spot_img
Sunday, April 5, 2026
spot_img

ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರ: 17 ಕುಸ್ತಿಪಟುಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಿರಿಮಂಜೇಶ್ವರ: ಆಗಸ್ಟ್ 8ರಂದು ಶಾಲಾ ಶಿಕ್ಷಣ ಇಲಾಖೆ ಹಾಗೂ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರ ಇವರ ಆತಿಥ್ಯದಲ್ಲಿ ಬೈಂದೂರು ವಲಯ ಮಟ್ಟದ ಕುಸ್ತಿ ಪಂದ್ಯಾಟವು ಹೆಮ್ಮಾಡಿಯಲ್ಲಿ ನಡೆಯಿತು. ಈ ಕುಸ್ತಿ ಪಂದ್ಯಾಟದಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ 17 ಕುಸ್ತಿಪಟುಗಳು ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.

14ರ ವಯೋಮಾನದ ಹುಡುಗರ ವಿಭಾಗದಲ್ಲಿ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ವಿದ್ಯಾರ್ಥಿಗಳಾದ ನಿನಾದ್(8ನೇ ತರಗತಿ), ರಿಷಿಕ್(8ನೇ ತರಗತಿ), ಆನ್ಸ್ಟನ್( 8ನೇತರಗತಿ), ಆದಿತ್ಯ( 8ನೇ ತರಗತಿ), ಅಶ್ವಿನ್(7ನೇ ತರಗತಿ), ಅಭಿರಾಜ್ (7ನೇ ತರಗತಿ)ಮತ್ತು ರಯಾನ್ ಅಹಮದ್ ಖಾನ್(7ನೇ ತರಗತಿ)ಪ್ರಥಮ ಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

14ರ ವಯೋಮಾನದ ಹುಡುಗಿಯರ ವಿಭಾಗದಲ್ಲಿ ಸನ್ಮಿತಾ(8ನೇತರಗತಿ), ಸನ್ವಿತಾ (8ನೇತರಗತಿ) ಮತ್ತು ತಕ್ಷಾ (8ನೇತರಗತಿ) ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

17ರ ವಯೋಮಾನದ ಹುಡುಗರ ವಿಭಾಗದಲ್ಲಿ ಸ್ಕಂದ(9ನೇ ತರಗತಿ), ಸ್ವಸ್ತಿಕ್ (9ನೇ ತರಗತಿ) ಮತ್ತು
ಸೋಹನ್(8ನೇ ತರಗತಿ) ಪ್ರಥಮ ಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

17ರ ವಯೋಮಾನದ ಹುಡುಗಿಯರ ವಿಭಾಗದಲ್ಲಿ ಸಪ್ತಮಿ (9ನೇ ತರಗತಿ), ನಿರೀಕ್ಷಾ(9ನೇ ತರಗತಿ), ಸಾನ್ವಿ(9ನೇ ತರಗತಿ) ಮತ್ತು ಅಪೇಕ್ಷಾ(8ನೇ ತರಗತಿ) ಪ್ರಥಮ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!