ ಪರಿಷತ್ತು ಬೆಂಗಳೂರು, ಕೇರಳ ಗಡಿನಾಡ ಘಟಕ ಕಾಸರಗೋಡು ಇವರಿಂದ ನಡೆಯಲಿದೆ.
 ಈ ಕಾರ್ಯಕ್ರಮವನ್ನು 16 ರಂದು ಬೆಳಿಗ್ಗೆ ಬ್ರಹ್ಮಶ್ರೀ ಗಣಾದಿರಾಜ ಉಪಾಧ್ಯಾಯ ಕೊಲ್ಲಂಗಾನ ಇವರು ದೀಪಪ್ರಜ್ವಲನೆ ಮೂಲಕ ಉಧ್ಘಾಟಿಸಲಿದ್ದಾರೆ.ಹವ್ಯಾಸಿ ಯಕ್ಷಗಾನ ಕಲಾವಿದ ,ಸಂಘಟಕ   ಗಣೇಶ್ ಭಟ್ ಬಾಯಾರು, ಪುಳ್ಕೂರು ಮಹಾದೇವ ದೇವಸ್ಥಾನ ದ ಆಡಳಿತ ಸಮಿತಿಯ ಅಧ್ಯಕ್ಷರಾದ  ಶೀನ ಶೆಟ್ಟಿ ಕಜೆ ಇವರು  ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದಾರೆ.. 17ರಂದು ಮದ್ಯಾಹ್ನ 2 ಗಂಟೆಗೆ  ವಿಶೇಷವಾಗಿ ಗಮಕ ಕಾರ್ಯಕ್ರಮವಿರುತ್ತದೆ. ಈ ಕಾರ್ಯಕ್ರಮದ ಸಮಾರೋಪವು 17ನೇ ತಾರೀಕು 4:00ಗೆ ನಡೆಯಲಿದೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೋಕ್ಥೇಸರರಾದ ಕೆ ಜಿ. ಶ್ಯಾನುಭೋಗ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರಿನ ಹಿರಿಯ ವಕೀಲರು ,ಯಕ್ಷಗಾನ ಸಂಘಟಕರು, ಕಲಾವಿದರು ಆಗಿರುವಂತಹ  ಸಂತೋಷ್ ಐತಾಳ್ ಪಣಂಬೂರು ಹಾಗೂ ಸತತ 48 ವರ್ಷಗಳಿಂದ ಶ್ರೀ ಧರ್ಮಸ್ಥಳ ಮೇಳದ ಹರಿಕೆಯಾಟವನ್ನು ಮಾನ್ಯದಲ್ಲಿ ನಡೆಸುತ್ತಿರುವ  ರವಿಶಂಕರ್ ಮಾನ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಬೇಕೆಂದು ಸಿರಿಬಾಗಿಲು ಪ್ರತಿಷ್ಠಾನವು ಪ್ರಕಟಣೆ ಮೂಲಕ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!